Advertisement
ವಿಯೆಟ್ನಾಮ್ ದ ಹನೋಯಿಯ ಹತ್ತಿರದ ವ್ಯಾನ್ ಫುಕ್ ಹಳ್ಳಿಯ Dong Nguyen ಹೆಸರಿನ ಒಬ್ಬ ಗೇಮ್ ಡೆವೆಲಪರ್ ಸೃಷ್ಟಿಸಿದ ‘ಪ್ಲಾಪ್ಪಿ ಬರ್ಡ್” ನಲ್ಲಿಯ ಪ್ರಮುಖ ಪಾತ್ರದಲ್ಲಿ ಇದ್ದದ್ದೇ ಈ ಫ್ಯಾಬಿ.
Related Articles
Advertisement
ಈ ಹಿಂದೆ ಬಂದಿರುವ ಹೆಲಿಕ್ಯಾಪ್ಟರ್ ಆಟದ ಪರಿಕಲ್ಪನೆ ಮತ್ತು ಪ್ರಖ್ಯಾತ ವಿಡಿಯೋ ಗೇಮ್ ಆಟವಾದ ಸೂಪರ್ ಮಾರಿಯೋ ಗ್ರಾಫಿಕ್ಸ್ ಹೋಲಿಕೆಯ ಹಸಿರು ಪೈಪುಗಳು ಒಳಗೊಂಡ ಆಟವೇ “ಪ್ಲಾಪ್ಪಿ ಬರ್ಡ್”.
ಆಟದ ಸಂಪೂರ್ಣ ಕಾರ್ಯ ಮುಗಿದ ನಂತರ ಗೇಮ್ ಡೆವೆಲಪರ್ ಅದಕ್ಕೆ “ಪ್ಲಾಪ್ ಪ್ಲಾಪ್” ಹೆಸರಿನ ಅಡಿಯಲ್ಲಿ ಅಪ್ಲಿಕೇಶನ್ ಸ್ಟೋರ್ ಗೆ ನೋಂದಾವಣೆ ಸಲ್ಲಿಸುತ್ತಾನೆ, ಆದರೆ ಅದಾಗಲೇ ಈ ಹೆಸರಿನ ಆಟವೊಂದು ಇರುವುದರಿಂದ “ಪ್ಲಾಪ್ ಪ್ಲಾಪ್” ಹೆಸರನ್ನು “ಪ್ಲಾಪ್ಪಿ ಬರ್ಡ್” ಎಂದು ಮರು ನಾಮಕರಣ ಮಾಡಿ ಆಪಲ್ ಸ್ಟೋರ್ ನಲ್ಲಿ ಮೇ 2012 ರಲ್ಲಿ ಪ್ರಕಟಿಸಲಾಗುತ್ತದೆ. ಬೆರಳೆಣಿಕೆಯಷ್ಟು ಪ್ರತಿಕ್ರಿಯೆ ಜೊತೆ ಕೆಲವೇ ಕೆಲವು ಡೌನಲೋಡ್ ಅಂಕಿ ಅಂಶದೊಂದಿಗೆ ಪ್ಲಾಪ್ಪಿ ಬರ್ಡ್ ನಿರಾಶಾದಾಯಕ ಸ್ಥಿತಿಯಲ್ಲಿ ಇರುತ್ತದೆ.
ಸೆಪ್ಟೆಂಬರ್ 2012 ರಲ್ಲಿ ಗೇಮ್ ಡೆವೆಲಪರ್ Dong Nguyen “ಪ್ಲಾಪ್ಪಿ ಬರ್ಡ್” ಗೆ ಅಪ್ಡೇಟ್ ಕೊಡುತ್ತಾನೆ. ಆದರೂ ಗೇಮ್ ಡೌನ್ಲೋಡ್ ನಲ್ಲಿ ಯಾವುದೇ ರೀತಿಯ ಬದಲಾವಣೆ ಕಾಣಿಸುವುದಿಲ್ಲ. “ಪ್ಲಾಪ್ಪಿ ಬರ್ಡ್” ಲಕ್ಷಾಂತರ ಆಟಗಳ ನಡುವೆ ಅಪರಿಚಿತವಾಗಿಯೇ ಉಳಿದು ಬಿಡುತ್ತದೆ.
