Advertisement
ರುದ್ರಾಕ್ಷಿ ಹಲಸು, ಹರಿಶಿಣ, ಕೆಂಪು ವರ್ಣದ ಹಲಸು, ಜಾಣಗೆರೆ, ಚಂದ್ರ ಹಲಸು, ಶಿವಮೊಗ್ಗ ಹಳದಿ, ಮೇಣರಹಿತ ಹಲಸು, ಶಿಡ್ಲಘಟ್ಟ, ಸಿಂಗಾಪುರ್, ಮದ್ದೂರ್ ಬಿಳಿ, ಲಾಲ್‌ಬಾಗ್, ಮಂಕಳಲೆ ಚಂದ್ರ ಹಲಸು, ಸುವರ್ಣಋತು ಹಲಸು, ಸದಾನಂದ, ಲಾಲ್‌ಬಾಗ್ ಮಧುರ, ತೂಬುಗೆರೆ ಚಂದ್ರಬುಕ್ಕೆ, ಚಂದ್ರ, ಹೇಮ ಚಂದ್ರ ಹಲಸು ಹೀಗೆ, ಹಲಸಿನ ತಳಿಯಲ್ಲೂ ಹಲವು ವಿಧಗಳಿವೆ. ಇವುಗಳಲ್ಲಿ ಬಹುತೇಕ ತಳಿಗಳನ್ನು ಇಲ್ಲಿ ಬೆಳೆಯುತ್ತಾರೆ. ಈ ಭಾಗದಲ್ಲಿ ರೈತರು ಹಲಸನ್ನು ಮಿಶ್ರ ಅಥವಾ ಬದುವಿನ ಬೆಳೆಯಾಗಿ ಬೆಳೆಯುತ್ತಾರೆ. ಇಲ್ಲಿ ಯಾವುದೇ ರಾಸಾಯನಿಕಗಳನ್ನು ಉಪಯೋಗಿಸದೆ ಬೆಳೆಸುವುದರಿಂದ ಬೇಡಿಕೆ ಹೆಚ್ಚಿಗೆ ಇದೇ ಎನ್ನುತ್ತಾರೆ ರೈತ ದೊಡ್ಡನೆಟ್ಟಕುಂಟ ಡಿ.ರಾಜೇಶ್.
ರೈತರು ಒಂದು ಹೆಕ್ಟೇರಿನಲ್ಲಿ ಅಂದಾಜು 100 ಮರಗಳನ್ನು ಬೆಳೆಸಬಹುದು. ಇವು ನಾಲ್ಕು ಅಥವಾ ಐದು ವರ್ಷಗಳಲ್ಲಿ ಕಾಯಿ ಬಿಡಲು ಪ್ರಾರಂಭಿಸುತ್ತದೆ. ಕಸಿ ಮಾಡಿದ ಸಸಿಗಳಾದರೆ 3 ವರ್ಷಕ್ಕೆ ಕಾಯಿ ಬಿಡುತ್ತವೆ.
10 ವರ್ಷ ವಯಸ್ಸಾದ ಮರವು ಸುಮಾರು 100 ರಿಂದ 150 ಕಾಯಿಗಳನ್ನು ಬಿಡುತ್ತದೆ. ಒಂದು ಕಾಯಿಗೆ 100ರೂ. ಸಿಕ್ಕರೂ ಲಾಭವೋ ಲಾಭ. ಹಲಸು, ಬಹುಬಳಕೆಯ ಹಣ್ಣು. ಇದರ ಚಿಪ್ಸ್‌ಗೆ ಹೆಚ್ಚು ಬೇಡಿಕೆ ಇದೆ. ಒಂದು ಕೆಜಿ ಚಿಪ್ಸ್ ಗೆ 400 ರೂ. ಬೆಲೆ ಇದೆ. ನಾವು ಮಾಡುವ ಹಪ್ಪಳ ಮತ್ತು ಚಿಪ್ಸ್ ಅನ್ನು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತೇವೆ ಎನ್ನುತ್ತಾರೆ ಸಾವಯವ ಕೃಷಿ ಮಾಡುತ್ತಿರುವ ಅಮ್ಮನಘಟ್ಟದ ಮಂಜುಳ.
Related Articles
Advertisement