Advertisement

ಇಸಾಕ್‌ ಲೈಬ್ರರಿ ಭಸ್ಮ ರಹಸ್ಯ ಬಿಚ್ಚಿಟ್ಟ ಸಿಸಿ ಕ್ಯಾಮರಾ

02:04 PM Apr 18, 2021 | Team Udayavani |

ಮೈಸೂರು: ಪುಸ್ತಕ ಪ್ರೇಮಿ ಸೈಯದ್‌ ಇಸಾಕ್‌ ಅವರ ಗ್ರಂಥಾಲಯಕ್ಕೆ ಬೆಂಕಿ ಇಟ್ಟ ಪ್ರಕರಣದ ಮೂಲವನ್ನು ಪತ್ತೆ ಹಚ್ಚುವಲ್ಲಿ ಮೈಸೂರು ನಗರ ಉದಯಗಿರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ನಶೆಯ ಮತ್ತಿನಲ್ಲಿ ಮದ್ಯ ವ್ಯಸನಿಯೊಬ್ಬ ಎಸೆದ ಬೆಂಕಿಯ ಕಡ್ಡಿಯಿಂದ ಗ್ರಂಥಾಲಯ ಸುಟ್ಟು ಭಸ್ಮವಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಮದ್ಯದ ನಶೆಯಲ್ಲಿ ಬೆಂಕಿ ಕಡ್ಡಿ ಎಸೆದ ಶಾಂತಿ ನಗರದ ನಿವಾಸಿ ಸೈಯದ್‌ ನಾಸಿರ್‌ (35)ಬಂಧಿತನಾಗಿದ್ದು, ಆತನ ವಿರುದ್ಧ ಐಪಿಸಿ ಕಲಂ 436 ಅನ್ವಯಪ್ರಕರಣ ದಾಖಲಿಸಲಾಗಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ನಗರಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ, ನೆರೆಯ ಮನೆಯ ನಿವಾಸಿಯೊಬ್ಬರು ಭದ್ರತೆಗಾಗಿ ಅಳವಡಿಸಿದ್ದ ಸಿಸಿ ಟಿವಿ ಕ್ಯಾಮರಾ, ಗ್ರಂಥಾಲಯ ಬೆಂಕಿಗಾಹುತಿಯಾದ ರಹಸ್ಯವನ್ನು ಬಿಚ್ಚಿಟ್ಟಿದೆ ಎಂದರು. ಕಳೆದ ಒಂದು ದಶಕದಿಂದ ಸೈಯದ್‌ ಇಸಾಕ್‌ ಅವರು ರಾಜೀವ್‌ ನಗರದ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕ ಗ್ರಂಥಾಲಯ ನಡೆಸುತ್ತಿದ್ದರು.

ಏ.9ರಂದು ಬೆಳಗಿನ ಜಾವ ಗ್ರಂಥಾಲಯ ಬೆಂಕಿಗಾಹುತಿಯಾಗಿಸುಟ್ಟು ಭಸ್ಮವಾಗಿತ್ತು. ಈ ಸಂಬಂಧ ಸೈಯದ್‌ ಇಸಾಕ್‌ ಅವರು ಉದಯಗಿರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಗರ ಪೊಲೀಸ್‌ ಆಯುಕ್ತರ ಸೂಚನೆ ಮೇರೆಗೆ ಪ್ರಕರಣದ ಬಗ್ಗೆ ವಿವಿಧ ಆಯಾಮಗಳಲ್ಲಿ ಉದಯಗಿರಿ ಠಾಣೆ ಇನ್ಸ್‌ಪೆಕ್ಟರ್‌ ಪಿ.ಕೆ.ರಾಜು, ಎಸ್‌ಐ ಜೈ ಕೀರ್ತಿ ಮತ್ತು ಸಿಬ್ಬಂದಿ ತನಿಖೆ ನಡೆಸಿದರು.ಆಗ ಸ್ಥಳೀಯರಾದ ಇಬ್ಬರು ನೀಡಿದ ಮಾಹಿತಿ ಮತ್ತು ಸಿಸಿ ಟಿವಿಕ್ಯಾಮರಾದಲ್ಲಿ ಸೆರೆಯಾದ ದೃಶ್ಯಗಳು, ಘಟನೆಯ ಸಂಪೂರ್ಣ ಚಿತ್ರಣವನ್ನೇ ಪೊಲೀಸರ ಮುಂದೆ ಇರಿಸಿದೆ.

