Advertisement

ಕನ್ನಡ ನಾಡಿನ ಹಕ್ಕಿಗಳ ಪರಿಚಯ ಹೆಜ್ಜೆ ಮೂಡದ ಹಾದಿ

09:59 PM Apr 23, 2019 | mahesh |

ಕನ್ನಡ ನಾಡಿನ ಹಕ್ಕಿಗಳ ಎರಡನೇ ಭಾಗವಾಗಿರುವ ಇದು ಹಕ್ಕಿಗಳ ಬಗ್ಗೆ ಗೊತ್ತಿಲ್ಲದವರಿಗೆ ಅಥವಾ ನಿರಾಸಕ್ತರಿಗೆ ಈ ಅದ್ಭುತ ಜೀವಿಗಳ ಬಗ್ಗೆ ಆಸಕ್ತಿ ಹುಟ್ಟಿಸಲು, ಹಕ್ಕಿಗಳ ಹಲವಾರು ಸ್ವಾನುಭವದ ಆಪ್ತ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಹೇಳಿರುವ ಚಿಕ್ಕ ಕಥೆಗಳ ಸಂಕಲನ ಕೆ.ಪಿ. ಪೂರ್ಣ ಚಂದ್ರ ತೇಜಸ್ವಿ ಅವರ ಹೆಜ್ಜೆ ಮೂಡದ ಹಾದಿ.

Advertisement

ಘಟನೆ 1
ಪ್ರಪಂಚದ ಅಗಾಧ ಪಕ್ಷಿ ಸಂಕುಲಗಳಲ್ಲಿ ಸಾಸಿವೆ ಕಾಳಿನಷ್ಟು ಭಾಗವನ್ನು ಓದುಗರ ಮುಂದಿಡುತ್ತೇನೆ ಎಂದು ಪೂರ್ಣಚಂದ್ರ ತೇಜಸ್ವಿಯವರು ಹೇಳುತ್ತಾರೆ. 70 ಮಿಲಿಯನ್‌ ವರ್ಷಗಳ ಹಿಂದೆ ಕಂಡು ಬಂದಿರುವ ಪಕ್ಷಿಗಳ ಬಗ್ಗೆ ಅವುಗಳ ಸ್ವರೂಪ ಮತ್ತು ವೈಶಿಷ್ಟಗಳನ್ನು ವಿವರಿಸುತ್ತಾ ಹೋಗುತ್ತಾರೆ. ಸಾಮಾನ್ಯವಾಗಿ ಊರುಗಳಲ್ಲಿ ನೋಡುವ ಕೊಕ್ಕರೆಗಳ ಸಂತಾನೋತ್ಪತ್ತಿ ಮತ್ತು ಅವುಗಳು ಆಹಾರಕ್ಕಾಗಿ ಹೇಗೆ ಬೇಟೆಯಾಡುತ್ತವೆ ಎಂಬುದನ್ನು ವಿವರಿಸುವುದು ಕಾಣಬಹುದು.

ಘಟನೆ 2
ಕೆಲವೊಮ್ಮೆ ನಮಗೆ ನಮ್ಮ ಹತ್ತಿರದ ಪ್ರದೇಶಗಳಲ್ಲಿ ಕಣ್ಣಿಗೆ ಕಾಣುವ ಹಕ್ಕಿಗಳ ಬಗ್ಗೆ ಮಾತ್ರ ಗೊತ್ತಿರುತ್ತದೆ. ಆದರೆ ಜಕಾನ ಹಕ್ಕಿಗಳ ಬಗ್ಗೆ ಲೇಖಕರು ಹೇಳುವಾಗ ಇಂತಹ ಪಕ್ಷಿಗಳು ಇವೆ ಮತ್ತು ಇವುಗಳು ನೀರಿನಲ್ಲಿ ಇಳಿಯುವುದಿಲ್ಲ. ಅದರ ಬದಲು ನೀರಿನಲ್ಲಿರುವ ಎಲೆಗಳ ಮೂಲಕ ಓಡಾಡುತ್ತವೆ. ಹೀಗೆ ಹೇಳುವಾಗ ಆಶ್ಚರ್ಯವಾಗಬಹುದು, ಎಲೆಗಳು ಮುಳುಗುವುದಿಲ್ಲವೇ ಎಂದು ಇದೇ ಅದರ ವೈಶಿಷ್ಟ. ತನ್ನ ಅಗಲವಾದ ಪಾದಗಳಿಂದ ಎಲೆಯ ಅಗಲಕ್ಕೂ ಪಾದಗಳನ್ನು ಹಂಚಿಕೊಂಡು ಒಂದು ಎಲೆಯಿಂದ ಇನ್ನೊಂಡು ಎಲೆಗೆ ದಾಟಿ ಬೀಡುತ್ತವೆ ಎಂದು ಲೇಖಕರು ವಿವರಿಸುತ್ತಾರೆ.

ಘಟನೆ 3
ಕಪ್ಪು ಬಿಳುಪಿನ ಬಣ್ಣಗಳಲ್ಲಿ ಕಂಗೊಳಿಸುವ ಟ್ರೋಜನ್‌ ಹಕ್ಕಿಗಳಂತೆ ಇರುವ ಇನ್ನೊಂದು ಹಕ್ಕಿಯು ಬಗ್ಗೆ ಲೇಖಕರು ಓದುಗರಿಗೆ ತಿಳಿಸುತ್ತಾರೆ. ಸಾಮಾನ್ಯವಾಗಿ ಇದು ಅಮೆ ಜಾನ್‌ ಕಾಡುಗಳಲ್ಲಿ ಕಂಡು ಬರುತ್ತವೆ. ಅದರಲ್ಲಿಯೂ ಇದರ ವಿಶೇಷತೆಯೆಂದರೆ ಇವುಗಳು ಸದ್ದು ಮಾಡದ ಹಕ್ಕಿಗಳು. ಈ ನಿಶ್ಶಬ್ಧ ವರ್ತನೆಯಿಂದಾಗಿ ಇವು ಯಾರ ಕಣ್ಣಿಗೂ ಕಾಣುವುದಿಲ್ಲ. ಹುಳುಗಳನ್ನು ಹಿಡಿಯಲು ಕುಳಿತ ಜಾಗದಿಂದ ಹಾರಿದ ಹಕ್ಕಿ ತಿರುಗಿ ಬಂದು ಕುಳಿತಲ್ಲೇ ಕುಳಿತುಕೊಳ್ಳುತ್ತದೆ ಎಂದು ಹಕ್ಕಿಯ ವರ್ಣನೆಯನ್ನು ತನ್ನ ಅನುಭವದ ಮೂಲಕ ವಿವರಿಸುತ್ತಾರೆ ಲೇಖಕರು.

ಪ್ರೀತಿ ಭಟ್‌ ಗುಣವಂತೆ

Advertisement
Advertisement

Udayavani is now on Telegram. Click here to join our channel and stay updated with the latest news.

Next