Advertisement
ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರು ಯಾರೇ ಆಗಿದ್ದರೂ ಇಲಾಖೆಯ ಸಹಾಯವಾಣಿಗೆ ಕರೆ ಮಾಡಿದರೆ ಊಟ ಪೂರೈಸಲಾಗುವುದು. ಸಹಾಯವಾಣಿಗೆ ಕರೆ ಮಾಡಿದರೆ ಒಂದಿಷ್ಟು ಮಾಹಿತಿ ಸಂಗ್ರಹಿಸಿ ಅವರು ಇದ್ದಲ್ಲೇ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಒಂದೊಮ್ಮೆ ಅವರಿಗೆ ಆಶ್ರಯವಿಲ್ಲದಿದ್ದರೆ ಸಮೀಪದ ಕಲ್ಯಾಣ ಮಂಟಪ, ಛತ್ರದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲು ಸಹಾಯವಾಣಿ ನೆರವಾಗಲಿದೆ ಎಂದು ಹೇಳಿದರು. ಸದ್ಯ ಬೆಂಗಳೂರಿನಲ್ಲಿ 80,000 ಮಂದಿಗೆ ಊಟ ಸಿದ್ಧಪಡಿಸಿ ವಿತರಿಸಲಾಗುತ್ತಿದೆ. ಸದ್ಯದಲ್ಲೇ ಮೂರು ವಾರ ಬಳಸಬಹುದಾದಷ್ಟು ದಿನಸಿ ಪೊಟ್ಟಣಗಳನ್ನು ಸಿದ್ಧಪಡಿಸಿ 85,000 ಮಂದಿಗೆ ವಿತರಿಸಲು ಕ್ರಮ ಕೈಗೊಳ್ಳ ಲಾಗುವುದು. ಕಾರ್ಮಿಕ ಕಲ್ಯಾಣ ನಿಧಿಯಿಂದ 156.5 ಕೋ. ರೂ. ಅನುದಾನ ಬಿಡುಗಡೆ ಮಾಡಿ ತಲಾ 1,000 ರೂ.ಗಳಂತೆ 15.65 ಲಕ್ಷ ಕಾರ್ಮಿಕರ ಬ್ಯಾಂಕ್ ಖಾತೆಗೆ ಹಣವನ್ನು ನೇರವಾಗಿ ಪಾವತಿಸಲಾಗಿದೆ ಎಂದರು. Advertisement
ಹಸಿವು ಸಹಾಯವಾಣಿ: ವಿಸ್ತರಣೆಗೆ ಚಿಂತನೆ
06:43 PM Apr 02, 2020 | Sriram |
Advertisement
Udayavani is now on Telegram. Click here to join our channel and stay updated with the latest news.