ಮಂಡ್ಯ: ಜಿಪಂನೊಳಗೆ ಸ್ವಪಕ್ಷೀಯ ಅಧ್ಯಕ್ಷರು-ಸದಸ್ಯರ ಜಟಾಪಟಿ ಅಂತ್ಯಗೊಂಡಿಲ್ಲ. ಹಿಂದಿನ 3 ಸಭೆಗಳು ಸ್ವಪಕ್ಷೀಯ ಸದಸ್ಯರ ಅಸಹಕಾರದ ಪರಿಣಾಮ ಕೋರಂ ಅಭಾವ ಸೃಷ್ಟಿಯಾಗಿ ಮುಂದೂಡಿದ್ದವು. ಬುಧವಾರ ಕರೆದಿದ್ದ ಐದನೇ ಸಭೆಯೂ ಅಧ್ಯಕ್ಷರ ಅಧಿಕಾರದಾಸೆ, ಆಡಳಿತಾರೂಢ ಸದಸ್ಯರ ಸ್ವಪ್ರತಿ ಷ್ಠೆಗೆ ಮತ್ತೂಮ್ಮೆ ಬಲಿಯಾಯಿತು. ಆಡಳಿತರೂಢ ಜೆಡಿಎಸ್ ಸದಸ್ಯರು ಜಿಪಂಗೆ ಆಗಮಿಸಿದ್ದರೂ ಸಭೆಗೆ ಹಾಜರಾಗಲಿಲ್ಲ.
ಉಪಾಧ್ಯ ಕ್ಷರ ಕೊಠಡಿಯಲ್ಲಿ ಕುಳಿತು ಚರ್ಚೆಯಲ್ಲಿ ತೊಡಗಿದ್ದರು. ಕಾಂಗ್ರೆಸ್, ಜೆಡಿಎಸ್‌ನ ಕೆಲವು ಸದಸ್ಯರು ಸಭೆಯಲ್ಲಿ ಹಾಜರಿದ್ದರು. ಸಭೆಯಲ್ಲಿದ್ದ ಪಕ್ಷೇತರ ಸದಸ್ಯ ಎನ್.ಶಿವಣ್ಣ ಮಾತನಾಡಿ, ಹಿಂದಿನ 3 ಸಭೆಗಳು ಕೋರಂ ಅಭಾವದಿಂದ ಮುಂದೂಡಲ್ಪಟ್ಟಿದ್ದರೆ, ಕೊರೊನಾ ಹಿನ್ನೆಲೆ ಯಲ್ಲಿ 1 ಸಭೆ ಮುಂದೂಡಿದೆ. ಈಗಲೂ ಸಭೆ ನಡೆ ಯದಿದ್ದರೆ ಪ್ರಜಾಪ್ರಭುತ್ವಕ್ಕೆ ನಾವು ಮಾಡುವ ಅವಮಾನ. ನಿಮ್ಮ ರಾಜಕಾರಣವನ್ನು ಜಿಪಂನಿಂಧ ಹೊರಗಿಟ್ಟು, 9 ತಿಂಗಳಿಂದ ನಿಂತ ನೀರಾಗಿರುವ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ. ಇಲ್ಲದಿ ದ್ದರೆ ಜನಪ್ರತಿನಿಧಿಗಳಾಗಿ ಜನರಿಗೆ ಮುಖ ತೋರಿಸುವ ಅವರ ಪ್ರಶ್ನೆಗೆ ಉತ್ತರಿಸುವ ಯೋಗ್ಯತೆಯೂ ನಮಗಿರುವುದಿಲ್ಲ ಎಂದರು.
ಸಭೆಗೆ ಹಾಜರಾಗಲು ಸದಸ್ಯರಿಗೆ ನೋಟಿಸ್ ನೀಡಲಾಗಿದೆ. ಜನಸಾಮಾನ್ಯರ ಹಿತದೃಷ್ಟಿಯಿಂದ ಸಭೆಗೆ ಹಾಜರಾಗುವುದು ಅವರ ಕರ್ತವ್ಯ. ಸಭೆಯಿಂ ದ ಅವರೇ ಹೊರಗುಳಿದರೆ ನಾನೇನು ಮಾಡಲಿ ಎಂದು ಅಧ್ಯಕ್ಷೆ ನಾಗರತ್ನ ಸ್ವಾಮಿ ಪ್ರಶ್ನಿಸಿದರು. ಸದಸ್ಯ ಎನ್.ಶಿವಣ್ಣ, ನಮಗಿರುವುದು 8 ತಿಂಗಳು ಮಾತ್ರ. ನಾವು ಬೇಜವಾಬ್ದಾರಿತನ ಪ್ರದರ್ಶಿಸಿದರೆ ಅಭಿವೃದ್ಧಿ ಹಿನ್ನಡೆಗೆ ನಾವೇ ಹೊಣೆಗಾರರಾಗುತ್ತೇವೆ. ನಾನೇ ಒಮ್ಮೆ ಅವರೊಡನೆ ಮಾತನಾಡುವುದಾಗಿ ಹೇಳಿ ಸಭೆಯಿಂದ ಹೊರನಡೆದರು.
