ಭಾರತ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸಾಮಾನ್ಯ ಜನರ ಕೈಗೆಟಕುವ ಉತ್ತಮ ಸ್ಮಾರ್ಟ್‌ಫೋನ್‌ಗಳನ್ನು ನೀಡಿದ್ದ ವಿವೋ ಕಂಪೆನಿಯ ಅಧೀನದಲ್ಲಿರುವ ಐಕ್ಯೂ ಕಂಪೆನಿ ತನ್ನ ಹೊಚ್ಚ ಹೊಸ ಸ್ಮಾರ್ಟ್‌ಫೋನ್ ಒಂದನ್ನು ಪರಿಚಯಿಸಲು ಸಿದ್ದವಾಗಿದೆ. ಐಕ್ಯೂ ಈಗಾಗಲೇ ಭಾರತದಲ್ಲಿ ಪರಿಚಯಿಸಿರುವ ಐಕ್ಯೂ Z6 ಪ್ರೋ ಸ್ಮಾರ್ಟ್‌ಫೋನ್‌ನ ನಂತರ ಕಂಪೆನಿ ಪರಿಚಯಿಸುತ್ತಿರುವ ಮೊದಲ ಸ್ಮಾರ್ಟ್‌ಫೋನ್ ಇದಾಗಿದೆ.
5G ಕನೆಕ್ಟಿವಿಟಿ, ಮೀಡಿಯಾ ಟೆಕ್ ಚಿಪ್‌ಸೆಟ್, ಸ್ಲಿಮ್ಮರ್ ವಿನ್ಯಾಸ ಹೀಗೆ ಹತ್ತು ಹಲವು ಸಾಮಾನ್ಯ ವಿಶೇಷತೆಗಳನ್ನು ಈ ಸ್ಮಾರ್ಟ್‌ಫೋನ್ ಹೊಂದಿದೆ.
ವಿಶೇಷವೇನೆಂದರೆ ಕಡಿಮೆ ಬೆಲೆಗೆ ಉತ್ತಮ ಫೋನ್‌ಗಳನ್ನು ನೀಡಿ ಗ್ರಾಹಕರ ಮನಗೆದ್ದಿದ್ದ ವಿವೋ ತನ್ನ ಒಡೆತನದ ಐಕ್ಯೂನಿಂದಲೂ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟಗೆ ಪರಿಚಯಿಸಿದೆ. ಇದೀಗ ಬರುತ್ತಿರುವ 25 ಸಾವಿರ ರೂ. ಗಳಿಗಿಂತ ಕಡಿಮೆ ಬೆಲೆಗೆ ಲಭ್ಯವಾಗಲಿದೆ.
ಭಾರತದಲ್ಲಿ ಇತ್ತೀಚೆಗೆ ಬಿಡುಗಡೆಯಾದ ಒನ್ ಪ್ಲಸ್ ಕಂಪೆನಿಯ ನಾರ್ಡ್ CE 3 ಸ್ಮಾರ್ಟ್‌ಫೊನ್‌ಗೆ ಠಕ್ಕರ್ ಕೊಡುವ ಉದ್ದೇಶದಿಂದ ಐಕ್ಯೂ ತನ್ನ Z7 ಪ್ರೋ ಮಾದರಿಯನ್ನು ಭಾರತದಲ್ಲಿ ಪರಿಚಯಿಸುತ್ತಿದೆ ಎಂದು ಹೇಳಲಾಗುತ್ತಿದೆ. ಇದರ ನಿರ್ದಿಷ್ಟ ಬೆಲೆಯನ್ನು ಕಂಪೆನಿ ಎಲ್ಲೂ ಹೇಳಿಕೊಂಡಿಲ್ಲ. ಆದರೂ ನಾರ್ಡ್ CE 3 ನ ಮೂಲಬೆಲೆ 26,999 ಇರುವುದರಿಂದ ಐಕ್ಯೂ ತನ್ನ ನೂತನ Z7 ಪ್ರೋ ಮಾದರಿಗೆ ಕಡಿಮೆ ಬೆಲೆ ಇಡುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ.
ಈ ನೂತನ ಸ್ಮಾರ್ಟ್‌ಫೋನ್ ಪಂಚ್-ಹೋಲ್ ಡಿಸ್ಪೇ ಹೊಂದಿರಲಿದೆ. 6.78 ಇಂಚುಗಳ ಡಿಸ್ಪ್ಲೇ ಇದಾಗಿದ್ದು, ಫುಲ್ HD+ AMOLED ಡಿಸ್ಪ್ಲೇ ಇರಲಿದೆ. ತೆಳ್ಳಗಿನ ಮತ್ತು ಹಗುರವಾದ ಬಾಡಿ Z6 ಪ್ರೋ ಮಾದರಿಯಲ್ಲಿ ಸಿಗಲಿದೆ. 4,600 mAH ಬ್ಯಾಟರಿ ಮತ್ತು 66W ಫಾಸ್ಟ್ ಚಾರ್ಜಿಂಗ್ ಈ ಫೋನ್‌ನಲ್ಲಿ ಲಭ್ಯವಿದೆ.
ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ 7,200 ಓಕ್ಟಾಕೋರ್ ಮೀಡಿಯಾಟೆಕ್ ಪ್ರೊಸೆಸರ್ ಹೊಂದಿರಲಿದ್ದು, 128 GB RAM ಇರಲಿದೆ. ಐಕ್ಯೂ Z7 ಪ್ರೋ 120 Hz ರಿಫ್ರಶ್ ರೇಟ್ ಜೊತೆಗೆ 7,2,000 Antutu ಸ್ಕೋರ್‌ಮೂಲಕ ಅತ್ಯಂತ ವೇಗದ ಕಾರ್ಯಕ್ಷಮತೆಯೂ ಈ ಫೋನ್‌ನಲ್ಲಿ ಲಭ್ಯವಿದೆ ಎಂದು ಕಂಪೆನಿಯ CEO ನಿಪುನ್ ಮರಿಯಾ ಟ್ವಿಟರ್ (X)ನಲ್ಲಿ ಬರೆದುಕೊಂಡಿದ್ದಾರೆ.
ಐಕ್ಯೂ ತನ್ನ Z7 ಪ್ರೋ ಮಾದರಿಯನ್ನು ಆಗಷ್ಟ್ 31 ರಂದು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಈ ನೂತನ ಸ್ಮಾರ್ಟ್‌ಫೋನ್ ಬಗೆಗಿನ ಹೆಚ್ಚಿನ ವಿವರಗಳನ್ನು ಕಂಪೆನಿ ಇನ್ನೂ ದೃಢೀಕರಿಸಿಲ್ಲ.
~ ಪ್ರಣವ್ ಶಂಕರ್