Advertisement

ಮಕ್ಕಳ ಸಾಹಿತ್ಯ ಪ್ರತಿಭೆ ಬೆಳಕಿಗೆ ತರಲಿ ಪರಿಷತ್ತು

12:15 PM Mar 31, 2018 | Team Udayavani |

ಬೀದರ: ಮಕ್ಕಳಲ್ಲಿನ ಸುಪ್ತ ಸಾಹಿತ್ಯ ಪ್ರತಿಭೆ ಬೆಳಕಿಗೆ ತರುವ ಕಾರ್ಯದಲ್ಲಿ ಮಕ್ಕಳ ಸಾಹಿತ್ಯ ಪರಿಷತ್ತು ಕಾರ್ಯನ್ಮುಖವಾಗಬೇಕು ಎಂದು ಹಿರಿಯ ಸಾಹಿತಿ ಚಂದ್ರಪ್ಪ ಹೆಬ್ಟಾಳಕರ್‌ ಸಲಹೆ ನೀಡಿದರು. ನಗರದಲ್ಲಿ ಶುಕ್ರವಾರ ಮಕ್ಕಳ ಸಾಹಿತ್ಯ ಪರಿಷತ್‌ ಜಿಲ್ಲಾ ಸಮಿತಿಪದಾಧಿ ಕಾರಿಗಳ ಆಯ್ಕೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 25 ವರ್ಷಗಳ ಹಿಂದೆ ಸ್ಥಾಪನೆಯಾಗಿರುವ ಪರಿಷತ್‌ ಒತ್ತಾಯದ ಮೇರೆಗೆ ಸರ್ಕಾರ ಬಾಲ ವಿಕಾಸ ಅಕಾಡೆಮಿ ಸ್ಥಾಪನೆ ಮಾಡಿ, ಸಾಹಿತ್ಯದತ್ತ ಮಕ್ಕಳ ಒಲುವು ಹೆಚ್ಚಿಸುವ ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದರು. 

Advertisement

ಕಸಾಪ ತಾಲೂಕಾಧ್ಯಕ್ಷ ಎಂ.ಎಸ್‌. ಮನೋಹರ ಮಾತನಾಡಿ, ಮಗು ಮನೆ ತುಂಬ ನಗು. ಮನೆಯಲ್ಲಿ ಮಗುವಿದ್ದರೆ ಮನೆ ತುಂಬ ನಗುವಿನ ವಾತಾವರಣ ನಿರ್ಮಾಣವಾಗುತ್ತದೆ. ಮಕ್ಕಳಿಗೆ ಸಾಹಿತ್ಯ ಪುಸ್ತಕ ಓದುವಂತೆ ಮನೆಯಲ್ಲಿ ಪಾಲಕರು ಪ್ರೋತ್ಸಾಹ ನೀಡಬೇಕು. ಮಾವನವ ಜೀವನ ಯಾಂತ್ರಿಕವಾಗಿಬಿಟ್ಟಿದೆ. ಮನೆಗಳು ಮಕ್ಕಳಿಗೆ ಜೈಲುಗಳಾಗಿವೆ. ಪಾಲಕರು ಮಕ್ಕಳಿಗೆ ಜೇಲರ್‌ ಆಗಿದ್ದಾರೆ ಎಂದರು. 

ಸಾಹಿತಿ ಶಿವಕುಮಾರ ಕಟ್ಟೆ ಮಾತನಾಡಿ, ಮಕ್ಕಳಿಗೆ ಬೇಸಿಗೆ ರಜೆ ಇರುವ ಕಾರಣ ಮಕ್ಕಳ ಬೇಸಿಗೆ ಶಿಬಿರದಲ್ಲಿ ಸಾಹಿತ್ಯ ಕುರಿತು ಉಪನ್ಯಾಸ, ಗೋಷ್ಠಿ, ಕಮ್ಮಟ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಈ ಶಿಬಿರಗಳನ್ನು ಕಾಟಾಚಾರಕ್ಕೆ ನಡೆಸದೇ ಸರ್ಕಾರ ನಡೆಸುವ ಪ್ರತಿಭಾ ಕಾರಂಜಿಯಂತೆ, ಮಕ್ಕಳ ಸಾಹಿತ್ಯ ಪರಿಷತ್‌ ಜಿಲ್ಲಾ ಸಮಿತಿ ಮಕ್ಕಳಲ್ಲಿರುವ ಸಾಹಿತ್ಯ, ಸಂಗೀತ, ಕಲೆ ಬೆಳಕಿಗೆ ತರುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಸಾಹಿತಿ ಸಂಜೀವಕುಮಾರ ಅತಿವಾಳೆ ಮಾತನಾಡಿ, ಸಾಹಿತ್ಯ, ಶಿಕ್ಷಣ, ಮಕ್ಕಳ ಕ್ಷೇತ್ರದಲ್ಲಿ ದುಯುತ್ತಿರುವ ಯುವ ಪ್ರತಿಭೆಗಳನ್ನು ನೇಮಿಸಿದರೆ ಮಕ್ಕಳ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿಯ ನೂತನ ಪದಾಧಿ ಕಾರಿಗಳ ತಂಡಕ್ಕೊಂದು ಘನತೆ, ಗೌರವ ಬರುತ್ತದೆ ಎಂದರು. 

