Advertisement

ಜೆಡಿಎಸ್‌ ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷಗಿರಿ ಪಟ್ಟ 

06:20 AM Jun 26, 2018 | Team Udayavani |

ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಆಕಾಂಕ್ಷಿಗಳಾಗಿದ್ದ ಜೆಡಿಎಸ್‌ ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷಗಿರಿ ನೀಡಿ ಸಮಾಧಾನಪಡಿಸಲು ಪಟ್ಟಿ ಸಿದ್ಧಪಡಿಸಲಾಗಿದೆ.

Advertisement

ಮೊದಲ ಹಂತದಲ್ಲಿ ನೇಮಕಗೊಳ್ಳುವ ನಿಗಮ-ಮಂಡಳಿಗಳ ಅಧ್ಯಕ್ಷ-ಉಪಾಧ್ಯಕ್ಷರ ಕೋಟಾದಡಿಜೆಡಿಎಸ್‌ಗೆ ಹತ್ತು ಸ್ಥಾನ ಲಭಿಸಲಿದ್ದು ಆ ಪೈಕಿ ಏಳು ಶಾಸಕರಿಗೆ ಉಳಿದ ಮೂರು ಮಾಜಿ ಶಾಸಕರು ಹಾಗೂ ಚುನಾವಣೆಯಲ್ಲಿ ಸೋತ ಪಕ್ಷ ಸಂಘಟನೆಗೆ ಶಕ್ತಿ ತುಂಬಿರುವವರನ್ನು ನೇಮಿಸಲು ತೀರ್ಮಾನಿಸಲಾಗಿದೆ.

ಶಾಸಕರಲ್ಲಿ ಶ್ರೀರಂಗಪಟ್ಟಣದ ರವೀಂದ್ರ ಶ್ರೀಕಂಠಯ್ಯ, ಅರಸೀಕೆರೆ ಶಿವಲಿಂಗೇಗೌಡ,ತುಮಕೂರು ಗ್ರಾಮಾಂತರದ ಗೌರಿಶಂಕರ್‌,ಶಿರಾ ಸತ್ಯನಾರಾಯಣ, ಕೋಲಾರ ಶ್ರೀನಿವಾಸಗೌಡ, ಮಾನ್ವಿಯ ರಾಜಾ ವೆಂಕಟಪ್ಪ ನಾಯಕ್‌ ಅವರ ಹೆಸರು ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ಕೇಳಿಬರುತ್ತಿವೆ.

ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ರಾಜ್ಯ ಮಟ್ಟದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಹಿರಿಯ ಶಾಸಕರಿಗೆ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.

ಇನ್ನು, ಚುನಾವಣೆಯಲ್ಲಿ ಸೋಲು ಅನುಭವಿಸಿರುವ ವೈ.ಎಸ್‌.ವಿ.ದತ್ತಾ, ರಮೇಶ್‌ಬಾಬು, ಮಧು ಬಂಗಾರಪ್ಪ,
ಸುರೇಶ್‌ಬಾಬು, ಆನಂದ್‌ ಆಸ್ನೋಟಿಕರ್‌, ಜಿ.ಕೆ.ವೆಂಕಟಶಿವಾರೆಡ್ಡಿ,ಬಿ.ಬಿ.ನಿಂಗಯ್ಯ, ಕೋನರೆಡ್ಡಿ ಅವರಿಗೂ ರಾಜಕೀಯ ಸ್ಥಾನಮಾನ ಕಲ್ಪಿಸಬೇಕು ಎಂದು ಒತ್ತಾಯವೂ ಇದೆ. ಆ ಪೈಕಿ ಕೋನರೆಡ್ಡಿ ಹಾಗೂ ಮಧು ಬಂಗಾರಪ್ಪ ಅವರನ್ನು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಗಳಾಗಿ ನೇಮಕ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

Advertisement

ಈ ಮಧ್ಯೆ, ನಿಗಮ ಮಂಡಳಿ ನೇಮಕಹಾಗೂ ಪಕ್ಷ ಸಂಘಟನೆ ಕುರಿತು ಚರ್ಚಿಸಲು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಮಂಗಳವಾರ ಪಿ.ಜಿ.ಆರ್‌.ಸಿಂಧ್ಯಾ, ಎಚ್‌.ಸಿ.ನೀರಾವರಿ, ಮಧು ಬಂಗಾರಪ್ಪ, ವೈ.ಎಸ್‌.ವಿ.ದತ್ತಾ, ರಮೇಶ್‌ಬಾಬು,ಕುಪೇಂದ್ರರೆಡ್ಡಿ, ಟಿ.ಎ.ಶರವಣ ಸೇರಿದಂತೆ ಪ್ರ ಮುಖ ನಾಯಕರ ಸಭೆಯನ್ನು ಪಕ್ಷದ ಕಚೇರಿಯಲ್ಲಿ ಕರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next