ಗುಂಡ್ಲುಪೇಟೆ: ರೈತನ ಮಗಳ ಸಾಧನೆ ಇತರ ರೈತರ ಮಕ್ಕಳಿಗಷ್ಟೇ ಅಲ್ಲ ಎಲ್ಲಾ ವಿದ್ಯಾರ್ಥಿಗಳಿಗೂ ಸ್ಫೂರ್ತಿಯಾಗಿರುವ ಘಟನೆ ಈ ಬಾರಿಯ ಎಸ್ಸೆಸ್ಸೆಎಲ್ಸಿ ಪರೀಕ್ಷೆಯಲ್ಲಿ ನಡೆದಿದೆ.
ಪಟ್ಟಣದ ಸೆಂಟ್ ಜಾನ್ ಆಂಗ್ಲ ಮಧ್ಯಮ ಶಾಲೆ ವಿದ್ಯಾರ್ಥಿನಿಯಾದ ಸ್ಫೂರ್ತಿ ಕನ್ನಡ 124, ಇಂಗ್ಲಿಷ್ 96, ಸಮಾಜ ವಿಜ್ಞಾನ 98 ಅಂಕ ಪಡೆದಿದ್ದರೆ, ಗಣಿತ, ವಿಜ್ಞಾನ ಮತ್ತು ಹಿಂದಿ ಯಲ್ಲಿ 100ಕ್ಕೆ 100 ಅಂಕ ಗಳಿಸಿ ಸೆಂಟ್ ಜಾನ್ ಪ್ರೌಢಶಾಲೆ, ತಾಲೂಕಿಗಷ್ಟೇ ಅಲ್ಲದೇ, ಇಡೀ ಜಿಲ್ಲೆಗೆ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.
ನಾನು ಡಾಕ್ಟರ್ ಆಗಬೇಕು: ಈ ಬಗ್ಗೆ ಉದಯವಾಣಿ ಜೊತೆ ವಿದ್ಯಾರ್ಥಿನಿ ಸ್ಫೂರ್ತಿ ಮಾತನಾಡಿ, ನಾನು ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಳ್ಳುತ್ತೇನೆ. ಏಕೆಂದರೆ ನಾನು ಡಾಕ್ಟರ್ ಆಗಬೇಕು. ಅಪ್ಪ ಮತ್ತು ಅಮ್ಮನಿಗೂ ನಾನು ಡಾಕ್ಟರ್ ಆಗಬೇಕೆಂಬ ಆಸೆಯಿದೆ. ಗಣಿತ ವಿಷಯಕ್ಕೆ ಮಾತ್ರ ನಾನು ಟ್ಯೂಷನ್‌ಗೆ ಹೋಗುತ್ತಿದ್ದೆ. ನಮ್ಮ ಶಾಲೆಯಲ್ಲೇ ಗಣಿತ ಪಾಠ ಚೆನ್ನಾಗಿ ಮಾಡುತ್ತಿದ್ದರು. ಆದರೆ ಅಪ್ಪ ಮತ್ತು ಅಮ್ಮ ಟ್ಯೂಷನ್‌ಗೆ ಹೋಗು ಎಂದು ಒತ್ತಾಯ ಮಾಡಿದ್ದರಿಂದ ಟ್ಯೂಷನ್‌ಗೆ ಹೋದೆ. ಇದರಿಂದಾಗಿ ಗಣಿತದಲ್ಲಿ 100 ಅಂಕ ಗಳಿಸಲು ಸಾಧ್ಯವಾಯಿತು ಎಂದು ಸಂಸತ ಹಂಚಿಕೊಂಡಳು.
ಉತ್ತಮ ಅಭ್ಯಾಸ ಹೀಗಿತ್ತು: ಪ್ರತಿ ನಿತ್ಯವೂ ಎಲ್ಲ ವಿಷಯಗಳ ಪಾಠ ಕೇಳಿದ ನಂತರ ಮನೆಯಲ್ಲಿ ಬೆಳಗ್ಗೆ ಮತ್ತು ರಾತ್ರಿ ಅಭ್ಯಾಸ ನಡೆಸುತ್ತಿದ್ದೆ. ಬೆಳಗ್ಗೆ 4 ಗಂಟೆಗೆ ಎದ್ದು 8ರ ತನಕ ಓದುತ್ತಿದ್ದೆ. ರಾತ್ರಿ 12 ಗಂಟೆ ವರೆಗೆ ಓದುತ್ತಿದ್ದೆ ಎಂದು ತನ್ನ ಅಭ್ಯಾಸದ ಬಗ್ಗೆ ವಿವರಿಸಿದರು.