ಪ್ರಮುಖರಾದ ಚಂದ್ರಗುಪ್ತ ಚಾಂದಕವಠೆ, ರಜಿಯಾ ಬಳಬಟ್ಟಿ, ಎಂ.ಜಿ. ದೇಶಪಾಂಡೆ, ಪ್ರವೀಣಕುಮಾರ ಗಾಯಕವಾಡ, ಸುನೀಲ ಕಡ್ಡೆ, ಅವಿನಾಶ ಸೋನೆ, ವಿಜಯಕುಮಾರ ಗೌರೆ, ಎಂ.ಪಿ. ಮುದಾಳೆ, ಸೈಯ್ಯದ್‌ ಮೊಮಹ್ಮದ್‌ ಗೌಸ್‌ ಖಾದ್ರಿ, ಮಾಣಿಕರಾವ್‌ ಪವಾರ, ಕಿಚ್ಚ ಮಹೇಶ, ಸತ್ಯಮ್ಮ ವಿಶ್ವಕರ್ಮ ಮಾತನಾಡಿದರು.

Advertisement

ನಾಗಶೆಟ್ಟಿ ಪಾಟೀಲ ಗಾದಗಿ, ಸುನೀಲ ಭಾವಿಕಟ್ಟಿ, ಅರುಣ ಪಟೇಲ್‌, ಜಯಶ್ರೀ ಬಕಾಲೆ, ಸುನೀತಾ ಬಿರಾದಾರ, ಯೇಸುದಾಸ ಅಲಿಯಂಬುರೆ, ಫರ್ನಾಂಡೀಸ್‌ ಹಿಪ್ಪಳಗಾಂವ, ಮಕ್ಸೂದ ಅಲಿ, ದೀಲಿಪಕುಮಾರ ಕಾಡವಾದ ಇದ್ದರು.

ಪದಾಧಿಕಾರಿಗಳ ಆಯ್ಕೆ: ಇದೇ ವೇಳೆ ಪರಿಷತ್‌ ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಪಾರ್ವತಿ ವಿಜಯಕುಮಾರ ಸೋನಾರೆ, ಉಪಾಧ್ಯಕ್ಷರಾಗಿ ಸತ್ಯಮ್ಮ ವಿಶ್ವಕರ್ಮ, ಸೈಯ್ಯದ್‌ ಮೊಹಮ್ಮದ ಗೌಸ್‌ ಖಾದ್ರಿ, ಸುಮತಿ ಕುದರೆ, ಪ್ರಧಾನ ಕಾರ್ಯದರ್ಶಿಗಳಾಗಿ ಮಾಣಿಕರಾವ್‌ ಪವಾರ, ಮಹಾರುದ್ರ ಡಾಕುಳಗಿ, ಕಿಚ್ಚ ಮಹೇಶ, ಪ್ರವೀಣಕುಮಾರ ಗಾಯಕವಾಡ, ಕುಪೇಂದ್ರ ರಾಝಗೀರಾ, ಸಂಘಟನಾ ಕಾರ್ಯದರ್ಶಿಗಳಾಗಿ ಈಶ್ವರ ತಡೋಳಾ, ಪುಷ್ಪಾ ಕನಕ, ಮಕ್ಸೂದ ಅಲಿ ಮಕ್ಸೂದ, ಓಂಕಾರ ಪಾಟೀಲ, ಅಂಬಾಜಿ ಕೋಟಗ್ಯಾಳೆ, ವಿಜಯಕುಮಾರ ಗೌರೆ, ಕೋಶಾಧ್ಯಕ್ಷರಾಗಿ ರಜಿಯಾ ಬಳಬಟ್ಟಿ, ಸದಸ್ಯರಾಗಿ ಚನ್ನಬಸವ ಚಿಕ್ಲೆ, ಅವಿನಾಶ ಸೋನೆ, ಕವಿತಾ ಭುಜಂಗೆ, ಸುನೀತಾ ಬಿರಾದಾರ, ಇಂದುಮತಿ, ಶ್ರೀದೇವಿ ಹೂಗಾರ ಹಾಗೂ ಔರಾದ ತಾಲೂಕು ಅಧ್ಯಕ್ಷರನ್ನಾಗಿ ರಾಮದಾಸ ಬಿರಾದಾರ ಅವರನ್ನು ಆಯ್ಕೆ ಮಾಡಲಾಯಿತು

ಬೀದರ ಜಿಲ್ಲೆಯಲ್ಲಿ ಮಕ್ಕಳ ಸಾಹಿತ್ಯ ಪರಿಷತ್‌ ಜಿಲ್ಲಾ ಸಮಿತಿಯ ಸಮರ್ಥ ತಂಡ ಕಟ್ಟಿಕೊಂಡು ಜಿಲ್ಲೆಯಲ್ಲಿ ಎಲೆಮರೆ ಕಾಯಿಯಂತಿರುವ ಮಕ್ಕಳನ್ನು ಬೆಳಕಿಗೆ ತರುವ ಕಾರ್ಯ ಮಾಡಲಿದೆ. ಮಕ್ಕಳನ್ನು ಹೆಚ್ಚೆಚ್ಚು ಸಾಹಿತ್ಯದತ್ತ ತರುವುದು ಮಕ್ಕಳ ಪರಿಷತ್‌ನ ಉದ್ದೇಶ. ಈ ದಿಸೆಯಲ್ಲಿ ಪದಾಧಿ ಕಾರಿಗಳು ತನು ಮನ ಧನದಿಂದ ಶ್ರಮಿಸಲಿದ್ದಾರೆ. ಆ ಮೂಲಕ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಬೆಳಕಿಗೆ ತರುವ ಕೆಲಸ ಆಗಲಿದೆ.
 ಪಾರ್ವತಿ ಸೋನಾರೆ, ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next