Advertisement

ಕನಸಿನಲ್ಲಿ ಕಂಡ ಯಂತ್ರದ ಆವಿಷ್ಕಾರ   

02:24 PM Apr 03, 2022 | Team Udayavani |

ಎಲ್ಲರಿಗೂ ದಿನನಿತ್ಯ ಕನಸು ಬೀಳುವುದು ಸರ್ವೇಸಾಮಾನ್ಯ. ಹಲವರಿಗೆ ಕನಸಿನಲ್ಲಿ ಕಂಡ ವ್ಯಕ್ತಿಗಳು, ಚಿತ್ರಣಗಳು ಮರೆತುಹೋಗುತ್ತವೆ. ಕೆಲವೊಮ್ಮೆ ಎಲ್ಲವೂ ನೆನಪಿರುತ್ತವೆ. ಆದರೆ ನಾವ್ಯಾರೂ ಕನಸುಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಬಿದ್ದ ಕನಸುಗಳ ಬಗ್ಗೆ ಅತಿಯಾಗಿ ಯೋಚಿಸುವುದೂ ಇಲ್ಲ,ಆದರೆ ನಮ್ಮ ಕನಸುಗಳು ನಮ್ಮನ್ನು ಕ್ರಿಯೇಟಿವ್ ವ್ಯಕ್ತಿಯಾಗಿ ಮಾಡುತ್ತದೆ ಎಂದರೆ  ನಂಬುತ್ತೀರಾ?

Advertisement

ನಂಬಲೇಬೇಕು ಅದಕ್ಕೆ ಸೂಕ್ತ ಉದಾಹರಣೆ ಎಲಿಯಾಸ್ ಹೋವ್. ಈತ ಓರ್ವ ಅಮೆರಿಕಾದ ಸಂಶೋಧಕ. 1819 ರಂದು ಜನಿಸಿದ ಈತನಿಗೆ ಸಣ್ಣ ವಯಸ್ಸಿನಿಂದಲೂ ಯಂತ್ರಗಳ ಬಗ್ಗೆ ಬಹಳ ಆಸಕ್ತಿ. ಅದರಲ್ಲಿಯೂ ಹೊಲಿಗೆ ಯಂತ್ರದ ಕುರಿತು ಸ್ವಲ್ಪ ಹೆಚ್ಚೇ ಆಸಕ್ತಿ. ಆಗಿನ ಕಾಲದಲ್ಲಿ ಬಟ್ಟೆಗಳನ್ನು ಕೈಯಿಂದಲೇ ತಯಾರಿಸುವ ಪರಿಸ್ಥಿತಿ ಇತ್ತು. ಒಂದು ಬಟ್ಟೆ ತಯಾರಿಸಲು ಅನೇಕ ದಿನಗಳ ಸಮಯಾವಕಾಶ ಬೇಕಿತ್ತು. ಇದರ ಕುರಿತು ಆತ ಬಹಳಷ್ಟು ಪರಿಶ್ರಮ ಪಟ್ಟಿದ್ದ.

ಒಮ್ಮೆ ಆತನ ಕನಸಿನಲ್ಲಿ ಹೊಲಿಗೆ ಯಂತ್ರವನ್ನು ಕಂಡನು.  ಅದರಲ್ಲಿ ಬಳಸಲಾಗಿದ್ದ ಸೂಜಿ ವಿಭಿನ್ನವಾಗಿತ್ತು.  ದಾರವನ್ನು ಬಟ್ಟೆಗೆ ಚುಚ್ಚಿ ಅದನ್ನು ಮತ್ತೆ ಮೇಲಕ್ಕೆ ತರುವ ಹೊಸ ರೀತಿಯ ಯಂತ್ರವನ್ನು ಕನಸಿನಲ್ಲಿ ಕಂಡ ಆತ.  ತಾನು ಕನಸಿನಲ್ಲಿ ಕಂಡ ಯಂತ್ರದ ಮಾದರಿಯನ್ನೇ ನೆನಪಿಸಿಕೊಂಡ. ಸೂಜಿಯ ತುದಿಯ ರಂಧ್ರಗಳನ್ನು ಕನಸಿನಲ್ಲಿ ಕಂಡಂತೆ ವಿನ್ಯಾಸಗೊಳಿಸಿ ಐದು ವರ್ಷಗಳು ಪರಿಶ್ರಮಪಟ್ಟು ಹೊಲಿಗೆ ಯಂತ್ರವನ್ನು ಕಂಡುಹಿಡಿದ.

1846 ರಲ್ಲಿ ಯಂತ್ರಕ್ಕೆ ಪೇಟೆಂಟ್ ಕೂಡ ಪಡೆದುಕೊಂಡ.  ಹೋವ್ ಕಂಡುಹಿಡಿದ ಯಂತ್ರ ಅಮೇರಿಕಾದಲ್ಲೂ ಪ್ರಸಿದ್ಧಿ ಪಡೆಯತೊಡಗಿತು. ಲೆದರ್ ಸೇರಿದಂತೆ ಎಲ್ಲಾ ರೀತಿಯ ಬಟ್ಟೆಗಳನ್ನು ಹೊಲಿಯಬಹುದಾದ ಯಂತ್ರವನ್ನು ಪ್ರಪಂಚಾದ್ಯಂತ ಕೀರ್ತಿ ಎಲಿಯಾಸ್ ಹೋವ್ ಗೆ ಸೇರುತ್ತದೆ.

ಆದ್ದರಿಂದ ರಾತ್ರಿ ಬೀಳುವ ಕನಸುಗಳನ್ನು ಕಡೆಗಣಿಸಬೇಡಿ. ಹಾಗೆಂದ ಮಾತ್ರಕ್ಕೆ ಕನಸುಗಳನ್ನು ಕಂಡರೆ ಸಾಲದು. ಕನಸುಗಳನ್ನು ನನಸಾಗಿಸಿಕೊಳ್ಳಲು ಹೋವ್ ಶ್ರಮ ಪಟ್ಟಂತೆ ಸತತವಾಗಿ ಶ್ರಮ ಪಡಲು ಸಿದ್ಧವಿರಬೇಕು.

Advertisement

-ವೇದಶ್ರೀ ಜಿ. ಎಂ. ನಾಪೋಕ್ಲು

Advertisement

Udayavani is now on Telegram. Click here to join our channel and stay updated with the latest news.

Next