ಅಕ್ಟೋಬರ್ 2012 ರಲ್ಲಿ ಇದ್ದಕ್ಕಿದ್ದ ಹಾಗೆ “ಪ್ಲಾಪ್ಪಿ ಬರ್ಡ್” ಆಪಲ್ ಅಪ್ಲಿಕೇಶನ್ ಸ್ಟೋರ್ ನ ಫ್ಯಾಮಿಲಿ ವಿಭಾಗದಲ್ಲಿ 1469 ನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆ.ಇದರೊಂದಿಗೆ ಕೆಲವು ಡೌನ್ಲೋಡ್ಸ್,ಟ್ವೀ ಟ್ ಮತ್ತು ಆಪಲ್ ಸ್ಟೋರ್ ನಲ್ಲಿ ಪ್ರತಿಕ್ರಿಯೆಗಳ ಜೊತೆ “ಪ್ಲಾಪ್ಪಿ ಬರ್ಡ್” ಹಾರಾಟ ಶುರುವಾಗುತ್ತೆ.
ಟ್ವೀಟ್ ಮೂಲಕ ಆಂಡ್ರಾಯ್ಡ್ ಆಟವನ್ನು ಅಪ್ಲೋಡ್ ಮಾಡುವಂತೆ ಮನವಿಯು ಬರುತ್ತದೆ. ಗೇಮ್ ಡೆವೆಲಪರ್ Dong Nguyen “ಪ್ಲಾಪ್ಪಿ ಬರ್ಡ್” ಆಂಡ್ರೋಯ್ಡ್ ಗೆ ಸದ್ಯದಲ್ಲಿಯೇ ಅಪ್ಲೋಡ್ ಮಾಡುವುದಾಗೆ ಹೇಳಿಕೊಳ್ಳುತ್ತಾನೆ.
ಆಟದ ಅಸ್ತಿತ್ವ ಕಾಣಿಸಿಕೊಳ್ಳುವುದರ ಜೊತೆ ಜೊತೆಗೆ ಆಟಗಾರರು ಒಂದು ರೀತಿಯ ಮಿಶ್ರ ಪ್ರತಿಕ್ರಿಯೆಗಳು ಬರುತ್ತವೆ. “ಪ್ಲಾಪ್ಪಿ ಬರ್ಡ್” ನಲ್ಲಿ ಹೆಲಿಕ್ಯಾಪ್ಟರ್ ಮತ್ತು ಸೂಪರ್ ಮಾರಿಯೋ ಹೋಲಿಕೆಗಳು ಇದ್ದವು, ಈ ಆಟದ ಒಂದು ವೈಶಿಷ್ಟ ಏನಂದರೆ,ಈ ಆಟಕ್ಕೆ ಕೊನೆಯೇ ಇಲ್ಲ.
ಹಕ್ಕಿಯು ಟ್ಯಾಪ್ ಮಾಡುವ ಮೂಲಕ ಗಾಳಿಯಲ್ಲಿ ಇರಿಸಬೇಕು, ದಾರಿಯಲ್ಲಿ ಬರುವ ಹಸಿರು ಪೈಪಗಳ ನಡುವೆ ಹಕ್ಕಿಯನ್ನು ಹಾರಿಸುತ್ತ ಹೋಗಬೇಕು.
ಟ್ಯಾಪ್ ಮಾಡುವದನ್ನು ನಿಲ್ಲಿಸಿದರೆ ಹಕ್ಕಿ ಕೆಳಗೆ ಬೀಳುತ್ತದೆ, ಹೆಚ್ಚಿಗೆ ಟ್ಯಾಪ್ ಮಾಡಿದರೆ ಮೇಲಿನ ಹಸಿರು ಪೈಪ್ ಗೆ ಡಿಕ್ಕಿ ಹೊಡೆಯುತ್ತದೆ. ಆಟಗಾರ ಒಂದೊಂದು ಪೈಪ್ ದಾಟಿದ ನಂತರ ಒಂದು ಅಂಕವನ್ನು ಹೆಚ್ಚಿಸುತ್ತ ಹೋಗಲಾಗುವುದು. ಎಷ್ಟು ದೂರ ಹೋದರು ಇದು ಕೊನೆಯೇ ಇಲ್ಲದ ಆಟ.
