Advertisement
10-15 ವರ್ಷಗಳ ಹಿಂದೆ ಎಚ್‌ಐವಿ ಸೋಂಕಿತರ ಬಗೆಗಿದ್ದ ತಪ್ಪು ಕಲ್ಪನೆ ದೂರವಾಗಿವೆ. ತಿರಸ್ಕಾರ ಭಾವನೆ ಹೋಗಲಾಡಿಸಿದರೆ ಅವರೂ ಸಮಾಜದ ಮುಖ್ಯ ವಾಹಿನಿಯಲ್ಲಿ ಬರುತ್ತಾರೆ ಎಂದರು. ಕೆಲವಾರು ವರ್ಷಗಳ ಹಿಂದೆ ಯಾರಲ್ಲೇ ಆಗಲಿ ಎಚ್‌ಐವಿ ಕಂಡು ಬಂದರೆ ವಾರ ತಿಂಗಳೊಳಗೆ ಮರಣ ಹೊಂದುತ್ತಾರೆ ಎಂಬ ಭಾವನೆಯಿತ್ತು.
Related Articles
Advertisement
ನಿವೇಶನ ಇರುವವರಿಗೆ ಮನೆ ಕಟ್ಟಿಕೊಳ್ಳಲು ಧನಸಹಾಯ ನೀಡಲಾಗುತ್ತಿದೆ. ಚೇತನ ಯೋಜನೆಯಲ್ಲಿ 20 ಸಾವಿರ ರೂ. ಧನಸಹಾಯ ಹಾಗೂ ಧನಶ್ರೀ ಯೋಜನೆಯಲ್ಲಿ ಗೃಹ ಕೈಗಾರಿಕೆ ಆರಂಭಿಸುವವರಿಗೆ 40 ಸಾವಿರ ರೂಪಾಯಿ ಧನಸಹಾಯ ನೀಡಲಾಗುವುದು. ಜಿಲ್ಲೆಯ ಎರಡು ಎಆರ್‌ಟಿ ಕೇಂದ್ರಗಳಲ್ಲಿ ಔಷಧಿ ನೀಡಲಾಗುತ್ತಿದೆ.
ತಂದೆ-ತಾಯಿ ಇಲ್ಲದ ಎಚ್‌ಐವಿ ಪೀಡಿತ 400 ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೆರವಿನಿಂದ ಚಿಕಿತ್ಸೆ ನೀಡಲಾಗುತ್ತಿದೆ. ಶಾಲೆಗೆ ಹೋಗುತ್ತಿರುವ ಮಕ್ಕಳಿಗೆ ತಿಂಗಳಿಗೆ 750 ರೂಪಾಯಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಇಂತಹ ಅನಾಥ ಮಕ್ಕಳನ್ನು ತಮ್ಮ ಇಲಾಖಾ ವ್ಯಾಪ್ತಿಯಲ್ಲಿ ದತ್ತು ತೆಗೆದುಕೊಳ್ಳುವ ಮೂಲಕ ಅವರ ಭವಿಷ್ಯಕ್ಕೆ ದಾರಿದೀಪವಾಗಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯದರ್ಶಿ ಜಿ.ಎಸ್. ಷಡಕ್ಷರಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಂ.ಎಸ್. ತ್ರಿಪುಲಾಂಬ, ಜಿಲ್ಲಾ ಆಸ್ಪತ್ರೆ ಅಧೀಕ್ಷಕಿ ಡಾ| ಕೆ. ನೀಲಾಂಬಿಕೆ, ನಿವಾಸಿ ವೈದ್ಯಾಧಿಕಾರಿ ಡಾ| ರಾಘವೇಂದ್ರಸ್ವಾಮಿ, ದಾವಣಗೆರೆ ತಾಪಂ ಕಾರ್ಯನಿರ್ವಹಣಾಧಿಕಾರಿ ಎಲ್. ಎಸ್. ಪ್ರಭುದೇವ್, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸ್ವಯಂ ಸೇವಾ ಸಂಘದ ಪ್ರತಿನಿಧಿಗಳು ಇದ್ದರು.