Advertisement
2014ರಲ್ಲಿಸಲ್ಫರ್ ಘಟಕ ಪ್ರಾರಂಭವಾದ ಬಳಿಕ ಕಳೆದ 4 ವರ್ಷಗಳಿಂದ ಹಾರು ಬೂದಿ ಸಮಸ್ಯೆಯಿಂದಾಗಿ ನೆಮ್ಮದಿ ಕಳೆದುಕೊಂಡಿದ್ದೇವೆ. ಇಲ್ಲಿನ ಪರಿಸರ ಮಾಲಿನ್ಯವಾಗಿದ್ದು, ಹಲವು ರೀತಿಯ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಕುಡಿಯಲು ಶುದ್ಧ ನೀರು ಸಿಗದಂತಾಗಿದೆ ಎನ್ನುತ್ತಾರೆ ಸ್ಥಳೀಯರಾದ ಹಕೀಮ್.
ಗ್ರಾಮಸ್ಥರ ಹೋರಾಟಕ್ಕೆ ಮಣಿದು ಘಟಕದ ಸುತ್ತಲೂ ಸುಮಾರು 27 ಎಕರೆ ವ್ಯಾಪ್ತಿಯಲ್ಲಿ ಹಸಿರು ವಲಯ ನಿರ್ಮಾಣಕ್ಕೆ ಎಂಆರ್‌ಪಿಎಲ್ ಮುಂದಾಗಿದೆ. ಸರಕಾರವೂ ಒಪ್ಪಿಗೆ ಸೂಚಿಸಿದ್ದು, ಅದಕ್ಕೆ ಚಾಲನೆ ನೀಡಲಾಗಿದೆ. ಶಬ್ದ, ವಾಯು ಹಾಗೂ ಮಣ್ಣು ಮಾಲಿನ್ಯ ತಡೆಗೂ ಸಂಸ್ಥೆ ಇದೇ ರೀತಿ ಕ್ರಮಕ್ಕೆ ಮುಂದಾಗಬೇಕು ಎಂಬುದು ಸ್ಥಳೀಯರ ಆಗ್ರಹ.