ಇಲ್ಲಿ ಆಟಗಾರನಿಗೆ ಒಂಥರಾ ಗೀಳು ಅಂಟಿಕೊಂಡಂತೆ ಪದೇ ಪದೇ ಆಡಲು ಆರಂಭಿಸುತ್ತಾನೆ, ಕೆಲವು ಆಟಗಾರರು ಈ ವೈಶಿಷ್ಟವನ್ನು ತುಂಬಾ ಇಷ್ಟ ಪಟ್ಟರೆ ಕೆಲವರಿಗೆ ಇದು ಚಟದಂತೆ ಕಾಣಿಸಿತು.
ಇದೆಲ್ಲದರ ನಡುವೆಯೇ 13 ಜನವರಿ 2014 ರಲ್ಲಿ ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತದೆ. ಹತ್ತಾರು ಹಕ್ಕಿಗಳ ಜೊತೆಗೆ “ಪ್ಲಾಪ್ಪಿ ಬರ್ಡ್” ಹಾರಾಟ ಶುರುವಾದಂತೆ ಇನ್ನಿತರ ಗೇಮ್ ಡೆವಲಪಿಂಗ್ ಕಂಪನಿಗಳು ಮತ್ತು ಗೇಮ್ ಡೆವೆಲೊಫೇರ್ಸ್ ಗಳ ಗಮನಸೆಳೆಯುತ್ತದೆ.
ಒಂದು ಗೇಮ್ ಕಂಪನಿ ಟ್ವಿಟ್ಟರ್ ನಲ್ಲಿ Dong Nguyen ಶುಭಾಶಯ ಕೋರುವುದರ ಜೊತೆಗೆ ಪ್ರಚಾರದ ಗುಟ್ಟನ್ನು ತಿಳಿಸಿ ಎಂದು ಕೇಳುತ್ತಾರೆ. Dong Nguyen ಧನ್ಯವಾದ ತಿಳಿಸಿ ತಾನು ಯಾವುದೇ ರೀತಿಯ ಪ್ರಚಾರ ಮಾಡಿರುವುದಿಲ್ಲ ಎಂದು ತಿಳಿಸುತ್ತಾನೆ.
18 ಜನವರಿ 2014 ರಂದು “ಪ್ಲಾಪ್ಪಿ ಬರ್ಡ್” ಉಚಿತವಾಗಿ ಡೌನ್ಲೋಡ್ ಮಾಡಬಲ್ಲ ಆಟಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನವನ್ನು ಪಡೆಯುತ್ತದೆ. ಇದನ್ನು ಸ್ವತಃ Dong Nguyen ತನ್ನ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸುತ್ತಾನೆ.
ಮುಂದೆ 22 ಜನವರಿ 2014 ರಂದು “ಪ್ಲಾಪ್ಪಿ ಬರ್ಡ್” ಆಂಡ್ರಾಯ್ಡ್ ಪ್ಲೇ ಸ್ಟೋರ್ ನಲ್ಲಿ ಅಪ್ಲೋಡ್ ಮಾಡಿ ಮಾರನೇಯ ದಿನ Dong Nguyen ತನ್ನ ಟ್ವಿಟ್ಟರ್ ಖಾತೆಯಲ್ಲಿ ಡೌನಲೋಡ್ ಲಿಂಕ್ ಪ್ರಕಟಿಸುತ್ತಾನೆ. ಒಂದೇ ವಾರದ ಅವಧಿಯಲ್ಲಿ ಅತಿ ಹೆಚ್ಚು ಡೌನ್ಲೋಡ್ ಮಾಡಿದ ಪಟ್ಟಿಯಲ್ಲಿ ಅಗ್ರ ಸ್ಥಾನ ತನ್ನದಾಗಿಸಿಕೊಂಡ ಆಟ ಜನಪ್ರಿಯ ಪತ್ರಿಕೆಗಳಲ್ಲಿ ಜಾಗ ಪಡೆಯುತ್ತದೆ.
