ಧಾರವಾಡ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಹುಮತ ಪಡೆಯುವತ್ತ ಮುನ್ನಡೆದಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ಸ್ಪಷ್ಟ ಬಹುಮತ ಪಡೆಯುವುದು ನಿಚ್ಚಳವಾಗಿದೆ. ಮೊದಲ ಸುತ್ತಿನಲ್ಲಿ ನಡೆದ
48 ವಾರ್ಡುಗಳ ಪೈಕಿ ಬಹುತೇಕ ವಾರ್ಡ್ ಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, 14 ರಲ್ಲಿ ಬೆಜೆಪಿ, 5 ಕಾಂಗ್ರೆಸ್, 3 ಪಕ್ಷೇತರರು ಜಯ ಗಳಿಸಿದ್ದಾರೆ.
ನಂ. 18 ರಲ್ಲಿ ಬಿಜೆಪಿಯ ಶೀವು ಹಿರೇಮಠ, ಗೆಲವು. 13 ರಲ್ಲಿ ಬಿಜೆಪಿ ಸುರೇಶ ಬೆದರೆ ಗೆಲುವು. ವಾರ್ಡ್ 79ರಲ್ಲಿ ಕಾಂಗ್ರೆಸ್ ನ ಪಾಮಿದಾ ಬಾಬಾಜಾನ ಕಾರಡಗಿ ಗೆಲುವು. ವಾರ್ಡ್ 26 ರಲ್ಲಿ ಬೆಜೆಪಿಯ ನೀಲವ್ವ ಅರವಾಳದ ಗೆಲುವು. 27 ರಲ್ಲಿ ಬಿಜೆಪಿಯ ಸುನೀತಾ ಮಾಳವಾದಕರ್, 28 ರಲ್ಲಿ ಬಿಜೆಪಿಯ ಚಂದ್ರಶೇಖರ ಮನಗುಂಡಿ ಗೆಲುವು. ವಾರ್ಡ್ ನಂ 49 ನಲ್ಲಿ ಬಿಜೆಪಿಯ ವೀಣಾ ಚೇತನ ಬರದ್ವಾಡ ಗೆಲುವು. 73 ನೆ ವಾರ್ಡಿನಲ್ಲಿ ಬಿಜೆಪಿ ಶೀಲಾ ಕಾಟಕರ್ ಗೆಲುವು ಸಾಧಿಸಿದ್ದಾರೆ.
ಬೆಳಗಾವಿಯಲ್ಲಿ ಬಿಜೆಪಿ ಮುನ್ನಡೆ
ಇನ್ನು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ತನ್ನ ಮುನ್ನಡೆ ಕಾಯ್ದುಕೊಂಡಿದ್ದು ಅಧಿಕಾರ ಹಿಡಿಯುವಲ್ಲಿ ದಾಪುಗಾಲು ಹಾಕಿದೆ. ಒಟ್ಟು 58 ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಇದುವರೆಗೆ ಲಭ್ಯವಾದ ಮಾಹಿತಿಯಂತೆ ಬಿಜೆಪಿ 12 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ.
ಕಾಂಗ್ರೆಸ್ ಐದು ಸ್ಥಾನಗಳಲ್ಲಿ ಜಯಗಳಿಸಿದೆ. ಮಹಾರಾಷ್ಟ್ರ ಏಕೀಕರಣ ಸಮಿತಿ ನಾಲ್ಕು ಸ್ಥಾನಗಳಲ್ಲಿ ಜಯಗಳಿಸಿದ್ದರೆ ಅಸಾವುದ್ದೀನ ಓವೈಸಿ ನೇತೃತ್ವದ ಎಂಐಎಂ ಪಕ್ಷ ಮೊದಲ ಬಾರಿಗೆ ಪಾಲಿಕೆಯಲ್ಲಿ ತನ್ನ ಖಾತೆ ತೆರೆದಿದೆ. ಪಕ್ಷೇತರರು ಐದು ಕಡೆಗಳಲ್ಲಿ ಜಯಗಳಿಸಿದ್ದಾರೆ. ಇನ್ನು ಕಾಂಗ್ರೆಸ್ ನ ಮುಜಮಿಲ್ ಡೋಣಿ ಸತತ ಮೂರನೇ ಬಾರಿ ಜಯಸಾಧಿಸುವ ಹ್ಯಾಟ್ರಿಕ್ ಗೌರವ ಪಡೆದಿದ್ದಾರೆ.