Advertisement

ಬೋಗಿ ತುಂಡರಿಸಲು ಹುಬ್ಬಳ್ಳಿ ರೈಲ್ವೆ ವಲಯ ಹೊಸ ತಂತ್ರ

06:05 AM Jan 29, 2018 | Harsha Rao |

ನವದೆಹಲಿ: ರೈಲು ಅಪಘಾತಗಳಾದ ಸಂದರ್ಭದಲ್ಲಿ ಒಂದರ ಮೇಲೊಂದು ಬಿದ್ದ ಬೋಗಿಗಳನ್ನು ತೆಗೆದು ಪ್ರಯಾಣಿಕರನ್ನು ರಕ್ಷಿಸುವುದೇ ಸವಾಲಿನ ಕೆಲಸ. ಆದರೆ ಕರ್ನಾಟಕದ ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿ ವಿನೂತನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಅದಕ್ಕೆ ಕೋಚ್‌ ವಿಂಡೋ ರಾಡ್‌ ಸ್ನಾಪರ್‌ ಟೂಲ್‌ ಎಂದು ಹೆಸರಿಸಲಾಗಿದೆ. ಅತ್ಯುತ್ಕೃಷ್ಟ ತಂತ್ರಜ್ಞಾನದಿಂದ ಅದನ್ನು ಸಿದ್ಧಪಡಿಸಲಾಗಿದೆ. ಸಾಮಾನ್ಯವಾಗಿ ಹೈಡ್ರಾಲಿಕ್‌ ರಾಡ್‌ ಕಟ್ಟರ್‌ನಿಂದ ಬೋಗಿಗಳನ್ನು ತುಂಡರಿಸಲು 5 ನಿಮಿಷ ಬೇಕಾಗುತ್ತದೆ. ಆದರೆ ಹುಬ್ಬಳ್ಳಿ ವಿಭಾಗ ಅಭಿವೃದ್ಧಿ ಮಾಡಿರುವ ಈ ರಾಡ್‌ನಿಂದ 30-40 ಸೆಕೆಂಡ್‌ಗಳಲ್ಲಿಯೇ ತುಂಡರಿಸಿ ಜನರನ್ನು ರಕ್ಷಿಸಲು ಸಾಧ್ಯವಿದೆ. 

Advertisement

ಇದಲ್ಲದೆ ಇನ್ನೂ ಹಲವು ರೈಲ್ವೆ ಮಂಡಳಿಗಳು ಹೊಸತನಗಳನ್ನು ಶೋಧಿಸಿವೆ. ರೈಲ್ವೆ ಮಂಡಳಿ ಅಧ್ಯಕ್ಷರು ಇತ್ತೀಚೆಗೆ ಆಯಾ ಮಂಡಳಿಗಳು ನಡೆಸಿದ ಉತ್ತಮ ಕೆಲಸಗಳ ವಿವರಣೆ ನೀಡುವಂತೆ ಕೋರಿದ್ದರು. ಈಶಾನ್ಯ ರೈಲ್ವೆ ಮಂಡಳಿ ಕೇವಲ 500 ರೂ.ಗಳಲ್ಲಿ ಹಳಿ ಮೇಲೆ ನಿಗಾ ಇರಿಸುವವರಿಗಾಗಿ ವಿಶೇಷ ಬ್ಯಾಗ್‌ ಅಭಿವೃ ದ್ಧಿಪಡಿಸಿದೆ. ಅದರಲ್ಲಿ ಮಾರ್ಗ ನಿರ್ವಹಣೆಗೆ ಅಗತ್ಯವಾಗಿರುವ ಸಲಕರಣೆಗಳನ್ನು ಒಯ್ಯಲೂ ಸಾಧ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next