Advertisement
ಕೇವಲ ದಿನವಲ್ಲ, ಬಲಿದಾನ ಮೇ 1ರಂದು ಕಾರ್ಮಿಕರ ದಿನವನ್ನಾಗಿ ಆಚರಣೆ ಮಾಡಲು ಒಂದು ಬಲವಾದ ಉದ್ದೇಶ, ಅದರ ಹಿಂದೆ ಬಲಿದಾನವಿದೆ. 1886 ರಲ್ಲಿ ಜಿನೇವಾದಲ್ಲಿ ಅಂತಾರಾಷ್ಟ್ರೀಯ ಕಾರ್ಮಿಕರ ಸಮ್ಮೇಳನದಲ್ಲಿ ಕಾರ್ಮಿಕರ ಕ್ಷೇಮಾಭ್ಯುದಯ ಹಾಗೂ ಜೀವನ ಭದ್ರತೆಯ ಬಗ್ಗೆ ಬಲವಾಗಿ ಪ್ರತಿಪಾದಿಸಲಾಯಿತು. ಇನ್ನು ಕಾರ್ಲ್ಮಾಕ್ಸ್, ಏಂಗೇಲ್ಸ್ ಅವರು ವಾದಿಸಿದ್ದ, ಪ್ರತಿಯೊಬ್ಬ ಕಾರ್ಮಿಕ ದಿನದಲ್ಲಿ 8 ಗಂಟೆಗಳು ಮಾತ್ರ ಕೆಲಸ ನಿರ್ವಹಿಸಬೇಕೆಂಬುದು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂಬ ನೀತಿಯನ್ನು ಕಡ್ಡಾಯ ಕಾನೂನುನಾಗಿ ತರಬೇಕು ಎಂದು ಒಕ್ಕೂರಲಿನ ಅಭಿಪ್ರಾಯಕ್ಕೆ ಬರಲಾಯಿತು. ಈ ಸಂಬಂಧವಾಗಿ ಸುಮಾರು 60 ಕಾರ್ಮಿಕ ಸಂಘಟನೆಗಳು ಹಾಗೂ ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಕೂಡ ಒಪ್ಪಿಕೊಂಡರು.
Related Articles
Advertisement
ಕಾರ್ಮಿಕ ವಿವಿಧ ಸಂಘಟನೆಭಾರತದಲ್ಲಿ ಕಾರ್ಮಿಕ ಚಳವಳಿ ಪ್ರಖರಗೊಂಡ ಬಳಿಕ ಅನೇಕ ಸಂಘಟನೆಗಳು ಹುಟ್ಟಿಕೊಂಡವು. ಅವುಗಳಲ್ಲಿ ಇಂಡಿಯನ್ ನ್ಯಾಶನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್, ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್, ಹಿಂದ್ ಮುಜ್ದೂರ್ ಸಂಘ, ಭಾರತೀಯ ಮುಜ್ದೂರ್ ಸಂಘ, ಸಿಐಟಿಯು, ಯುಟಿಟಿಸಿ, ಹಾಗೂ ಕರ್ನಾಟಕ ಟ್ರೇಡ್ ಯೂನಿಯನ್ ಸೆಂಟರ್‌ನಂತ ಇನ್ನು ಹಲವು ಸಂಘಟನೆಗಳು ಇಂದಿಗೂ ಕಾರ್ಮಿಕರ ಹಕ್ಕು ಬಾದ್ಯತೆಗಳ ಹಾಗೂ ಕಾರ್ಮಿಕರನ್ನು ಸಂಘಟಿಸುವಲ್ಲಿ ಯಶಸ್ವಿಯಾಗಿವೆ. ಕಾರ್ಮಿಕರ ಹಕ್ಕು ಬಾಧ್ಯತೆಗಳನ್ನು ರಕ್ಷಣೆ, ಹಿತಾಸಕ್ತಿ ಕಾಪಾಡುವ ಸಲುವಾಗಿಯೇ ಹಲವಾರು ಕಾಯ್ದೆ ಕಾನೂನುಗಳನ್ನು ರಚಿಸಲಾಗಿದೆ. ಪ್ರಸ್ತುತ ಸ್ಥಿತಿಗತಿ
ಕಾಲ ಬದಲಾದಂತೆ ಪರಿಸ್ಥಿತಿಗಳು ಬದಲಾಗಿವೆ. ಶ್ರಮಿಕ ವರ್ಗ ಆಚರಿಸಬೇಕಾಗಿದ್ದ ಈ ದಿನ ಕೇವಲ ಕಚೇರಿ ಕೆಲಸಗಾರರಿಗೆ ಸೀಮಿತವಾಗಿದೆ. ಯಾರು ದಿನಪೂರ್ತಿ ಬಿಸಿಲಿನಲ್ಲಿ ಒಣಗುತ್ತಾರೋ, ಯಾರು ಬೆವರು ಸುರಿಸಿ, ದೈಹಿಕ ಶ್ರಮದೊಂದಿಗಿನ ಬದುಕನ್ನು ನೆಚ್ಚಿಕೊಂಡಿದ್ದಾರೋ ಅವರು ದಿನದ 365 ದಿನವೂ ದುಡಿದು ಜೀವನ ನಡೆಸಬೇಕಾದ ಸ್ಥಿತಿಯಿದೆ.
- ಭುವನ ಬಾಬು, ಪುತ್ತೂರು