Advertisement
ತಾಲೂಕಿನ ಚಿಕ್ಕತುಪ್ಪೂರು ಗ್ರಾಮದ ರೈತ ಮಹೇಶ್ ಮತ್ತು ಪುಟ್ಟಮ್ಮ ದಂಪತಿಗಳ ಪುತ್ರಿ ಸ್ಫೂರ್ತಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಇತರ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ.
Related Articles
Advertisement
ತಂದೆಯ ಕಣ್ಣಲ್ಲಿ ಆನಂದ ಭಾಷ್ಪಾ: ಮಗಳು ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ ಖುಷಿ ಯನ್ನು ಪತ್ರಿಕೆಯೊಂದಿಗೆ ಹಂಚಿಕೊಂಡ ಕೃಷಿಕ ಮಹೇಶ್, ಮಗಳು ಮನೆಯಲ್ಲಿ ಚೆನ್ನಾಗಿ ಓದು ತ್ತಿದ್ದಳು, ಬಿಡುವಿನ ವೇಳೆ ಕೃಷಿ ಕಾರ್ಯದಲ್ಲೂ ನೆರವಾಗುತ್ತಿದ್ದಳು. ನಾವು ಅವಳ ಓದಿಗೆ ಖಂಡಿತಾ ಪ್ರೋತ್ಸಾಹ ನೀಡುತ್ತೇವೆ. ಅವಳು ಎಲ್ಲಿಯವಗೂ ಓದಲಿ ಓದಿಸುತ್ತೇವೆ. ಅವಳಿಗೆ ಡಾಕ್ಟರ್ ಆಗಬೇಕೆಂಬ ಆಸೆಯಿದೆ. ಅವಳ ಆಸೆ ಈಡೇರಿಸಲು ನಮ್ಮ ಪ್ರಯತ್ನ ಸಾಗಿದೆ ಎಂದರು. ಒಳ್ಳೆ ಅಂಕ ತೆಗೆಯುತ್ತಾಳೆ ಎಂಬ ನಿರೀಕ್ಷ ಇತ್ತು. ಆದರೆ ಜಿಲ್ಲೆಗೆ ಟಾಪರ್ ಆಗುತ್ತಾಳೆಂದು ಕೊಂಡಿ ರಲಿಲ್ಲ. ದೇವರ ದಯೆ ಅವಳ ಪರಿಶ್ರಮ ಆಗಿ ದ್ದಾಳೆ. ನಮಗೂ ಖುಷಿಯಾಗಿದೆ ಎಂದರು.
ಮೇಷ್ಟ್ರೀಗೂ ಖುಷಿ: ಶಾಲೆಯಲ್ಲಿ ಏನೇ ಹೇಳಿ ಕೊಟ್ಟರೂ ಪ್ರಾಮಾಣಿಕವಾಗಿ ಪರಿಶ್ರಮಪಟ್ಟು ಅಭ್ಯಾಸ ಮಾಡುತ್ತಿದ್ದಳು. ಓದುವ ಬಗ್ಗೆ ಆಸಕ್ತಿ ವಹಿಸುತ್ತಿದ್ದಳು. ಅತ್ಯುನ್ನತ ಶ್ರೇಣಿ ಯಲ್ಲಿ ಉತ್ತೀರ್ಣಳಾಗುವ ನಂಬಿಕೆ ಇತ್ತು. ಆದರೆ ಜಿಲ್ಲೆಗೆ ಟಾಪರ್ ಆಗಿದ್ದಾಳೆ ಖುಷಿ ಯಾಗಿದೆ ಎಂದು ಸೆಂಟ್ ಜಾನ್ ಶಾಲೆಯ ಉಪಾಧ್ಯಾಯ ಕೆಂಪರಾಜು ಹೇಳಿದರು.