Advertisement

Sakleshpur: ಪತ್ನಿ ಕೊಂದು ನಾಪತ್ತೆ ದೂರು ದಾಖಲಿಸಿದ್ದ ಪತಿ ಬಂಧನ

03:35 PM Nov 04, 2023 | Team Udayavani |

ಸಕಲೇಶಪುರ: ಪತ್ನಿಯನ್ನು ಪತಿಯೇ ಕೊಂದು ಊರು ಬಿಟ್ಟಿದ್ದವ ಮೂರು ತಿಂಗಳ ಬಳಿಕ ಬೀದಿ ನಾಯಿಗಳ ಮೂಲಕ ಸಿಕ್ಕಿ ಹಾಕಿಕೊಂಡ ಘಟನೆ ತಾಲೂಕಿನ ಬಾಗೆ ಗ್ರಾಮದಲ್ಲಿ ನಡೆದಿದೆ.

Advertisement

ಅವರಿಬ್ಬರು ಒಬ್ಬರೊಬ್ಬರನ್ನು ಪ್ರೀತಿಸಿ ಮದುವೆ ಆಗಿದ್ದರು. ಇವರಿಬ್ಬರ ಪ್ರೀತಿಯ ಫ‌ಲವಾಗಿ ಮಕ್ಕಳಿಬ್ಬರು ಜನಿಸಿದ್ದರು. ಹೀಗಿರುವಾಗ ಕ್ಷುಲ್ಲಕ ಕಾರಣಕ್ಕೆ ಪತಿ-ಪತ್ನಿ ನಡುವೆಯೂ ಗಲಾಟೆ ನಡೆದಿತ್ತು. ಗಲಾಟೆ ವಿಕೋಪಕ್ಕೆ ತಿರುಗಿ, ಕೋಪದ ಕೈಗೆ ಬುದ್ಧಿಕೊಟ್ಟ ಪತಿ, ಪತ್ನಿಯನ್ನೇ ಕೊಂದು ಯಾರಿಗೂ ತಿಳಿಯದಂತೆ ಮಣ್ಣು ಅಗೆದು ಹೂತಿಟ್ಟು, ಪತ್ನಿ ಕಾಣೆಯಾಗಿದ್ದಾಳೆಂದು ದೂರು ದಾಖಲಿಸಿದ್ದ. ಆದರೆ ಮೂರು ತಿಂಗಳ ಬಳಿಕ ಬೀದಿ ನಾಯಿಗಳಿಂದ ಆರೋಪಿ ತಾಲೂಕಿನ ಬಾಗೆ ಗ್ರಾಮದಲ್ಲಿ ಸಿಕ್ಕಿಬಿದ್ದಿದ್ದಾನೆ.

ಶಾಂತಿವಾಸು (28) ಹತ್ಯೆಯಾದ ದುರ್ದೈವಿಯಾಗಿದ್ದಾಳೆ. ಈಕೆಯ ಪತಿ ಪವನ್‌ ಕುಮಾರ್‌ (33) ಆರೋಪಿಯಾಗಿದ್ದಾನೆ.

ಘಟನೆ ಹಿನ್ನೆಲೆ: ಮೂರು ತಿಂಗಳ ಹಿಂದೆ ಪವನ್‌ ಕುಮಾರ್‌ ಹಾಗೂ ಶಾಂತಿವಾಸು ನಡುವೆ ಗಲಾಟೆ ನಡೆದಿತ್ತು. ಗಲಾಟೆ ವಿಕೋಪಕ್ಕೆ ತಿರುಗಿ ಪವನ್‌ ಕುಮಾರ್‌ ಪತ್ನಿ ಶಾಂತಿವಾಸು ಮೇಲೆ ಹಲ್ಲೆ ಮಾಡಿದ್ದ. ಗಂಭೀರ ಗಾಯಗೊಂಡಿದ್ದ ಶಾಂತಿವಾಸು ಸ್ಥಳದಲ್ಲೇ ಅಸುನೀಗಿದ್ದಳು.

