Advertisement

ಗುತ್ತಿಗೆ ಪದ್ಧತಿ ರದ್ದತಿಗೆ ಜೆಸ್ಕಾಂ ನೌಕರರ ಆಗ್ರಹ

03:09 PM Mar 31, 2017 | Team Udayavani |

ಕಲಬುರಗಿ: ಗುತ್ತಿಗೆ ಪದ್ಧತಿ ರದ್ದುಪಡಿಸಿ ಎಲ್ಲ ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ವಿದ್ಯುತ್‌ ನೌಕರರ ಫೆಡರೇಷನ್‌ ಜೆಸ್ಕಾಂ ವಿಭಾಗ  ಸಮಿತಿ ನೇತೃತ್ವದಲ್ಲಿ ಜೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. 

Advertisement

ಪ್ರತಿಭಟನಾಕಾರರು ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿ, ವಿದ್ಯುತ್‌ ಇಲಾಖೆಯಲ್ಲಿ ಖಾಲಿಯಿರುವ ಎಲ್ಲಾ ಕಾಯಂ ಹುದ್ದೆಗಳಿಗೆ ಗುತ್ತಿಗೆ ನೌಕರರಲ್ಲಿ ಅರ್ಹರಾದವರನ್ನು ನೇಮಕ ಮಾಡಬೇಕು. ವಿದ್ಯುತ್‌ ತಿದ್ದುಪಡಿ ಮಸೂದೆ 2014 ನ್ನು  ಜಾರಿಗೊಳಿಸದೆ ಕೈಬಿಡಬೇಕೆಂದು ಒತ್ತಾಯಿಸಿದರು. 

ಕನಿಷ್ಠ ವೇತನ ಕಾನೂನನ್ನು ತಿದ್ದುಪಡಿ ಮಾಡಿ ಎಲ್ಲ ರೀತಿಯ ಗುತ್ತಿಗೆ ನೌಕರರಿಗೆ ಕನಿಷ್ಠ 15 ಸಾವಿರ ರೂ. ನೀಡಬೇಕು, ಅರೆಕುಶಲ ನೌಕರರಿಗೆ 18 ಸಾವಿರ ರೂ., ಕುಶಲ ಕಾರ್ಮಿಕರಿಗೆ 21 ಸಾವಿರ ರೂ. ವೇತನವನ್ನು ಪ್ರತಿ ತಿಂಗಳ 5ನೇ ತಾರೀಕಿನೊಳಗೆ ಕಾರ್ಮಿಕರ ಬ್ಯಾಂಕ್‌  ಖಾತೆಗೆ ಜಮಾ ಮಾಡಬೇಕೆಂದು ಒತ್ತಾಯಿಸಿದರು. 

ಕಾಯಂ ನೌಕರರು ಮಾಡುತ್ತಿರುವ ಕೆಲಸವನ್ನು ಗುತ್ತಿಗೆ ಕಾರ್ಮಿಕರು ಮಾಡುತ್ತಿರುವುದರಿಂದ ಕಾಯಂ ನೌಕರರಿಗೆ ನೀಡುತ್ತಿರುವ ವೇತನ ನೀಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಿಐಟಿಯು ರಾಜ್ಯಾಧ್ಯಕ್ಷೆ ವರಲಕೀ, ಕೆಎಸ್‌ಇಇಯು ರಾಜ್ಯಾಧ್ಯಕ್ಷ ಸತ್ಯಬಾಬು, ರಾಯಚೂರು ಜೆಸ್ಕಾಂ ಗುತ್ತಿಗೆ ನೌಕರರ ಸಂಘದ ಗೌರವಾಧ್ಯಕ್ಷ ಕೆ.ಜಿ.ವಿರೇಶ, ಜಿಲ್ಲಾಧ್ಯಕ್ಷ ಮುದ್ದುರಂಗಪ್ಪ ಹಾಗೂ ಇತರರು ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next