ಬೆಂಗಳೂರು: ನಗರದ ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜಿನ ಮಹಿಳಾ ವಿದ್ಯಾರ್ಥಿನಿಯರು ಹೊಸ ಯಶೋಗಾಥೆ ಬರೆದಿದ್ದಾರೆ. ಆಸ್ಪತ್ರೆಗಳಲ್ಲಿ ಕೆಲಸಗಾರರ ಸಮಸ್ಯೆಯನ್ನು ನಿವಾರಿಸುವ ಪ್ರಯತ್ನವಾಗಿ ವಿಶಿಷ್ಟ ರೋಬೋ ಯಂತ್ರವನ್ನು ಅಭಿವೃದ್ಧಿಪಡಿಸಿ ತಾಂತ್ರಿಕ ಕ್ಷೇತ್ರದಲ್ಲಿ ಗಮನ ಸೆಳೆದಿದ್ದಾರೆ.
ಜೇನುಗೂಡಿನ ಪರಿಕಲ್ಪನೆಯಲ್ಲಿ ರೋಬೋ ಅನ್ನು ವಿನ್ಯಾಸ ಪಡಿಸಿದ್ದು ರೋಗಿಗಳಿರುವ ಸ್ಥಳಕ್ಕೆ ತೆರಳಿ ಔಷಧಿಗಳನ್ನು
ನೀಡುವುದಲ್ಲದೆ, ವಾರ್ಡ್‌ನಲ್ಲಿ ನೀರು ಬಿದ್ದರೆ ಅಲ್ಲವೆ ಅಗ್ನಿ ಅನಾಹುತ ಸಂಭವಿಸಿದರೆ ಈ ಬಗ್ಗೆ ಸಂದೇಶ ನೀಡಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದ್ಯಾರ್ಥಿಗಳಾದ ಅಭಿಲಾಷ್, ನಿಶಾ.ಕೆ.ಮೆಹ್ತಾ ಮತ್ತು ಲಾವಣ್ಯ, ನೂತನ ರೋಬೋ ಯಂತ್ರದ ಅಭಿವೃದ್ಧಿ ಮತ್ತು ಅದರ ಕಾರ್ಯಸಾಧನೆಯ ಬಗ್ಗೆ ಕಿರುಮಾಹಿತಿ ನೀಡಿದರು. ಜೇನುಗೂಡಿನ ಪರಿಕಲ್ಪನೆ ಯನ್ನಿಟ್ಟುಕೊಂಡು ಈ ರೋಬೋ ವಿನ್ಯಾಸಪಡಿಸಲಾಗಿದೆ. ಆಸ್ಪತ್ರೆಯಲ್ಲಿ ಇದನ್ನು ಬಳಸಿದರೆ ರೋಗಿಗಳಿರುವ ಕೇಂದ್ರಗಳಿಗೆ ತೆರಳಿ, ಈ ರೋಬೋಗಳು ನೀರಿನ ಬಾಟಲ್, ದಿನಪತ್ರಿಕೆ, ಮಾತ್ರೆಗಳು ಸೇರಿ ಇನ್ನಿತರ ವಸ್ತುಗಳನ್ನು ರೋಗಿಗಳಿಗೆ ನೀಡಲಿವೆ. ಅಲ್ಲದೆ ರೋಗಿಗಳ ವಾರ್ಡ್‌ನಲ್ಲಿ ನೀರು ಚೆಲ್ಲಿರಲಿ ಅಥವಾ ಚಿಕ್ಕ ಬೆಂಕಿ ಅವಘಡಗಳು ಸಂಭವಿಸಿದ್ದರೂ ಅವುಗಳ ಬಗ್ಗೆ ಸಂದೇಶವನ್ನು ರವಾನಿಸಲಿವೆ ಎಂದರು.
