Advertisement

ಅಂತಾರಾಷ್ಟ್ರೀಯ ವ್ಹೀಲ್‌ ಚೇರ್‌ ಟಿ20 ಕ್ರಿಕೆಟ್‌ಗೆ ಸುನೀಲಕುಮಾರ ಆಯ್ಕೆ

06:15 PM Dec 14, 2019 | Suhan S |

ಚಿಕ್ಕೋಡಿ: ಅಂತಾರಾಷ್ಟ್ರೀಯ ವ್ಹೀಲ್‌ಚೇರ್‌ ಟಿ-20 ಕ್ರಿಕೆಟ್‌ ಪಂದ್ಯಕ್ಕೆ ಚಿಕ್ಕೋಡಿಯ ಅಂಗವಿಕಲ ಕ್ರಿಕೆಟ್‌ ಪಟು ಸುನೀಲಕುಮಾರ ಪುನರಾಯ್ಕೆಯಾಗಿದ್ದಾರೆ.

Advertisement

ಉತ್ತರಾಖಂಡದ ರುದ್ರಪೂರದಲ್ಲಿ ಡಿ.19ರಿಂದ 23ರವರೆಗೆ ನಡೆಯುವ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾರತ, ಬಾಂಗ್ಲಾದೇಶ, ನೇಪಾಳ ಹಾಗೂ ಅಪಘಾನಿಸ್ತಾನ ತಂಡಗಳು ಭಾಗವಹಿಸುತ್ತಿವೆ. ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಸುನೀಲ ಆಲ್‌ರೌಂಡರ್‌ ಆಗಿ ಆಯ್ಕೆಯಾಗಿದ್ದಾರೆ. ಪ್ರಥಮ ಬಾರಿ ನೇಪಾಳದಲ್ಲಿ ನಡೆದ ವ್ಹೀಲ್‌ಚೇರ್‌ ಕ್ರಿಕೆಟ್‌ ಏಷ್ಯಾ ಕಪ್‌ ಗೆ ಆಯ್ಕೆಯಾಗಿದ್ದರು. ಸುನೀಲಕುಮಾರ ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next