Advertisement

ಜಕನಾಳ ಶಾಲೆ ಕಟ್ಟಡ ನಿರುಪಯುಕ್ತ

12:15 PM Oct 10, 2018 | |

ಔರಾದ: ಜಕನಾಳ ಗ್ರಾಮದಲ್ಲಿ 2008-9ನೇ ಸಾಲಿನಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಕಿರಿಯ ಪ್ರಾಥಮಿಕ ಶಾಲೆ ಕಟ್ಟಡ ಈಗ ಶಾಲೆಯಾಗಿ ಉಳಿದಿಲ್ಲ. ಬದಲಾಗಿ ಗುತ್ತಿಗೆದಾರರಿಗೆ ಸಿಮೆಂಟ್‌ ಚೀಲ ಸಂಗ್ರಹಿಸುವ ಗೋದಾಮು, ಕೂಲಿ ಕಾರ್ಮಿಕರಿಗೆ ವಾಸಸ್ಥಾನವಾಗಿ ಪರಿಣಮಿಸಿದೆ! ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಬೇಂಬ ಉದ್ದೇಶದಿಂದ ಸರ್ಕಾರ ಲಕ್ಷಾಂತರ ರೂ. ಖರ್ಚು ಮಾಡಿ ಹೊಸ ಕಟ್ಟಡ ನಿರ್ಮಿಸಲು ಮುಂದಾಗುತ್ತಿದೆ. ಆದರೆ ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಶಿಕ್ಷಕರ ಸ್ವಾರ್ಥದಿಂದಾಗಿ ಶಾಲೆಯ ಕಟ್ಟಡಗಳು ವಿದ್ಯಾರ್ಥಿಗಳ ಬೋಧನೆಗೆ ಸಹಕಾರಿಯಾಗದೆ ಹೀಗೆ ಅನ್ಯರ ಪಾಲಾಗುತ್ತಿವೆ.

Advertisement

ಜಕನಾಳ ಗ್ರಾಮದಲ್ಲಿ ನಿರ್ಮಿಸಲಾದ 1ರಿಂದ 5ನೇ ತರಗತಿಯ ಶಾಲಾ ಕಟ್ಟಡ ಇದಕ್ಕೆ ನಿದರ್ಶನವಾಗಿದೆ. ಈ ಶಾಲೆಯಲ್ಲಿ 90 ವಿದ್ಯಾರ್ಥಿಗಳ ದಾಖಲಾತಿಯಿದೆ. ಗ್ರಾಮದಲ್ಲಿ ಎರಡು ಶಾಲೆಯ ಕಟ್ಟಡಗಳು ಅಕ್ಕಪಕ್ಕದಲ್ಲಿಯೆ ಇವೆ. ಐದು ತರಗತಿಗೂ ಇಬ್ಬರೇ ಶಿಕ್ಷರು ಬೋಧನೆ ಮಾಡುತ್ತಾರೆ.

ಗ್ರಾಮದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಸರ್ಕಾರ 2008-9ನೇ ಸಾಲಿನಲ್ಲಿ 5 ಲಕ್ಷ ರೂ. ಖರ್ಚು ಮಾಡಿ ಉತ್ತಮ ಕಟ್ಟಡ ನಿರ್ಮಿಸಿದೆ. ಆದರೆ ಶಿಕ್ಷಕರು ಹಳೆ ಕಟ್ಟಡದಲ್ಲಿಯೇ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಸಿ ರಸ್ತೆ ಹಾಗೂ ಸಣ್ಣ ಸೇತುವೆ ನಿರ್ಮಾಣ ಮಾಡಲು ಬಂದ ಗುತ್ತಿಗೇದಾರರು ತಮ್ಮ ಸಿಮೆಂಟ್‌ ಚೀಲಗಳನ್ನು ನೂತನ ಶಾಲಾ ಕಟ್ಟಡದಲ್ಲಿ ಸಂಗ್ರಹಿಸಿ ಇಟ್ಟಿದ್ದಾರೆ. ಅಲ್ಲದೇ ಕೂಲಿ ಕಾರ್ಮಿಕರು ಕೂಡ ನಿತ್ಯ ಶಾಲಾ
ಕಟ್ಟಡದಲ್ಲೇ ಜೀವನ ಸಾಗಿಸುತ್ತಿದ್ದಾರೆ.

