Advertisement

Budget: ಇಂದು ಕೇಂದ್ರದಿಂದ ಮಧ್ಯಾಂತರ ಬಜೆಟ್‌- ಮೋದಿ ಸರಕಾರದ ಈ ಬಾರಿಯ ಕೊನೆಯ ಬಜೆಟ್‌

02:27 AM Feb 01, 2024 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ 2ನೇ ಅವಧಿಯ ಕೊನೆಯ ಆಯವ್ಯಯವನ್ನು ಗುರುವಾರ ಬೆಳಗ್ಗೆ 11 ಗಂಟೆಗೆ ವಿತ್ತಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಲಿದ್ದಾರೆ. 17ನೇ ಲೋಕಸಭೆಯ ಕೊನೆಯ ಅಧಿವೇಶನ ಇದಾಗಿರುವ ಹಿನ್ನೆಲೆ ಯಲ್ಲಿ ತಾತ್ಕಾಲಿಕ ಹಣಕಾಸು ಯೋಜನೆಯಾಗಿ ಮಧ್ಯಾಂತರ ಬಜೆಟ್‌ ಮಂಡಿಸಲಾಗುತ್ತಿದೆ. ಪ್ರಮುಖ ನೀತಿ ಬದ ಲಾವಣೆ ಅಸಂಭವವಾದರೂ ಕೆಲವು ಪ್ರಮುಖ ಕ್ಷೇತ್ರಗಳಿಂದ ಬಲವಾದ ನಿರೀಕ್ಷೆಗಳಿವೆ. ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಇದು ಸತತ 6ನೇ ಬಾರಿಗೆ ಬಜೆಟ್‌. ಸತತ ಮಂಡನೆಗಳ ಲೆಕ್ಕಾಚಾರದಲ್ಲಿ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ನಿರ್ಮಲಾ ಸರಿಗಟ್ಟಲಿದ್ದಾರೆ.

Advertisement

ಮಧ್ಯಾಂತರ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರದ ನಿರೀಕ್ಷೆಗಳು ಹೆಚ್ಚಿವೆ. ಪ್ರಾಥಮಿಕ ಶಿಕ್ಷಣದಿಂದ ಉನ್ನತ ವ್ಯಾಸಂಗದ ವರೆಗೆ ದೇಶದ ಶೈಕ್ಷಣಿಕ ಮಾನದಂಡ ಗಳನ್ನು ಅಂತಾರಾಷ್ಟ್ರೀಯ ಮಾನ ದಂಡಗಳಿಗೆ ಹೊಂದಿಸುವಂಥ ಸವಾಲುಗಳನ್ನು ಎದುರಿಸಲು ಬಜೆಟ್‌ ಹಂಚಿಕೆಯನ್ನು ಪ್ರಸ್ತುತ ಶೇ. 2.9ರಿಂದ ಶೇ. 6ಕ್ಕೆ ಹೆಚ್ಚಿಸುವ ನಿರೀಕ್ಷೆ ಇದೆ.

ಮೂಲಸೌಕರ್ಯ ಅಭಿವೃದ್ಧಿಯ ಮೇಲೂ ಸರಕಾರ ಹೆಚ್ಚಿನ ಗಮನ ಹರಿಸಲಿದೆ. ಹೆದ್ದಾರಿಗಳು, ಸುರಂಗ, ವಿದ್ಯುತ್‌ ಸ್ಥಾವರಗಳ ಅಭಿವೃದ್ಧಿಗೆ ಮಣೆ ಹಾಕಲಿದೆ. ಜನಸಾಮಾನ್ಯರನ್ನು ಗಮನದಲ್ಲಿ ಇರಿಸಿಕೊಂಡು ಗ್ರಾಮೀಣ ಭಾಗಕ್ಕೆ ಆಯವ್ಯಯದಲ್ಲಿ ಹೆಚ್ಚಿನ ಆದ್ಯತೆ ನೀಡಬಹುದು. ರೈತರು ಮತ್ತು ಮಹಿಳೆಯರ ಕಲ್ಯಾಣ ಕಾರ್ಯ ಕ್ರಮಗಳನ್ನು ಹೊಂದಿರುವ ಪ್ರಸ್ತಾವ ಗಳು, ಅಡುಗೆ ಅನಿಲಕ್ಕೆ ಹೆಚ್ಚಿನ ಸಬ್ಸಿಡಿ ನೀಡುವ ಕುರಿತು ಪ್ರಸ್ತಾವ ಹೊಂದಿರ ಬಹುದು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next