ಹಲವಾರು ಪತ್ರಿಕೆಗಳು Dong Nguyen ನನ್ನು ಸಂಪರ್ಕಿಸಲು ಪ್ರಾರಂಭಿಸುತ್ತಾರೆ.ಆದರೆ Dong Nguyen ಕೆಲವೇ ಕೆಲವು ಹೇಳಿಕೆಯನ್ನು ನೀಡುತ್ತಾನೆ. ತಾನು ರಚಿಸಿದ ಆಟ ಅದು ಹೇಗೆ ಇಷ್ಟು ಜನಪ್ರಿಯ ಆಗಿದೆ ಎಂಬುದು ತನಗೂ ತಿಳಿದಿಲ್ಲ, ತನ್ನ ಆಟವನ್ನು ಹೆಚ್ಚಾಗಿ ಶಾಲೆಯ ಮಕ್ಕಳು ಆಡುವದರಿಂದ ಅವರಿಂದಲೇ ಪ್ರಚಾರ ಆಗಿರಬಹುದು, ಆಟವಾಡಿದ ಮತ್ತು ಇತರರಿಗೆ ಹಂಚಿದ ಎಲ್ಲಾ ಆಟಗಾರರಿಗೆ ಧನ್ಯವಾದ ತಿಳಿಸುತ್ತಾನೆ.
ಅದೇ ಸಮಯದಲ್ಲಿ Dong Nguyen ಗೆ ಹಲವಾರು ಪ್ರಶ್ನೆಗಳು ಬರುತ್ತವೆ, ಪ್ರಚಾರಕ್ಕೆ ಬಳಸಿದ ತಂತ್ರ, ಒಳ್ಳೆಯ ಪ್ರತಿಕ್ರಿಯೆಗಳನ್ನು ತಾವೇ ದುಡ್ಡು ಕೊಟ್ಟು ಬರೆಸಿರುವುದರ ಬಗ್ಗೆ?, ಕ್ರಾಸ್ ಪ್ಲಾಟ್ಫಾರ್ಮ್ ಬಳಸಿ ಪ್ರಚಾರ ಮಾಡಿದ್ದೀರಾ? ಬೊಟ್ ಗಳ ಸಹಾಯದಿಂದ ರಾಂಕ್ ಅಥವಾ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರಾ?
Dong Nguyen ಎಷ್ಟು ಬೇಸತ್ತಿದ್ದ ಎಂದರೆ ತನ್ನ ಆಟದ ಬಗ್ಗೆ ಅತಿಯಾದ ಪ್ರಚಾರವನ್ನು ನಿಲ್ಲಿಸಿ ತನಗೆ ಮತ್ತು ತನ್ನ ಆಟವನ್ನು ತನ್ನ ಪಾಡಿಗೆ ಬಿಟ್ಟು ಬಿಡಿ ಎಂದು ತನ್ನ ಟ್ವಿಟ್ಟರ್ ಖಾತೆಯಲ್ಲಿ ಕೇಳಿಕೊಳ್ಳುತ್ತಾನೆ.
ದಿನವೊಂದಕ್ಕೆ 50 ಸಾವಿರ ಡಾಲರ್ ಹಣವನ್ನು ಈ ಆಟ ಸಂಪಾದನೆ ಮಾಡುತ್ತಿದ್ದು, ಆಟವು ಬೇರೆ ಆಟಗಳಿಂದ ಪ್ರೇರಣೆಯಾಗಿದೆ ಅದು ನಿನ್ನ ಸ್ವಂತದಲ್ಲ ಎಂಬ ಪ್ರಶ್ನೆಯು Dong Nguyen ಗೆ ಕೇಳಲಾಗುತ್ತದೆ. ಅದಕ್ಕೆ ಉತ್ತರವಾಗಿ ಬೇರೆ ಆಟಗಳ ಪರಿಕಲ್ಪನೆ ಛಾಯೆಗಳು ಇದ್ದರೂ ಸಂಪೂರ್ಣ ಆಟದ ಮೇಲೆ ನನ್ನದೇ ಹಕ್ಕಿದೆ ಎಂದು ತನ್ನನು ತಾನೇ ಬೆಂಬಲಿಸಿಕೊಳ್ಳುತ್ತಾನೆ Dong Nguyen.