ವಿಷಯ ಏನು?: ಜಕನಾಳ ಗ್ರಾಮದಲ್ಲಿ ಎರಡು ಶಾಲಾ ಕಟ್ಟಡಗಳು ಅಕ್ಕಪಕ್ಕದಲ್ಲಿಯೇ ಇವೆ. ಶಾಲೆಯ ಒಬ್ಬ ಶಿಕ್ಷಕ ವೀಠಲ ಘಾಟೆ ಸೇವೆಯಿಂದ ಅಮಾನತುಗೊಂಡ ಹಿನ್ನೆಲೆಯಲ್ಲಿ ಐದು ತರಗತಿಯ ವಿದ್ಯಾರ್ಥಿಗಳನ್ನು ಹಳೆ ಕಟ್ಟಡದ ಒಂದೇ ಕೋಣೆಯಲ್ಲಿ ಕೂಡಿಸಿ ಇಬ್ಬರು ಶಿಕ್ಷಕರು ಬೋಧನೆ ಮಾಡುತ್ತಿದ್ದಾರೆ. 

ಅಲ್ಲದೆ ಅದೇ ಕಟ್ಟಡಲ್ಲಿ ಬಿಸಿಯೂಟ, ಕ್ಷೀರಭ್ಯಾಗದ ಹಾಲು ನೀಡುತ್ತಿದ್ದಾರೆ ಎಂದು ಪಾಲಕರು ಆರೋಪಿಸಿದ್ದಾರೆ. ಈ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಹಾಗೂ ಈಭಾಗದ ಜನಪ್ರತಿನಿಧಿಗಳಿ ತಿಳಿಸಿ, ಮನವಿ ಮಾಡಿದರೂ ಸಮಸ್ಯೆ ಬಗೆಹರಿಸಲು ಒಬ್ಬರೂ ಮುಂದಾಗಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.

Advertisement

ಪಾಳು ಬಿದ್ದ ಶಾಲೆ: ಬೋಧನೆಗೆ ಬಳಕೆ ಮಾಡದಿರುವ ಹಿನ್ನೆಲೆಯಲ್ಲಿ ಶಾಲಾ ಕಟ್ಟಡದ ಸುತ್ತಮುತ್ತಲು ಮುಳ್ಳಿನ ಪೋದೆ ಬೆಳೆದಿದೆ. ಒಳಗೆ ಸಿಮೆಂಟ್‌ ಚೀಲಗಳನ್ನು ತುಂಬಲಾಗಿದೆ. ಕೂಲಿ ಕಾರ್ಮಿಕರು ಕೂಡ ವಾಸವಾಗಿದ್ದಾರೆ. ಅಲ್ಲದೇ ಇಲ್ಲಿ ನಿತ್ಯ ಮಧ್ಯಾಹ್ನ, ಸಂಜೆ ಜೂಜಾಟ, ರಾತ್ರಿ ಕುಡಿತ ಇಲ್ಲಿ ರಾಜಾರೋಷವಾಗಿ ನಡೆಯುತ್ತಿದೆ. ಹೀಗೆ 5 ಲಕ್ಷ
ರೂ. ಖರ್ಚು ಮಾಡಿ ನಿರ್ಮಿಸಿದ ವಿದ್ಯಾ ಮಂದಿರ ಹಾಳಾಗುತ್ತಿದೆ.

