ಎಷ್ಟು ಬಗೆಯಲ್ಲಿ ಇಡ್ಲಿ ಮಾಡಬಹುದು ಅಂದುಕೊಂಡಿದ್ದೀರಿ? ಹೆಚ್ಚೆಂದರೆ ಹತ್ತಿಪ್ಪತ್ತು ವೆರೈಟಿ ಅಂತೀರಾ? ಇಲ್ಲ, 55 ವೆರೈಟಿಯ ಇಡ್ಲಿ ಮಾಡಬಹುದು ಅನ್ನುತ್ತಿದೆ “ಸೌತ್ ರುಚೀಸ್’. ಹೋಟೆಲ್‌ನ 5ನೇ ವಾರ್ಷಿಕೋತ್ಸವದ ಪ್ರಯುಕ್ತ, ಇಡ್ಲಿ ಮೇಳ ಆಯೋಜಿಸಲಾಗಿದ್ದು, ಹೆಚ್ಚು ಇಡ್ಲಿ ತಿಂದವರಿಗೆ ಬಹುಮಾನವನ್ನೂ ಘೋಷಿಸಲಾಗಿದೆ.
ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿರುವ ಈ ಖಾದ್ಯ, ಕೇವಲ ವೃದ್ಧರಿಗಾಗಿ, ರೋಗಿಗಳಿಗಾಗಿ ಇರುವುದು ಅಂತ ಕೆಲವರು ಭಾವಿಸಿದ್ದಾರೆ. ಆದರೆ, ಸಿಹಿ, ಖಾರ, ಹುಳಿ, ಹುರಿದ, ಕರಿದ, ಉತ್ತರ ಭಾರತೀಯ, ಚೈನೀಸ್, ತಂದೂರ್ ಮುಂತಾದ ರುಚಿಯಲ್ಲಿ ಇಡ್ಲಿ ತಯಾರಿಸಬಹುದು ಎಂದು “ಸೌತ್ ರುಚೀಸ್’ ತೋರಿಸಿ ಕೊಡಲಿದೆ.
ವಿಧ ವಿಧ ಇಡ್ಲಿ: ಸಾದಾ ಇಡ್ಲಿ, ರವೆ ಇಡ್ಲಿ, ರಾಗಿ ಇಡ್ಲಿ, ಕೊಟ್ಟೆ ಇಡ್ಲಿ, ಹಲಸಿನ ಹಣ್ಣಿನ ಇಡ್ಲಿ, ಇಡ್ಲಿ ಸೀಖ್ ಕಬಾಬ್, ಚಾಕೊಲೇಟ್ ಇಡ್ಲಿ, ಇಡ್ಲಿ ಸ್ಯಾಂಡ್‌ವಿಚ್, ಇಡ್ಲಿ ಚಾಟ್ಸ್, ಇಡ್ಲಿ ರೊಟ್ಟಿ, ಇಡ್ಲಿ ಬೇಳೆಬಾತ್, ಇಡ್ಲಿ ಮಂಚೂರಿಯನ್ ಮುಂತಾದ ವೆರೈಟಿಯ ಇಡ್ಲಿಗಳನ್ನು ಸವಿಯಬಹುದು.
ಎಲ್ಲಿ?: ಸೌತ್ ರುಚೀಸ್, ಜೈ ಮುನಿರಾವ್ ಸರ್ಕಲ್, ಮಾಗಡಿ ಮುಖ್ಯರಸ್ತೆ, ವಿಜಯನಗರ
ಯಾವಾಗ?: ಜ. 25-26