ಫೆಬ್ರವರಿ 3. 2014 ರಂದು ಆಪಲ್ ಸ್ಟೋರ್ ಗೆ ಒಂದು ಅಪ್ಡೇಟ್ ಬರುತ್ತದೆ ಅದರಲ್ಲಿ ಸ್ವಲ್ಪ ಗ್ರಾಫಿಕ್ ಬದಲಾವಣೆಯೊಂದಿಗೆ ಆಟವನ್ನು ಸ್ವಲ್ಪ ಸರಳ ರೀತಿಯಲ್ಲಿ ಮಾರ್ಪಾಡು ಮಾಡಲಾಗುತ್ತದೆ.
ಆಟಗಾರರು Dong Nguyen ಮೇಲೆ ತಮ್ಮ ಕೋಪವನ್ನು ಟ್ವಿಟ್ಟರ್ ಮೂಲಕ ತೋರಿಸುತ್ತಾರೆ ಮೊದಲನೇ ಆವೃತ್ತಿಯೇ ಸರಿಯಾಗಿತ್ತು ಬದಲಾವಣೆ ನಮಗೆ ಇಷ್ಟವಾಗಿಲ್ಲ ಎಂಬ ಮಾತಿಗೆ ಆಡಿಸಿದಾತ Dong Nguyen ಬದಲಾವಣೆ ಆಟಗಾರರಿಗಾಗಿ ಸರಳತೆಯನ್ನು ತಂದಿದೆ ಎಂದು ಹೇಳುತ್ತಾನೆ.
‘ಪ್ಲಾಪ್ಪಿ ಬರ್ಡ್” ಗೆಲುವು ನನ್ನದು, ಆದರೂ ಅದು ನನ್ನ ಸರಳತೆಯ ಬದುಕನ್ನು ಹಾಳು ಮಾಡಿದೆ ಅದಕ್ಕೆ ಈ ಆಟ ಇತ್ತೀಚಿಗೆ ನನಗೆ ಇಷ್ಟವಾಗುತ್ತಿಲ್ಲ ಎಂದು ಹೇಳುವ ಮೂಲಕ ತನ್ನ ದುಗುಡವನ್ನು ಆಡಿಸಿದಾತ ಹೊರಹಾಕುತ್ತಾನೆ.
ಆಟಗಾರರು ತನ್ನ ಆಟವನ್ನು ಅತಿ ಹೆಚ್ಚಾಗಿ ಬಳಸುತ್ತಿದ್ದಾರೆ ಅದು ನನಗೆ ಇಷ್ಟವಾಗುತ್ತಿಲ್ಲ ಎಂದು ಮತ್ತೆ ಟ್ವಿಟ್ಟರ್ ಮೂಲಕ Dong Nguyen ಹೇಳುತ್ತಾನೆ.
ಅತ್ಯುನ್ನತ ಸ್ಥಾನದಲ್ಲಿ ತನ್ನ ಆಟದ ಹಕ್ಕಿ “ಪ್ಲಾಪ್ಪಿ ಬರ್ಡ್” ಹಾರುತ್ತಿರುವಾಗಲೇ, 9 ಫೆಬ್ರುವರಿ 2014 ರಂದು Dong Nguyen ಮತ್ತೆ ಟ್ವಿಟ್ಟರ್ ನಲ್ಲಿ ಸಾಲು ಸಾಲು ಟ್ವೀಟ್ ಗಳ ಮೂಲಕ ಅಚ್ಚರಿಯ ವಿಷಯವನ್ನು ತಿಳಿಸುತ್ತಾನೆ.
