Advertisement

ಪ್ರಸ್ತುತ ಇತಿಹಾಸ ಅಧ್ಯಯನಕ್ಕೆ ಮಹತ್ವ ಅವಶ್ಯ 

12:34 PM Mar 14, 2018 | |

ಮೈಸೂರು: ಪ್ರಸ್ತುತ ಸಂದರ್ಭದಲ್ಲಿ ಇತಿಹಾಸ ತಿಳಿಯುವುದಕ್ಕೆ ಜನರು ಹೆಚ್ಚಿನ ಮಹತ್ವ ನೀಡಬೇಕಿದ್ದು, ಹೀಗಾಗಿ ಇತಿಹಾಸದ ಘಟನೆಗಳನ್ನು ಗುರುತಿಸುವ ಬಗ್ಗೆ ಹೆಚ್ಚು ಸಂಶೋಧನೆಗಳು ನಡೆಯಬೇಕಿದೆ ಎಂದು ಮೈಸೂರು ವಿವಿ ಪ್ರಭಾರ ಕುಲಪತಿ ಪೊ›.ಸಿ.ಬಸವರಾಜು ತಿಳಿಸಿದರು.

Advertisement

ಮೈಸೂರು ವಿವಿ ಇತಿಹಾಸ ಅಧ್ಯಯನ ವಿಭಾಗದಿಂದ ಮಾನಸಗಂಗೋತ್ರಿ ರಾಣಿ ಬಹುದ್ದೂರ್‌ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕರ್ನಾಟಕದಲ್ಲಿ ಪ್ರಾಚೀನ ಮತ್ತು ಮಧ್ಯಯುಗದ ಇತಿಹಾಸ ಪ್ರವೃತ್ತಿಗಳು ಕುರಿತ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಇತಿಹಾಸವನ್ನು ತಿಳಿದವರು ಮಾತ್ರ ಇತಿಹಾಸ ಬರೆಯಲು ಸಾಧ್ಯವಿದ್ದು, ಆದ್ದರಿಂದ ಪ್ರಸ್ತುತದಲ್ಲಿ ಇತಿಹಾಸ ತಿಳಿಯಲು ಜನರು ಹೆಚ್ಚು ಮಹತ್ವ ನೀಡಬೇಕಿದೆ. ನಮ್ಮ ಸುತ್ತಮುತ್ತಲೂ ದಿನನಿತ್ಯ ಸಾಕಷ್ಟು ಘಟನಾವಳಿಗಳು ನಡೆಯುತ್ತಿದ್ದರೂ, ಈ ಹಿಂದೆ ನಮ್ಮನ್ನಾಳಿದ ಅನೇಕ ಮಹನೀಯರು ಬಿಟ್ಟು ಹೋಗಿರುವ ಇತಿಹಾಸದ ಕುರುಹುಗಳು,

ಆಡಳಿತ ಮಾರ್ಗಗಳು ಹಾಗೂ ನಾಗರೀಕತೆ ಇಂದಿಗೂ ಸಾರ್ವಜನಿಕರ ಜೀವನದ ಮೇಲೆ ಪ್ರಭಾವ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಹಿಂದಿನ ಅಭಿವೃದ್ಧಿಶೀಲ ಕಾರ್ಯಗಳು ಹಾಗೂ ಇತಿಹಾಸದ ಘಟನೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆಗಳು ನಡೆಯಬೇಕಿದೆ ಎಂದರು.

ಈ ಸಂಶೋಧನೆಗಳು ಸಾರ್ವಜನಿಕರಿಗೆ ಮಾಹಿತಿ ನೀಡುವುದರ ಜತೆಗೆ ನಾಗರೀಕತೆಯ ವಿಧಾನಗಳನ್ನು ತಿಳಿಸಬೇಕಿದೆ. ಅಲ್ಲದೆ ಹಿಂದಿನಿಂದ ಕೊಡುಗೆಯಾಗಿ ಬಂದ ನಮ್ಮ ಪರಿಸರವನ್ನು ಅಭಿವೃದ್ಧಿ ಮಾಡುವ ಮೂಲಕ ಪರಿಸರ ಸಂರಕ್ಷಣೆಯಲ್ಲೂ ಕಾಳಜಿವಹಿಸಬೇಕಿದೆ.

Advertisement

ಈ ಕಾರ್ಯಗಳ ಮೂಲಕ ಪರಿಸರವನ್ನು ಬೆಳೆಸದಿದ್ದರೆ ನಮ್ಮ ಕಾಯಕಲ್ಪ ಮುಂದಿನ ಪೀಳಿಗೆಗೆ ಮಾರಕವಾಗಲಿದೆ. ಆದರೆ, ಇತಿಹಾಸದ ಪ್ರಾಚೀನತೆ ಹಾಗೂ ಐತಿಹಾಸಿಕ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಕಾರ್ಯ ನಿರ್ವಹಿಸುತ್ತಿದ್ದು, ಆಡಳಿತದಲ್ಲಿ ಬದಲಾವಣೆಯನ್ನು ಕಂಡುಕೊಂಡಿದೆ ಎಂದು ತಿಳಿಸಿದರು.

ವಿಚಾರ ಸಂಕಿರಣದಲ್ಲಿ ಆಧುನಿಕ ಕರ್ನಾಟಕ ಇತಿಹಾಸ ಲೇಖನ, ಹೈದರಾಬಾದ್‌ ಕರ್ನಾಟಕ ಇತಿಹಾಸ ಮೇಲಿನ ಬರವಣಿಗೆಗಳು ಸೇರಿದಂತೆ ಇನ್ನಿತರ ವಿಷಯಗಳ ಕುರಿತು ವಿಚಾರ ಮಂಡಿಸಲಾಯಿತು. ಕಾರ್ಯಕ್ರಮದಲ್ಲಿ ಕುವೆಂಪು ವಿವಿಯ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗದ ಅಧ್ಯಕ್ಷ ಪೊ›. ರಾಜಾರಾಮ್‌ ಹೆಗ್ಡೆ, ಮೈಸೂರು ವಿವಿ ಇತಿಹಾಸ ವಿಭಾಗದ ಮುಖ್ಯಸ್ಥ ಪೊ›.ವೈ.ಎಚ್‌.ನಾಯಕ್‌ವಾಡಿ, ಮೈಸೂರು ವಿವಿಯ ಪೊ›.ಜಿ. ಹೇಮಂತ್‌ಕುಮಾರ್‌ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next