Advertisement

ನೋಟಿನ ಬಿಂದೆ ಬಿದ್ದವರ ಒಳನೋಟ

05:40 AM Feb 03, 2019 | |

ಎರಡು ವರ್ಷಗಳ ಹಿಂದೆ ನಡೆದ ಹಳೆಯ ಐನೂರು, ಒಂದು ಸಾವಿರ ರೂಪಾಯಿಗಳ ನೋಟು ಅಮಾನ್ಯಿàಕರಣ ವಿಷಯ ಅನೇಕ ಚಿತ್ರಗಳಿಗೆ ಸ್ಫೂರ್ತಿಯಾಗಿದ್ದಂತೂ ಸುಳ್ಳಲ್ಲ. ಈಗಾಗಲೇ ನೋಟು ಅಮಾನ್ಯಿàಕರಣ ವಿಷಯವನ್ನು ಇಟ್ಟುಕೊಂಡು ಕನ್ನಡದಲ್ಲಿ ಕೆಲವು ಚಿತ್ರಗಳು ತೆರೆಗೆ ಬಂದಿವೆ. ಆ ಸಾಲಿಗೆ ಈಗ ಸೇರ್ಪಡೆಯಾಗಿರುವ ಮತ್ತೂಂದು ಚಿತ್ರ ಈ ವಾರ ತೆರೆಗೆ ಬಂದಿರುವ “ಮಟಾಶ್‌’.

Advertisement

ನೋಟು ಅಮಾನ್ಯಿಕರಣವಾದ ನಂತರ ಕಾಳಸಂತೆಯಲ್ಲಿ ಹಳೆಯ ನೋಟುಗಳನ್ನು ಹೊಸ ನೋಟುಗಳಾಗಿ ಪರಿವರ್ತಿಸಲು ಏನೇನು ಸರ್ಕಸ್‌ಗಳು ನಡೆದವು. ಪರಿಸ್ಥಿಯ ಲಾಭವನ್ನು ಯಾರು ಹೇಗೆಲ್ಲ ಪಡೆದುಕೊಂಡರು. ಹಣದ ಹಿಂದೆ ಬಿದ್ದವರ ಕಥೆ ಏನೇನಾಯ್ತು ಎನ್ನುವುದೇ “ಮಟಾಶ್‌’ ಚಿತ್ರದ ಕಥಾಹಂದರ. ಉತ್ತರ ಕರ್ನಾಟದ ನಾಲ್ವರು ಹುಡುಗರು, ದಕ್ಷಿಣ ಕರ್ನಾಟಕದ ನಾಲ್ವರು ಅಚಾನಕ್ಕಾಗಿ ನೋಟುಗಳ ಬದಲಾವಣೆಯ ದಂಧೆಯೊಳಗೆ ಸಿಲುಕುತ್ತಾರೆ.

ಸನ್ನಿವೇಶವೊಂದು ಇವರೆಲ್ಲರನ್ನು ಒಂದೇ ಕಡೆ ಸೇರುವಂತೆ ಮಾಡುತ್ತದೆ. ಆಗ ಇವರಿಗೆ ತಮ್ಮ ಮುಂದಿರುವ ಹಣದ ವಿಷಯ ಗೊತ್ತಾಗುತ್ತದೆ. ತಮ್ಮೆದುರಿಗಿರುವ ಕೋಟಿ, ಕೋಟಿ ಹಣ ಈ ಹುಡುಗರ ಕೈಯಲ್ಲಿ ಏನೇನು ಸಾಹಸಗಳನ್ನು ಮಾಡಿಸುತ್ತದೆ? ಹಣದ ಹಿಂದೆ ಬಿದ್ದ ಹುಡುಗರ ಕಥೆ ಏನಾಗುತ್ತದೆ ಎನ್ನುವ ಕುತೂಹಲವಿದ್ದರೆ “ಮಟಾಶ್‌’ ಚಿತ್ರವನ್ನು ನೋಡಲು ಅಡ್ಡಿ ಇಲ್ಲ. 

