Advertisement
ಪಣಜಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಯುವ ಸಂಸತ್‍ನಲ್ಲಿ ಮಾತನಾಡಿ, ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರ ಮಾರ್ಗದರ್ಶನದಲ್ಲಿ ಗೋವಾದಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಪ್ರಗತಿಯಾಗಿದೆ. ಮುಂದೆಯೂ ಕೂಡ ಯುವಕರ ಸಹಕಾರದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯ ಕೈಗೊಳ್ಳಲಿದ್ದಾರೆ ಎಂದರು.
Related Articles
Advertisement
ರಾಜಕೀಯ ಕ್ಷೇತ್ರದಲ್ಲಿ ಯುವಕರಿಗೆ ಹೆಚ್ಚು ಪ್ರತಿನಿಧಿತ್ವ ಲಭಿಸಬೇಕು. ಪ್ರಧಾನಿ ನರೇಂದ್ರ ಮೋದಿಯವರ ನ್ಯೂ ಇಂಡಿಯಾ ಮಿಷನ್ ಸಂಬಂಧಿತ ಉದ್ದೇಶವನ್ನು ಪೂರ್ಣಗೊಳಿಸುವ ಕಾರ್ಯವನ್ನು ಕೇವಲ ಯುವಕರು ಮಾತ್ರ ಮಾಡಲು ಸಾಧ್ಯ. ಸರ್ಕಾರವು ಯುವಕರ ಭವಿಷ್ಯಕ್ಕಾಗಿ ಅಗತ್ಯ ಸೌಲಭ್ಯವನ್ನು ಕಲ್ಪಿಸಿಕೊಡಲು ಪ್ರಯತ್ನ ನಡೆಸುತ್ತದೆ. ಈ ನಿಟ್ಟಿನಲ್ಲಿ ಹಲವು ಯೋಜನೆಗಳು ಕೂಡ ಜಾರಿಯಲ್ಲಿದೆ ಎಂದು ಮುಖ್ಯಮಂತ್ರಿ ಸಾವಂತ್ ನುಡಿದರು.
ಈ ಸಂದರ್ಭದಲ್ಲಿ ಮೌಲಾನಾ ಡಾ. ಸಯ್ಯದ್ ಕಲ್ಬೆ ರಿಜ್ವಿ ಮಾತನಾಡಿ, ದೇಶವನ್ನು ಮನಸ್ಸಿನಿಂದ ಪ್ರೀತಿಸಬೇಕು. ಭಾರತ ಮಾತೆ ಹಾಗೂ ನಮ್ಮ ತಾಯಿಯ ಮರ್ಯಾದೆಯನ್ನು ಕೆಳಕ್ಕೆ ಬೀಳುವ ಪರಿಸ್ಥಿತಿ ತಂದುಕೊಳ್ಳಬಾರದು ಎಂದರು.
ಈ ಸಂದರ್ಭದಲ್ಲಿ ಎಂಐಟಿಯ ರಾಹುಲ್ ಕರಾಡ್, ಪದ್ಮವಿಭೂಷಣ ಡಾ. ಸೋನಲ್ ಮಾನಸಿಂಗ್ ಮತ್ತಿತರರು ಉಪಸ್ಥಿತರಿದ್ದರು.