‘ಪ್ಲಾಪ್ಪಿ ಬರ್ಡ್” ಆಟಗಾರರೇ ನಾನು ನಿಮ್ಮಲ್ಲಿ ಕ್ಷಮೆಯಾಚಿಸುತ್ತಿದ್ದೇನೆ, ಇಲ್ಲಿಂದ 22 ಗಂಟೆಯೊಳಗೆ ನಾನು ‘ಪ್ಲಾಪ್ಪಿ ಬರ್ಡ್’ನ್ನು ಹಿಂಪಡೆಯುತ್ತೇನೆ,ಇನ್ನು ನನ್ನಿಂದ ಇದನ್ನು ಸಹಿಸಲಾಗುವುದಿಲ್ಲ”
‘ಯಾವುದೇ ಕಾನೂನಿನ ಸಮಸ್ಯೆಯೂ ಇಲ್ಲಾ,ಇನ್ನು ನಾನು ಇದನ್ನು ಸಹಿಸಲಾರೆ”
“ಪ್ಲಾಪ್ಪಿ ಬರ್ಡ್” ನ್ನು ನಾನು ಯಾರಿಗೂ ಮಾರುವದಿಲ್ಲ, ಯಾರು ಕೊಂಡುಕೊಳ್ಳಲು ನನ್ನನ್ನು ಕೇಳಬೇಡಿ ”
“ಇನ್ನು ಮುಂದೆಯೂ ನಾನೂ ಬೇರೆ ಆಟಗಳನ್ನು ರಚಿಸುತ್ತೇನೆ”
ಹಲವಾರು ಜನರು ಇದು ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಮಾಡಿದ ಟ್ವೀಟ್ ಎಂದು ಕರೆದರು, ಅದೇ ದಿನ ಆಪಲ್ ಸ್ಟೋರ್ ಮತ್ತು ಗೂಗಲ್ ಪ್ಲೇ ಸ್ಟೋರ್ ನಿಂದ “ಪ್ಲಾಪ್ಪಿ ಬರ್ಡ್” ಆಟವನ್ನು ಹಿಂಪಡೆಯಲಾಯಿತು.
“ಪ್ಲಾಪ್ಪಿ ಬರ್ಡ್” ಟಾಪ್ ಟೆನ್ ಸ್ಥಾನಕ್ಕೆ ಬಂದು ಕೇವಲ 28 ದಿನಗಳ ಬಳಿಕವೇ ಹಾರಾಟ ನಿಲ್ಲಿಸಿತ್ತು, 50 ಮಿಲಿಯನ್ ಡೌನ್ ಲೋಡ್ 16 ಮಿಲಿಯನ್ ಟ್ವೀಟ್ ಗಳ ಅಸಾಧಾರಣ ಜನಪ್ರಿಯತೆಯ ಹಕ್ಕಿ ಗೂಡಿಗೆ ಮರಳಿತ್ತು.
ಕೆಲವೇ ದೀನಗಳಲ್ಲಿ ಅದೇ ರೀತಿಯ ಹಲವಾರು ಆಟಗಳು ಪ್ಲೇ ಸ್ಟೋರ್ ನಲ್ಲಿ ಕಾಣಿಸಿಕೊಂಡವು, “ಪ್ಲಾಪ್ಪಿ ಬರ್ಡ್” ಇರುವ ಮೊಬೈಲ್ ಫೋನ್ ಗಳು ಅಂತರಜಾಲದಲ್ಲಿ ಮಾರಾಟಕ್ಕೆ ಇಡಲಾಯಿತು. ಆದರೆ ಹಾರಿದ ಹಕ್ಕಿ ಮಾತ್ರ ಗೂಡಿನಲ್ಲೇ ಇತ್ತು. ಮತ್ತೆ Dong Nguyen ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ಕೊಡಲಿಲ್ಲ…..
ಆಗ ಜಗತ್ತಿಗೆ ಜಗತ್ತೆ Dong Nguyen ಬಗ್ಗೆ ಇದೆ ಮಾತನ್ನು ಹೇಳಿಕೊಂಡಿರಬೇಕು ……
ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದಾ….
– ಆನಂದ್ ಸಿ. ಆರ್.