ಒಟ್ಟು ಮೂರು ರೋಬೋಗಳಲ್ಲಿ ಬಳಕೆ ಮಾಡಲಾಗಿದೆ. ಒಂದು ರೋಬೋ ಕೇಂದ್ರಿಕೃತ ರೋಬೋ ಆಗಿದ್ದು, ಉಳಿದ ಎರಡೆರಡು
ರೋಬೋಗಳ ಕಾರ್ಯಚಟುವಟಿಕೆಗಳ ಮೇಲೆ ಇದು ನಿಗಾವಹಿಸಿ ಕಾರ್ಯನಿರ್ವಹಿಸಲಿದೆ. ಅಲ್ಲದೆ ಇದು ಎರಡನೇ ವಿಧದ ರೋಬೋ ಯಂತ್ರಗಳು ಮಾಡಬೇಕಾದ ಕೆಲಸಗಳ ಬಗ್ಗೆ ನಿರ್ದೇಶನ ಮಾಡುತ್ತದೆ. ಕೇಂದ್ರೀಕೃತ ರೋಬೋ ಹೇಳಿದಂತೆ ಉಳಿದೆರಡು ರೋಬೋಗಳು ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ಕೆಲಸ ಮಾಡಲಿವೆ. ಒಂದು ದೊಡ್ಡ ರೋಬೋ ಯಂತ್ರ ಏಕಕಾಲದಲ್ಲಿ 100 ಚಿಕ್ಕ ರೋಬೋಗಳನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದಿವೆ. ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿ ಕುಳಿತು ಕೇಂದ್ರಿಕೃತ ರೋಬೋ ಉಳಿದ ರೋಬೋಗಳನ್ನು ನಿಯಂತ್ರಿಸಬಹುದಾಗಿದೆ.
ಕಳೆದ ಒಂದೂವರೆ ವರ್ಷದಿಂದಲೂ ಈ ರೋಬೋ ಯಂತ್ರದ ಅಭಿವೃದಿಟಛಿಯ ಬಗ್ಗೆ ಆಲೋಚನೆ ನಡೆದಿತ್ತು. ಜೇನುಗೂಡಿನ ಪರಿಕಲ್ಪನೆ ಇದರಲ್ಲಿತ್ತು. ರಾಣಿ ಜೇನು ಹೇಗೆ ತನ್ನ ಇತರ ಸಮೂಹವನ್ನು ನಿಯಂತ್ರಣ ಮಾಡುತ್ತದೆಯೋ ಅದೇ ರೀತಿಯಲ್ಲಿ ತಂತ್ರಜ್ಞಾನವನ್ನು ವಿನ್ಯಾಸ ಪಡಿಸಬೇಕೆಂದು ಆಲೋಚಿಸಿ ಈ ಪ್ರಯತ್ನಕ್ಕೆ ಮುಂದಾದೆವು. ಹನ್ನೊಂದು ಸಾವಿರ ರೂ. ವೆಚ್ಚದಲ್ಲಿ ಈ ಯಂತ್ರ ಅಭಿವೃದ್ಧಿಪಡಿಸಲಾಗಿದ್ದು ಮುಂದಿನ ದಿನಗಳಲ್ಲಿ ಇದನ್ನು ಮತ್ತಷ್ಟು ಉನ್ನತೀಕರಿಸುವ ಆಲೋಚನೆ ಇದೆ ಎಂದು ರೋಬೋ ಅನ್ವೇಷಣೆಯಲ್ಲಿ ಒಬ್ಬರಾದ ಅಭಿಲಾಷ್ ಹೇಳಿದರು.
ಆಸ್ಪತ್ರೆಯಲ್ಲಿ ಯಾವುದೇ ಭಾಗದಲ್ಲಿ ಅಗ್ನಿ ಅವಘಡ ಸಂಭವಿಸಿದರೆ ಅದನ್ನು ಕೂಡಲೇ ಗ್ರಹಿಸಿ ಸಂದೇಶವನ್ನು ಇತರ ರೋಬೋಗಳು ಮುಖ್ಯ ರೋಬೋಗೆ ತಲುಪಿಸುವ ಗುಣಲಕ್ಷಣ ಈ ರೋಬೋಗಳಿಗಿದೆ ಎಂದು ಮತ್ತೂಬ್ಬ ವಿದ್ಯಾರ್ಥಿನಿ ನಿಶಾ.ಕೆ ಮೇಹ್ತಾ ನುಡಿದರು.
ಕಾಲೇಜಿನ ಅಧ್ಯಾಪಕ ವೃಂದ ಪ್ರೋತ್ಸಾಹದಿಂದ ಇದು ಸಾಧ್ಯವಾಗಿದೆ ಎಂದು ಎಂಜಿನಿಯರಿಂಗ್ ವಿದ್ಯಾರ್ಥಿನಿ ಲಾವಣ್ಯ ಹೇಳಿದರು. ತಂತ್ರಜ್ಞಾನದ ಬಗ್ಗೆ ಕುತೂಹಲ ಹೊಂದಿರುವವರು ಶ್ರೀಕಾಂತ ಎನ್.ಸಿ.ಮೊಬೈಲ್ ಸಂಖ್ಯೆ
8880666613 ಸಂಪರ್ಕಿಸಬಹುದು.