ಅತೃಪ್ತರ ನೆಲೆಯಾಗಿದ್ದ ಉಪಾಧ್ಯಕ್ಷರ ಕೊಠಡಿ: ಉಪಾಧ್ಯಕ್ಷೆ ಗಾಯಿತ್ರಿ ರೇವಣ್ಣ ಕೊಠಡಿ ಅತೃಪ್ತ ಸ್ವಪ ಕ್ಷೀಯ ಸದಸ್ಯರ ನೆಲೆಯಾಗಿ ರೂಪಾಂತರಗೊಂಡಿತ್ತು. ಜೆಡಿಎಸ್‌ನ ಬಹುತೇಕ ಸದಸ್ಯರು ಸಿ. ಅಶೋಕ್, ಎಚ್.ಎಸ್.ಮಂಜು, ಎಚ್.ಎನ್. ಯೋಗೇಶ್ ನೇತೃತ್ವದಲ್ಲಿ ಜಮಾವಣೆಗೊಂಡಿದ್ದರು. ಇವರೊಂದಿಗೆ ವಿರೋಧಪಕ್ಷದ ಮಾಜಿ ಅಧ್ಯಕ್ಷ ಹನುಮಂತು ಇದ್ದದ್ದು ವಿಶೇಷವಾಗಿತ್ತು. ಅತೃಪ್ತರಿದ್ದ ಸ್ಥಳಕ್ಕೆ ಬಂದ ಎನ್.ಶಿವಣ್ಣ, ಸಭೆಗೆ ಎಲ್ಲರೂ ಸಹಕರಿಸಿ. ಜಿಪಂಗೆ ಎದುರಾಗಿರುವ ದುಸ್ಥಿತಿ ಹಿಂದಿನ ಯಾವ ಸಮಯದಲ್ಲೂ ಇರಲಿಲ್ಲ. ರಾಜಕಾರಣ ಬಿಟ್ಟು ಅಭಿವೃದ್ಧಿಯನ್ನು ಗುರಿಯಾಗಿಸಿ ಕೊಂಡು ಸಹಕರಿಸುವಂತೆ ಮನವಿ ಮಾಡಿದರು.
ಸಭೆಯಲ್ಲೇ ಚರ್ಚಿಸಿ: ಸದಸ್ಯರಾದ ಸಿ.ಅಶೋಕ್, ಎಚ್.ಎನ್.ಯೋಗೇಶ್ ಮಾತನಾಡಿ, ಅಧ್ಯಕ್ಷರು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೀರಾ. ಸಭೆಗೆ ಹಾಜರಾಗುವಂತೆ ಮನವಿ ಮಾಡಿದ್ದಾರಾ. ನಾವಿಲ್ಲದೆ ಅವರೊಬ್ಬರೇ ಅಧ್ಯಕ್ಷರಾಗಿಬಿಟ್ಟರಾ. ನೀರಿಗೆ ಅನುದಾನ ಬಂತಲ್ಲ, ನಮ್ಮೊಂದಿಗೆ ಚರ್ಚಿಸುವ ಸೌಜನ್ಯವಿಲ್ಲ. ಹಾಗಾದರೆ ನಾವು ಅಧ್ಯಕ್ಷರಿಗೆ ಬೇಡವೇ ಎಂದು ಪ್ರಶ್ನಿಸಿದರು. ಈ ವಿಷಯವನ್ನು ಸಭೆಯಲ್ಲೇ ಚರ್ಚೆ ಮಾಡೋಣ ಬನ್ನಿ. ನಿಮ್ಮೊಂದಿಗೆ ನಾನೂ ದನಿಗೂಡಿಸುತ್ತೇನೆ. ಅನ್ಯಾಯದ ವಿರುದ್ಧ ಪ್ರಶ್ನಿಸುವುದಕ್ಕೆ ಹಿಂಜರಿಕೆ ಏಕೆ ಎಂದು ಎನ್.ಶಿವಣ್ಣ ಪ್ರಶ್ನಿಸಿದರು.
ಅಧ್ಯ ಕ್ಷರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಭರವಸೆ ನೀಡಿದರೆ ನಾವು ಸಭೆಗೆ ಬರುವು ದಾಗಿ ಅತೃಪ್ತ ಸದಸ್ಯರು ಸ್ಪಷ್ಟಪಡಿಸಿದರು. ಅಲ್ಲಿಂದ ಅಧ್ಯಕ್ಷರ ಬಳಿ ಬಂದ ಸದಸ್ಯ ಎನ್.ಶಿವಣ್ಣ, ಸಭೆಯಿಂ ದ ಹೊರಗುಳಿದಿರುವ ಸದಸ್ಯರು ಸಭೆಗೆ ಬರುವು ದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ನೀವು ಅವರ ಬಳಿ ಹೋಗಿ ಸಮಾಧಾನ ಮಾಡಿ ಕರೆದುಕೊಂಡು ಬನ್ನಿ. ಮುಂದಾದರೂ ಸಾಮಾನ್ಯಸಭೆ ಅರ್ಥಪೂರ್ಣ ವಾಗಿ ನಡೆಯಲಿ ಎಂದು ಮನವೊಲಿಸಿದರು. ಎನ್.ಶಿವಣ್ಣನವರ ಹಿರಿತನಕ್ಕೆ ಮಣಿದು ಅಧ್ಯಕ್ಷೆ ನಾಗರತ್ನ ಸ್ವಾಮಿ ಅವರು ಅತೃಪ್ತ ಸದಸ್ಯರನ್ನು ಕರೆತರಲು ಉಪಾಧ್ಯಕ್ಷರ ಕೊಠಡಿಗೆ ತೆರಳಿದರು. ಬಾಗಿಲ ಬಳಿ ಬಂದ ಅಧ್ಯಕ್ಷೆ, ಎಲ್ಲರೂ ಸಭೆಗೆ ಬಂದು ಸಹಕರಿಸುವಂತೆ ಮನವಿ ಮಾಡಿದರು