Advertisement

ವರ್ಚುಯಲ್‌ ಕೇಂದ್ರ ಉದ್ಘಾಟನೆ

07:27 AM Jun 11, 2020 | Suhan S |

ಕಲಬುರಗಿ: ಕೋವಿಡ್ ಹಿನ್ನೆಲೆಯಲ್ಲಿ ವಕೀಲರು  ತಮ್ಮ ಸ್ಮಾಟ್‌ ಫೋನ್‌ ಮೂಲಕ ಅಥವಾ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಸ್ಥಾಪಿಸಿರುವ ವರ್ಚುಯಲ್‌ ನ್ಯಾಯಾಲಯದ ಸೌಲಭ್ಯ ಪಡೆದುಕೊಂಡು ಉಚ್ಚ ನ್ಯಾಯಾಲಯದ ಎದುರು ವಾದ ಮಂಡಿಸಲು ಸ್ಥಾಪಿಸಿರುವ ವರ್ಚುಯಲ್‌ ನ್ಯಾಯಾಲಯ ಕೇಂದ್ರವನ್ನು ಕರ್ನಾಟಕ ಉತ್ಛ ನ್ಯಾಯಾಲಯದ ಹಿರಿಯ ನ್ಯಾಯಮೂರ್ತಿ ಜಿ. ನರೇಂದರ್‌ ಬುಧವಾರ ಉದ್ಘಾಟಿಸಿದರು.

Advertisement

ಜಿಲ್ಲಾ ತರಬೇತಿ ಕೇಂದ್ರದಲ್ಲಿ ಸ್ಥಾಪಿಸಿರುವ ವರ್ಚುಯಲ್‌ ನ್ಯಾಯಾಲಯ ಕೇಂದ್ರವನ್ನು ಉದ್ಘಾಟಿಸಿ, ವಕೀಲರಿಗಾಗಿ ಆಯೋಜಿಸಲಾದ ಗಣಕಯಂತ್ರ ಬಳಕೆ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಕೋವಿಡ್ ಸಾಂಕ್ರಾಮಿಕ ಸೋಂಕಿನ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನ್ಯಾಯಾಲಯವು ಈ ಹೆಜ್ಜೆ ಇಟ್ಟಿದೆ. ಮೂರು ದಿನಗಳ ಕಾಲ ನಡೆಯುವ ಗಣಕಯಂತ್ರ ತರಬೇತಿಯಲ್ಲಿ ಆಯ್ದ 80 ವಕೀಲರು ಭಾಗವಹಿಸಿ ವರ್ಚುಯಲ್‌ ನ್ಯಾಯಾಲಯ ಕಾರ್ಯವಿಧಾನ ಮತ್ತು ಗಣಕಯಂತ್ರದ ಮೂಲಕ ಪ್ರಕರಣಗಳ ದಾಖಲಿಸುವ ಮತ್ತು ಪ್ರಕರಣಗಳನ್ನು ನಡೆಸುವ ಕುರಿತು ತರಬೇತಿ ಪಡೆಯಬೇಕು. ಮುಂದಿನ ದಿನದಲ್ಲಿ ಅವಶ್ಯಕತೆಯಿರುವ ನ್ಯಾಯವಾದಿಗಳಿಗೆ ಈ ತರಬೇತಿ ನೀಡಲಾಗುತ್ತದೆ ಎಂದರು.

ನ್ಯಾ| ಜಿ.ನರೇಂದರ್‌ ಮತ್ತು ನ್ಯಾ| ಪಿ.ಎನ್‌.ದೇಸಾಯಿ ಎದುರು ವರ್ಚುಯಲ್‌ ನ್ಯಾಯಾಲಯದ ಸೌಲಭ್ಯ ಬಳಸಿ ಕಲಬುರಗಿ ಪೀಠದ ಮುಂದೆ ಕ್ರಿಮಿನಲ್‌ ಮೇಲ್ಮನವಿ ಪ್ರಕರಣದಲ್ಲಿ ನ್ಯಾಯವಾದಿ ನಂದಕಿಶೋರ ವಾದ ಮಂಡಿಸಿ ಪ್ರಾತ್ಯಕ್ಷಿಕೆ ನಡೆಸಿದರು. ಜಿಲ್ಲಾಧಿಕಾರಿ ಶರತ್‌ ಬಿ., ಮಹಾನಗರ ಪಾಲಿಕೆ ಆಯುಕ್ತ ರಾಹುಲ್‌ ಪಾಂಡ್ವೆ, ಜಿಲ್ಲಾ ಪ್ರಭಾರಿ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಶುಕಲಾಕ್ಷ ಪಾಲನ್‌, ಗುಲಬರ್ಗಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಅರುಣಕುಮಾರ್‌ ಕಿಣ್ಣಿ ಹಾಗೂ ನ್ಯಾಯವಾದಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next