ನಿದ್ದೆಗೆ ಜಾರಿದ ಇಲಾಖೆ: ಶಿಕ್ಷಣ ಇಲಾಖೆ ವ್ಯಾಪ್ತಿಯ ಸರ್ಕಾರಿ ಶಾಲಾ ಕಟ್ಟದಲ್ಲಿ ಆರು ತಿಂಗಳುಗಳಿಂದ ಇಂಥ ಅಕ್ರಮ ನಡೆಯುತ್ತಿದ್ದರೂ ಶಿಕ್ಷಣ ಇಲಾಖೆಯ ಒಬ್ಬ ಅಧಿಕಾರಿ ಹಾಗೂ ಶಾಲೆಯ ಪಕ್ಕದಲ್ಲಿಯೇ ಇರುವ ಮುಖ್ಯಶಿಕ್ಷಕರು ಇಂಥ ಅನಿಷ್ಟವನ್ನು ಕಿತ್ತೆಸೆಯಲು ಮುಂದಾಗದಿರುವುದು ವಿಷಾದನೀಯ.

ಊರಿನ ಶಾಲೆಯ ಸ್ಥಿತಿಯ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ವರ್ಷದ ಹಿಂದೆಯೇ ಮನವಿ ಸಲ್ಲಿಸಿ ತಿಳಿಸಲಾಗಿದೆ. ಆದರೂ ಶಾಲೆಯಲ್ಲಿ ಇರುವ ಸಿಮೆಂಟ್‌ ಚೀಲ ಖಾಲಿ ಮಾಡಿಲ್ಲಕೂಲಿ ಕಾರ್ಮಿಕರು ಶಾಲೆಯಿಂದ ಹೊರಗೆ ಹೋಗುತ್ತಿಲ್ಲ ಎಂದು ಹೆಸರು ಹೇಳಲಿಚ್ಚಿಸದ ಗ್ರಾಮದ ಮುಖಂಡರೊಬ್ಬರು ತಿಳಿಸಿದ್ದಾರೆ. 

ಗುತ್ತಿಗೆದಾರರು ಹಾಗೂ ಪಂಚಾಯಿತಿ ಸಿಬ್ಬಂದಿ ನನಗೆ ಮನವಿ ಮಾಡಿದ್ದರು. ಹಾಗಾಗಿ ಶಾಲಾ ಕಟ್ಟದಲ್ಲಿ ಸಿಮೆಂಟ್‌ ಚೀಲ ಇಡಲು ಅವರಿಗೆ ಸ್ಥಳಾವಕಾಶ ಮಾಡಿಕೊಟ್ಟಿದ್ದೇನೆ.
 ಹಣಮಂತರಾವ್‌, ಶಾಲೆಯ ಮುಖ್ಯಶಿಕ್ಷಕ 

ಐದು ತರಗತಿಯ ವಿದ್ಯಾರ್ಥಿಗಳು ಹಳೇ ಕಟ್ಟಡದಲ್ಲೇ ಕುಳಿತುಕೊಂಡು ವಿದ್ಯಾಭ್ಯಾಸ ಮಾಡಲು ಸಮಸ್ಯೆಯಾಗುತ್ತಿದೆ ಎಂದು ಶಿಕ್ಷಕರಿಗೆ ತಿಳಿಸಿದ್ದರೂ ಪ್ರಯೋಜನವಾಗುತ್ತಿಲ್ಲ. ಸರ್ಕಾರ ಕಟ್ಟಡ ನಿರ್ಮಿಸಿದ್ದರೂ ಹಳೆ ಕಟ್ಟಡಲ್ಲೇ ಕುಳಿತು ಪಾಠ ಕೇಳುವುದು ಅನಿವಾರ್ಯವಾಗಿದೆ ಎಂದು ಶಾಲೆಯ ಹೇಸರು ಹೇಳಲಿಚ್ಚಿಸಿದ ವಿದ್ಯಾರ್ಥಿನಿಯೊಬ್ಬಳು ತಿಳಿಸಿದ್ದಾಳೆ.

„ರವೀಂದ್ರ ಮುಕ್ತೇದಾರ

Advertisement

Udayavani is now on Telegram. Click here to join our channel and stay updated with the latest news.

Next