ನವದೆಹಲಿ: ಹೌತಿ ಬಂಡುಕೋರರ ಬೆಂಬಲಿತರು ಎಂದು ನಂಬಲಾಗಿರುವ ಕಡಲ್ಗಳ್ಳರಿಂದ ಅಪಾಯಕ್ಕೆ ತುತ್ತಾಗಲಿದ್ದ ಹಡಗನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ. ಗಲ್ಫ್ ಆಫ್ ಏಡನ್‌ನಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಭಾರತೀಯ ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.
ಯೆಮೆನ್‌ನ ಏಡನ್ ಬಂದರಿನಿಂದ 60 ನಾಟಿಕಲ್ ಮೈಲು (111.12 ಕಿಮೀ) ದೂರದ ಸಮುದ್ರದಲ್ಲಿ ಎಂ.ವಿ.ಜೆನ್ಕೋ ಪಿಕಾರ್ಡಿ ಎಂಬ ಹಡಗಿನ ಮೇಲೆ ಡ್ರೋನ್ ದಾಳಿ ನಡೆದಿತ್ತು. ಈ ಪ್ರದೇಶದಲ್ಲಿಯೇ ಗಸ್ತು ನಿರತವಾಗಿದ್ದ ಐಎನ್‌ಎಸ್ ವಿಶಾಖಪಟ್ಟಣಂ ಯುದ್ಧ ನೌಕೆಗೆ ನೆರವು ಕೋರಿ ಹಡಗಿನಿಂದ ಸಂದೇಶ ರವಾನೆಯಾಗಿತ್ತು. ಕೂಡಲೇ ಯುದ್ಧನೌಕೆ ಸ್ಥಳಕ್ಕೆ ಧಾವಿಸಿ ಆ ಹಡಗಿನಲ್ಲಿ 9 ಭಾರತೀಯರು ಸೇರಿದಂತೆ 22 ಮಂದಿಯನ್ನೂ ರಕ್ಷಿಸಿದೆ.
ಐಎನ್‌ಎಸ್ ವಿಶಾಖಪಟ್ಟಣದಲ್ಲಿದ್ದ ಹಿರಿಯ ಅಧಿಕಾರಿಗಳು ದಾಳಿಗೆ ಒಳಗಾದ ಹಡಗನ್ನು ಪರಿಶೀಲಿಸಿ ತಾಂತ್ರಿಕವಾಗಿ ಯಾನ ಮುಂದುವರಿಸಲು ಅದಕ್ಕೆ ಸಾಧ್ಯವಿದೆಯೇ ಎಂದು ಪರಿಶೀಲಿಸಿದ್ದಾರೆ. ಜತೆಗೆ ಅದರಲ್ಲಿ ಇರುವವರಿಗೆ ಯಾವು ದೇ ಅಪಾಯ ಉಂಟಾಗಿಲ್ಲ ಎಂಬುದನ್ನೂ ಖಚಿತಪಡಿಸಿದ್ದಾರೆ.
ಜ.5ರಂದು ಭಾರತೀಯ ನೌಕಾಪಡೆ ಅರಬ್ಬೀ ಸಮುದ್ರದ ಉತ್ತರ ಭಾಗದಲ್ಲಿ ಎಂ.ವಿ.ಲಿಲಾ ನೋರ್‌ಫೋಕ್, ಡಿ.23ರಂದು ಎಂ.ವಿ.ಚಮ್ ಪೂÉಟೋ ಎಂಬ ಹಡಗನ್ನು ಡ್ರೋನ್ ದಾಳಿಯಿಂದ ರಕ್ಷಿಸಿತ್ತು.