ಪತ್ನಿ ಮೃತಪಟ್ಟಿದ್ದಕ್ಕೆ ಹೆದರಿದ ಪವನ್‌ ಕುಮಾರ್‌, ಕೃತ್ಯ ಹೊರಗೆ ಬಂದರೆ ಜೈಲು ಸೇರುವುದು ಗ್ಯಾರಂಟಿ ಎಂದುಕೊಂಡಿದ್ದ. ಹೇಗಾದರೂ ಸರಿ ಇದರಿಂದ ಬಚಾವ್‌ ಆಗಬೇಕೆಂದು ಮನೆಯಿಂದ ಸಮೀಪವಿರುವ ಹಳೆಬಾಗೆ ಗ್ರಾಮದ ಹಳ್ಳದ ಪಕ್ಕದ ಗುಂಡಿಯಲ್ಲಿ ಮಣ್ಣು ಅಗೆದು ಶವವನ್ನು ಹೂತು ಹಾಕಿದ್ದ. ನಂತರ ಹೆಂಡತಿ ಕಾಣೆಯಾಗಿದ್ದಾಳೆಂದು ತಾನೇ ಖುದ್ದು ನಗರ ಠಾಣೆಗೆ ಹೋಗಿ ದೂರು ದಾಖಲಿಸಿದ್ದ. ಪೇಂಟಿಂಗ್‌ ಕೆಲಸ ಮಾಡಿಕೊಂಡಿದ್ದಪವನ್‌ ಕುಮಾರ್‌ ತನ್ನ ಇಬ್ಬರು ಗಂಡು ಮಕ್ಕಳನ್ನು ನೋಡಿಕೊಂಡು ಹಳೇಬಾಗೆಯಲ್ಲಿ ತನ್ನ ಮನೆಯಲ್ಲೇ ವಾಸವಿದ್ದ. ಮೂರು ತಿಂಗಳ ಕಾಲ ಆರಾಮಾಗಿದ್ದ ಆತ ನಾಯಿಗಳಿಂದ ಸಿಕ್ಕಿಬಿದ್ದಿದ್ದಾನೆ.

Advertisement

ಆಗಿದ್ದೇನು?: ಗುರುವಾರ ಸಂಜೆ ಶವದ ವಾಸನೆಗೆ ಕೆಲ ನಾಯಿಗಳು ಮಣ್ಣಿನಿಂದ ಮೃತದೇಹದ ಮೂಳೆಯನ್ನು ಎಳೆದಾಡಿದೆ. ತೋಟದ ಮಾಲೀಕ ಶ್ರೀನಿವಾಸ್‌ ಇದನ್ನು ಗಮನಿಸುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸರು ಪವನ್‌ ಕುಮಾರ್‌ನನ್ನು ಅನುಮಾನದ ಮೇಲೆ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹದ ಕಳೇಬರ ಹೊರತೆಗೆದಿದ್ದಾರೆ. ಮೃತದೇಹವು ಸಂಪೂರ್ಣವಾಗಿ ಕೊಳೆತಿರುವ ಸ್ಥಿತಿಯಲ್ಲಿ ಪತ್ತೆ ಆಗಿದೆ.

ವಿಧಿ ವಿಜ್ಞಾನ ಪ್ರಯೋಗಲಾಯದ ತಜ್ಞರು ಹಾಗೂ ಹಿಮ್ಸ್‌ನ ವೈದ್ಯರ ತಂಡ ಶವದ ಮಾದರಿಯನ್ನುಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗೆ ತೆಗೆದುಕೊಂಡು ಹೋಗಿದ್ದಾರೆ. ಆರೋಪಿ ಪತಿಯನ್ನು ಘಟನಾ ಸ್ಥಳಕ್ಕೆ ನಗರ ಠಾಣೆ ಪೊಲೀಸರು ಕರೆ ತಂದು ಮಹಜರ್‌ ನಡೆಸಿದರು.

ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next