Advertisement

ದೇಶದ ಅಖಂಡತೆ ಮುಖ್ಯ

11:46 PM Aug 05, 2019 | Lakshmi GovindaRaj |

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ 10 ದಿನವಾದರೂ ಸಂಪುಟ ರಚಿಸಿಲ್ಲ ಎಂದು ಪ್ರತಿಪಕ್ಷದವರು ಟೀಕಿಸಬಹುದು. ನಮಗೆ ಸರ್ಕಾರ ಮಾಡುವುದು, ಪಕ್ಷದ ನಾಯಕರು, ಕಾರ್ಯಕರ್ತರನ್ನು ಅಧಿಕಾರದಲ್ಲಿ ಕೂರಿಸುವುದೇ ಮುಖ್ಯವಲ್ಲ.

Advertisement

ದೇಶವನ್ನು ಸದೃಢಗೊಳಿಸುವುದು, ಅಖಂಡವಾಗಿರಿಸುವ ನಿಟ್ಟಿನಲ್ಲಿ ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರು ನಿರತರಾಗಿರುವುದರಿಂದ ರಾಜ್ಯ ಸರ್ಕಾರದ ಸಂಪುಟ ರಚನೆಗೆ ತುಸು ವಿಳಂಬವಾಗಿದೆಯಷ್ಟೇ ಎಂದು ಗೋವಿಂದ ಕಾರಜೋಳ ಹೇಳಿದರು. ಮುಂದಿನ ಮೂರು ತಿಂಗಳಲ್ಲಿ ರಾಜ್ಯ ಸರ್ಕಾರದ ಆಡಳಿತದಲ್ಲಿ ಬದಲಾವಣೆ ಕಾಣಲಿದೆ ಎಂದರು. ಎರಡು ತಿಂಗಳ ಸಮಯಾವಕಾಶ ನೀಡಿ. ಎಲ್ಲರಿಗೂ ಸಮಾಧಾನವಾಗುವರ ರೀತಿಯಲ್ಲಿ ಸರ್ಕಾರ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದರು.

ಸಮಗ್ರ ರಾಜ್ಯದ ಹಿತ ಗಮನದಲ್ಲಿಟ್ಟುಕೊಂಡೇ ಸಂಪುಟ ರಚನೆಯಾಗಲಿದೆ. ಕೇಂದ್ರ ಸರ್ಕಾರ ಪ್ರಮುಖ ನಿರ್ಧಾರ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ನಾಯಕರಿಗೆ ಸದ್ಯದಲ್ಲೇ ರಾಷ್ಟ್ರೀಯ ನಾಯಕರು ಸಮಯ ನೀಡಲಿದ್ದು, ಶೀಘ್ರ ಸಂಪುಟ ರಚನೆಯಾಗಲಿದೆ.
-ಸಿ.ಟಿ.ರವಿ,ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next