Advertisement

ಸೇತುವೆ ಕಾಮಗಾರಿ ವೇಳೆ ಸೂಚನಾ ಫಲಕ ಅಳವಡಿಕೆ ಬಗ್ಗೆ ನಿರ್ಲಕ್ಷ

01:00 AM Mar 15, 2019 | Team Udayavani |

ಕಟಪಾಡಿ: ಅಭಿವೃದ್ಧಿ ಕಾಮಗಾರಿಗಾಗಿ  ಕಟಪಾಡಿ ಹಳೆ ಎಂಬಿಸಿ ರಸ್ತೆಯಲ್ಲಿನ ನಿತ್ಯಾನಂದ ಸಭಾಭವನದ ಬಳಿಯಲ್ಲಿನ ಹಳೆ ಸೇತುವೆ ಕೆಡವಿದ್ದು ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದರಿಂದ ಸಂಚಾರಿಗಳಿಗೆ ಗೊಂದಲ ಮೂಡಿಸುತ್ತಿದೆ.  

Advertisement

ಮಂಗಳೂರು ಭಾಗದಿಂದ ರಾ.ಹೆ.ಯಿಂದ ನೇರವಾಗಿ ಕಲ್ಲಾಪು ಬಳಿ ಒಳ ಪ್ರವೇಶಿಸುವಲ್ಲಿ ಸೂಚನಾ ಫಲಕಗಳನ್ನು ಇರಿಸಿಲ್ಲ. ಕಟಪಾಡಿ ಒಳ ಭಾಗದಿಂದ ಸಂಚರಿಸುವ ವಾಹನಗಳಿಗೂ ಗೊಂದಲಕಾರಿಯಾಗಿದೆ. ಸೇತುವೆಯ ಹೊಂಡ, ಅವಶೇಷಗಳು ಅಪಾಯಕಾರಿಯಾಗಿ ಪರಿಣಮಿಸಿದ್ದು, ಬುಧವಾರ ರಾತ್ರಿ ಇಲ್ಲಿ ಸವಾರರೊಬ್ಬರು ಅಪಘಾತಕ್ಕೀಡಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.  

ಸೇತುವೆ ಕೆಡವಿದ್ದರೂ, ಬಹುದೂರದಿಂದಲೇ ಇದರ ಬಗ್ಗೆ ಮುನ್ನೆಚ್ಚರಿಕೆ ಹಾಕಿಲ್ಲ. ಸಂಚಾರ ನಿಷಿದ್ಧಗೊಳಿಸಿಲ್ಲ ಇದರಿಂದ ಅಪಾಯಕ್ಕೆರವಾಗುತ್ತಿದೆ ಎಂದು ಜನತೆ ಗುತ್ತಿಗೆದಾರರು ಮತ್ತು ಅಧಿಕಾರಿಗಳನ್ನು ದೂರಿದ್ದಾರೆ.  

ಕಾಮಗಾರಿ ಮುಕ್ತಾಯಗೊಂಡು ವಾಹನ ಸಂಚಾರಕ್ಕೆ ಮುಕ್ತವಾಗುವಲ್ಲಿವರೆಗೆ ರಸ್ತೆಯ ಎರಡೂ ಕಡೆಗಳಲ್ಲಿ ಎಚ್ಚರಿಕೆ ಫ‌ಲಕ ಅಳವಡಿಸಲು ಆಗ್ರಹಿಸಲಾಗಿದೆ.  

ಸುರಕ್ಷತಾ ಕ್ರಮ ಕೈಗೊಳ್ಳಲಾಗುವುದು
ತೆಂಗಿನ ಮರದ ತುಂಡುಗಳನ್ನು ಇಡಲಾಗಿತ್ತು. ಆದರೆ ಇವುಗಳನ್ನು  ದಾರಿಹೋಕರು ತೆರವುಗೊಳಿಸಿದ್ದರು. ಅಪಾಯ ಸಂಭವಿಸಿದ್ದು ಗಮನಕ್ಕೆ ಬಂದಿದೆ. ಹೆಚ್ಚಿನ ಸುರಕ್ಷತಾ ಕ್ರಮವನ್ನು ಕೈಗೊಳ್ಳಲಾಗುತ್ತದೆ. 
-ಸವಿತಾ, ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next