ಬೆಂಕಿ ಹರಡಿದ್ದು ಸೋಫಾ ಅಂಗಡಿಯಿಂದ: ಮೊದಲು ಬೆಂಕಿಬಿದ್ದಿದ್ದು ಗ್ರಂಥಾಲಯಕ್ಕಲ್ಲ ಪಕ್ಕದಲ್ಲಿದ್ದ ಸೋಫಾ ರಿಪೇರಿ ಅಂಗಡಿಗೆಎಂಬುದು ಸಿಸಿ ಟಿವಿ ಕ್ಯಾಮರಾದ ದೃಶ್ಯಗಳಿಂದ ನಿಖರವಾಗಿ ಗೊತ್ತಾಗಿದೆ. ಘಟನೆಯ ಹಿಂದಿನ ದಿನ ಏ.8ರ ಗುರುವಾರ ರಾತ್ರಿ 9ಗಂಟೆ ಸಮಯದಲ್ಲಿ ಕೆಲಸ ಮುಗಿಸಿಕೊಂಡು ಕುಡಿತ ಮತ್ತಿನಲ್ಲಿ ಮನೆಗೆ ಹಿಂದಿಗಿದ್ದ ಸೈಯದ್‌ ನಾಸಿರ್‌, ಕುಟುಂಬದರೊಂದಿಗೆ ನಡೆದ ಜಗಳದಿಂದ ಮತ್ತೆ ಮನೆಯಿಂದ ಹೊರ ಬಂದು ಗ್ರಂಥಾಲಯ ಹಿಂಭಾಗದ ಅಂಗಡಿಯಲ್ಲಿ ಬೀಡಿ ಮತ್ತು ಬೆಂಕಿಪೊಟ್ಟಣ ಖರೀದಿಸುತ್ತಾನೆ. ಬಳಿಕ ರಾತ್ರಿ 10. 15ರ ಸಮಯದಲ್ಲಿ ಲೈಬ್ರರಿ ಹಿಂಭಾಗದಲ್ಲಿರುವ ಕಲೀಂವುಲ್ಲಾ ಮಾಲೀಕತ್ವದ ಸೋಫಾ, ಕುಷನ್‌ ರಿಪೇರಿ ಅಂಗಡಿ ಬಳಿ ತೆರಳಿ ಬೀಡಿ ಸೇದುತ್ತಾ, ಬೆಂಕಿಕಡ್ಡಿಯನ್ನು ಸೋಫಾದ ಕಸದ ರಾಶಿಯ ಮೇಲೆ ಹಾಕಿ ಮನೆಯತ್ತ ತೆರಳುತ್ತಾನೆ. ನಾಲ್ಕೈದು ನಿಮಿಷಗಳಲ್ಲಿ ಬೆಂಕಿಯ ಕಿಡಿ ಜ್ವಾಲೆಯಲ್ಲಿ ಹರಡಲು ಆರಂಭಿಸುತ್ತದೆ. ತಕ್ಷಣ ಪ್ರಾವಿಷನ್‌ ಸ್ಟೋರ್‌ ಬಳಿ ಇದ್ದ ಸೈಯದ್‌ ಅಸ್ಗರ್‌ ಮತ್ತು ಸೈಯ್‌ ಅಯಾಜುದ್ದೀನ್‌ ಅವರು ಸ್ಥಳಕ್ಕೆತೆರಳಿ ಮಣ್ಣನ್ನು ಎರಚಿ ಬೆಂಕಿಯನ್ನು ನಂದಿಸುತ್ತಾರೆ.

Advertisement

ಬೆಂಕಿ ಆರಿದರೂ ಬೆಂಕಿಯ ಕಾವು ಮಣ್ಣಿನೊಳಗೆಹೊಗೆಯಾಡುತ್ತಿದೆ. ಮಧ್ಯರಾತ್ರಿ ಹೆಚ್ಚಾಗಿದೆ. ಹೊಗೆಯಾಡುತ್ತಿರುವುದನ್ನು ಗಮನಿಸಿದ ಕೆಲವರು, ಯಾರೋ ಕಸದ ರಾಶಿಗೆಬೆಂಕಿ ಹಾಕಿರಬೇಕು ಎಂದು ಸುಮ್ಮನಾಗಿದ್ದಾರೆ. ಬೆಳಗಿನ ಜಾವ2.15ರ ಹೊತ್ತಿಗೆ ಹೊಗೆಯಾಡುತ್ತಿದ್ದ ಸೋಫಾ ರಿಪೇರಿ ಜಾಗದಲ್ಲಿಬೆಂಕಿಯ ಜ್ವಾಲೆ ಹೊತ್ತಿಕೊಂಡು ಎಲ್ಲೆಡೆ ವ್ಯಾಪ್ತಿಸಿದೆ. ಸ್ಥಳದಲ್ಲಿದ್ದ ಕುಷನ್‌, ನಾರಿನ ಮೂಲಕ ಬೆಂಕಿ ದೊಡ್ಡದಾಗಿದ್ದು, ಪಕ್ಕದಲ್ಲಿದ್ದ ಗ್ರಂಥಾಲಯಕ್ಕೂ ವ್ಯಾಪಿಸಿದೆ. ತೆಂಗಿನ ಗರಿಗಳನ್ನು ಬಳಸಿ ಗುಡಿಸಲು ಮಾದರಿಯಲ್ಲಿ ಗ್ರಂಥಾಲಯ ನಿರ್ಮಿಸಿದ್ದರಿಂದ ಬೆಂಕಿ ವ್ಯಾಪಿಸಿ,ಸಾವಿರಾರು ಪುಸ್ತಕಳಿಗೂ ಬೆಂಕಿ ಹತ್ತಿಕೊಂಡಿದೆ.ತಕ್ಷಣ ಇದನ್ನು ಗಮನಿಸಿದ ನೆರೆಯ ನಿವಾಸಿಗಳು ಪೊಲೀಸರುಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಮೂರು ಗಂಟೆಯ ಹೊತ್ತಿಗೆ ಅಗ್ನಿ ಶಾಮಕ ಸಿಬ್ಬಂದಿಗೆ ಬೆಂಕಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next