ಮುಂಬಯಿ: ಮುಂಬಯಿ ಮಹಾನಗರ ಪಾಲಿಕೆಯು ಮುಂಗಾರು ಪೂರ್ವ ನಾಲೆಗಳ ಸ್ವತ್ಛತೆ ಕಾರ್ಯ ಕೈಗೊಂಡಿದ್ದು, ಶೇ. 90ರಷ್ಟು ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮುಂಬಯಿ ನಗರ ಪ್ರದೇಶಗಳ ಪ್ರಸ್ತುತ ಶೇ. 4ರಷ್ಟು ನಾಲೆಗಳ ಸ್ವತ್ಛತಾ ಕಾರ್ಯಗಳು ಬಾಕಿ ಉಳಿದಿದ್ದು, ಶೀಘ್ರದಲ್ಲೆ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತೀ ವರ್ಷ ಮುಂಗಾರು ಮೊದಲು ಮುಂಬಯಿ ಮಹಾನಗರ ಪಾಲಿಕೆಯ ವ್ಯಾಪ್ತಿಯ ಸಣ್ಣ, ದೊಡ್ಡ ನಾಲೆಗಳ ಮತ್ತು ನದಿಗಳನ್ನು ಸ್ವತ್ಛಗೊಳಿಸುವ ಕಾರ್ಯವು ನಡೆಯುತ್ತದೆ. ಕೆಸರು ಮತ್ತು ತ್ಯಾಜ್ಯವನ್ನು ತೆಗೆದು ನೀರು ಹರಿಯಲು ಅವಕಾಶ ಮಾಡಿಕೊಡಲಾಗುತ್ತದೆ. ಈ ವರ್ಷದ ಫೆ. 22ರಿಂದ ನಾಲೆ ಸ್ವತ್ಛತಾ ಕೆಲಸವನ್ನು ಪ್ರಾರಂಭಿಸಲಾಯಿತು. ಈವರೆಗೆ ನಗರಗಳಲ್ಲಿ ಶೇ. 96ರಷ್ಟು, ಉಪನಗರಗಳಲ್ಲಿ ಶೇ. 91ರಷ್ಟು ಮತ್ತು ಪಶ್ಚಿಮ ಉಪನಗರಗಳಲ್ಲಿ ಶೇ. 94ರಷ್ಟು ನಾಲೆಗಳ ಸ್ವತ್ಛತಾ ಕಾರ್ಯಗಳು ಪೂರ್ಣಗೊಂಡಿವೆ ಎಂದು ಮನಪಾ ಅಧಿಕಾರಿಗಳು ತಿಳಿಸಿದ್ದಾರೆ. ಮೇ 31ರ ಮೊದಲು ಅಂತಿಮ ಹಂತದ ಶುಚಿಗೊಳಿಸುವ ಕೆಲಸ ಪೂರ್ಣಗೊ ಳ್ಳಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ವರ್ಷ ಸ್ವತ್ಛತಾ ಕಾರ್ಯಗಳಿಗೆ ವಿಶೇಷ ಸಾಧನಗಳನ್ನು ಬಳಸಲಾಗುತ್ತಿದೆ. ನಾಲೆಗಳ ಸ್ವತ್ಛತೆಯ ವ್ಯಾಪ್ತಿಯನ್ನು ಪರಿಶೀ ಲಿಸಲು ರೊಬೊಟಿಕ್ ಸಿಸಿ ಕೆಮರಾವನ್ನು ಬಳಸಲಾಗುತ್ತಿದೆ. ಸcತ್ಛತೆಯ ಕಾಮಗಾರಿ ಯನ್ನು ಸಮರೋಪಾದಿಯಲ್ಲಿ ಪೂರ್ಣಗೊಳಿ ಸಲಾಗುತ್ತಿದೆ. ಮುಂಬಯಿಯ ಭೌಗೋಳಿಕ ಸ್ಥಳವನ್ನು ಗಮನಿಸಿದರೆ ಮಳೆಗಾಲದಲ್ಲಿ ತಗ್ಗು ಪ್ರದೇಶಗಳು ಜಲಾವೃತಗೊಳ್ಳುವುದನ್ನು ಸಂಪೂರ್ಣವಾಗಿ ತಡೆ ಹಾಕಲು ಸಾಧ್ಯವಿಲ್ಲ. ಆದರೆ ಶುಚಿಗೊಳಿಸುವ ಕಾರಣ ಮಳೆ ನೀರು ಸುಗಮವಾಗಿ ಹರಿದು ಹೋಗಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.