Advertisement
ಪುತ್ತೂರಿನಲ್ಲಿ ಶುಕ್ರವಾರ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ ಅವರು, ನಗರಸಭೆ ಮತ್ತು ಕೆಯುಐಡಿಎಫ್‌ಸಿ ಜಂಟಿ ಸಹಯೋಗದಲ್ಲಿ ಎಡಿಬಿ ಯೋಜನೆಯಡಿ ಪುತ್ತೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಕಾಮಗಾರಿಯ ಶಿಲಾನ್ಯಾಸದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನರಿಗೆ ಸಮರ್ಪಕ ನೀರು ಪೂರೈಸುವ ಜವಾಬ್ದಾರಿಯನ್ನು ಸರಕಾರ ಮಾಡುತ್ತಿದೆ ಎಂದ ಅವರು, ಮುಂದೆ ಮನೆ ಕಟ್ಟಿ ಲೈಸನ್ಸ್ ಪಡೆಯುವ ಸಂದರ್ಭದಲ್ಲೇ ನೀರಿನ ಸಂಪರ್ಕಕ್ಕೂ ಅರ್ಜಿ ಸಲ್ಲಿಸಿ ಪಡೆಯುವ ವ್ಯವಸ್ಥೆ ಜಾರಿಗೆ ತರಲಿದೆ ಎಂದು ಎಂದರು.
Related Articles
ಆಧಾರ್ ಕಾರ್ಡ್ ದಾಖಲೆ ಮೂಲಕ ಮಾಸಿಕ 1.20 ಲಕ್ಷ ರೂ. ಒಳಗಿನ ಆದಾಯ ಹೊಂದಿದವರಿಗೆ ಬಿಪಿಎಲ್ ಪಡಿತರ ಚೀಟಿ ನೀಡುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದರಿಂದ ಸುಮಾರು 20 ಲಕ್ಷ ಮಂದಿ ಬಿಪಿಎಲ್ ಕಾರ್ಡ್ ಹೊಂದುವಂತಾಗಿದೆ ಎಂದರು.
Advertisement
ಶಕುಂತಳಾ ಟಿ. ಶೆಟ್ಟಿ, ಪುತ್ತೂರು ಎಸಿ ಎಚ್.ಕೆ. ಕೃಷ್ಣಮೂರ್ತಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ನಿರ್ದೇಶಕ ಪ್ರಸನ್ನ ಕುಮಾರ್, ಎಡಿಬಿ ಕಾಂಟ್ರಾಕ್ಟರ್ ನಿಕೋಲಸ್, ಕೆಯುಐಡಿಎಫ್‌ಸಿ ಎಕ್ಸಿಕ್ಯೂಟಿವ್ ಎಂಜಿನಿಯರ್ ಸೂರಜ್, ನಗರಸಭಾ ಸದಸ್ಯರಾದ ರಿಯಾಝ್, ವಿದ್ಯಾಗೌರಿ, ಪದ್ಮನಾಭ, ಶಕ್ತಿ ಸಿನ್ಹಾ, ಫೌಝಿಯಾ ಉಪಸ್ಥಿತರಿದ್ದರು. ರೂಪಾ ಟಿ. ಶೆಟ್ಟಿ ಸ್ವಾಗತಿಸಿ, ಬಾಲಕೃಷ್ಣ ಪೊರ್ದಾಳ್ ನಿರ್ವಹಿಸಿದರು.
“ಸೈನಿಕರ ಸೇವೆಯಲ್ಲಿ ರಾಜಕೀಯ ಬೇಡ’ಯೋಧರ ತ್ಯಾಗ ಮತ್ತು ಸೇವೆಯನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ತಪ್ಪು. ಇಂತಹ ಹೇಳಿಕೆಗಳು ರಾಜ್ಯಕ್ಕೆ ಕಪ್ಪು ಚುಕ್ಕೆಯಾಗುತ್ತವೆ ಎಂದು ಸಚಿವ ಯು.ಟಿ. ಖಾದರ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ಪುತ್ತೂರಿನಲ್ಲಿ ಪತ್ರಕರ್ತರ ಜತೆ ಮಾತನಾಡಿದ ಖಾದರ್, ಇಡೀ ದೇಶದ ಜನತೆ ಸೈನಿಕರ ಪರವಾಗಿ ಮತ್ತು ಅವರ ಕುಟುಂಬದ ಪರವಾಗಿ ಇರಬೇಕು. ಆದರೆ ಈ ಸಂದರ್ಭದಲ್ಲಿ ಇದನ್ನೇ ರಾಜಕೀಯವಾಗಿ ಬಳಸಿಕೊಳ್ಳುವುದು ಸರಿಯಲ್ಲ ಎಂದರು.