“ಮಟಾಶ್‌’ ಚಿತ್ರದ ಕಥೆ ನಾವು ಕಂಡಿರುವ, ಕೇಳಿರುವ ಘಟನೆಗಳ ಸುತ್ತ ನಡೆದರೂ, ಚಿತ್ರ ಅಷ್ಟಾಗಿ ರಂಜಿಸುವುದಿಲ್ಲ. ಇಡೀ ಚಿತ್ರದಲ್ಲಿ ಅತಿ ಎನಿಸುವಷ್ಟು ಪಾತ್ರಗಳಿದ್ದರೂ,ಆ ಪಾತ್ರಗಳೂ ಮನಸ್ಸಿನಲ್ಲಿ ಉಳಿಯುವಲ್ಲಿ ವಿಫ‌ಲವಾಗಿವೆ. ಕೆಲವು ಪಾತ್ರಗಳು ಚಿತ್ರದಲ್ಲಿ ಅಗತ್ಯವೇ ಇರಲಿಲ್ಲ ಎನಿಸುತ್ತವೆ. ಚಿತ್ರದ ಕಥೆ, ನಿರೂಪಣೆ, ದೃಶ್ಯಗಳದ್ದು ಆಮೆಯ ನಡಿಗೆ ಆಗಿರುವುದರಿಂದ, ಪ್ರೇಕ್ಷಕರ ಚಿತ್ತ ಕೂಡ ಅತ್ತಿತ್ತ ಹರಿದಾಡುತ್ತಲೇ ಇರುತ್ತದೆ. ಸಾಗುವ ರೀತಿ ನೋಡುಗರಿಗೆ ತುಂಬ ನಿಧಾನ ಎನಿಸುತ್ತದೆ. 

ಇನ್ನು ಚಿತ್ರದಲ್ಲಿ ರಜನಿ ಭಾರದ್ವಾಜ್‌, ಐಶ್ವರ್ಯಾ ಸಿಂಧೋಗಿ ಸೇರಿದಂತೆ ಮೂರ್‍ನಾಲ್ಕು ಕಲಾವಿದರನ್ನು ಹೊರತುಪಡಿಸಿದರೆ, ಉಳಿದವರದ್ದು ಪೇಲವ ಅಭಿನಯ. ಅದನ್ನು ಹೊರತುಪಡಿಸಿದರೆ, ಚಿತ್ರದಲ್ಲಿ ರಾನಿ ಅಬ್ರಾಹಂ ಛಾಯಾಗ್ರಹ‌ಣ, ವಿನೋದ್‌ ಬಸವರಾಜ್‌ ಸಂಕಲನ, ವಿಜಯ್‌ ಕೃಷ್ಣ ಹಿನ್ನಲೆ ಸಂಗೀತ, ಅವಿನಾಶ್‌ ನರಸಿಂಹರಾಜು ಕಲಾ ನಿರ್ದೇಶನ ಒಂದಷ್ಟು ಗಮನ ಸೆಳೆಯುತ್ತದೆ.

Advertisement

ಚಿತ್ರ: ಮಟಾಶ್‌
ನಿರ್ಮಾಣ: ಸತೀಶ್‌ ಪಾಠಕ್‌, ಗಿರೀಶ್‌ ಪಟೇಲ್‌, ಚಂದ್ರಶೇಖರ್‌ ಮಣೂರ, ಎಸ್‌.ಡಿ. ಅರವಿಂದ್‌
ನಿರ್ದೇಶನ: ಎಸ್‌.ಡಿ ಅರವಿಂದ್‌
ತಾರಾಗಣ: ಸಮರ್ಥ ನರಸಿಂಹರಾಜು, ಐಶ್ವರ್ಯ ಸಿಂಧೋಗಿ, ರಜನಿ ಭಾರದ್ವಾಜ್‌, ರಘು ರಮಣಕೊಪ್ಪ, ವಿ. ಮನೋಹರ್‌, ನಂದಗೋಪಾಲ್‌ ಮತ್ತಿತರರು

* ಜಿ.ಎಸ್‌.ಕೆ

Advertisement

Udayavani is now on Telegram. Click here to join our channel and stay updated with the latest news.

Next