ತಾ.ಪಂ. ಸಭಾಂಗಣದಲ್ಲಿ ಗುರುವಾರ ಗ್ರಾ.ಪಂ. ಭೂ ಮಾಪನ, ಗ್ರಾಮ ಲೆಕ್ಕಾಧಿ ಕಾರಿ ಹಾಗೂ ಎಂಜಿನಿಯರ್‌ಗಳ ಸಭೆ ಶಾಸಕಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
Advertisement
ಮನೆ ನಂಬ್ರ ಇಲ್ಲ ಎಂಬ ಕಾರಣವೊಡ್ಡಿ ಹಕ್ಕು ಪತ್ರ ನೀಡುತ್ತಿಲ್ಲ ಎಂದು ಅನೇಕ ದೂರುಗಳು ಬಂದಿವೆ. ಸರಕಾರಿ ಜಾಗದಲ್ಲಿ ಮನೆ ಕಟ್ಟಿದ ಕಾರಣ, ಕೆಲವರಿಗೆ ನಂಬರ್ ಸಿಗದಿರಬಹುದು. ಆದರೆ ಹತ್ತಾರು ವರ್ಷ ಗಳಿಂದ ಮನೆ ಕಟ್ಟಿಕೊಂಡು ವಾಸಿಸುತ್ತಿರು ವವರ ಬಗ್ಗೆ ಗ್ರಾ.ಪಂ. ಅಧಿಕಾರಿಗಳಿಗೆ ಮಾಹಿತಿ ಇರುತ್ತದೆ. ಹಾಗಾಗಿ ಇಂತಿಷ್ಟು ವರ್ಷಗಳಿಂದ ವಾಸಿಸುತ್ತಿದ್ದಾರೆ ಎಂದು ದೃಢೀಕರಣ ಪತ್ರ ನೀಡಬೇಕೆಂದು ಗ್ರಾ.ಪಂ. ಅಧಿಕಾರಿಗಳಿಗೆ ಅವರು ಸೂಚಿಸಿದರು.
ಕಂದಾಯ ಅಧಿಕಾರಿಗಳು, ಗ್ರಾ.ಪಂ. ಜಂಟಿಯಾಗಿ ಸ್ಥಳ ಸಮೀಕ್ಷೆ ನಡೆಸಿ ದೃಢೀಕ ರಣ ಪತ್ರ ನೀಡಬಹುದು. ನಂಬರ್ ಕೇಳಿ ಫಲಾನುಭವಿಗಳನ್ನು ಸತಾಯಿಸ ಬೇಡಿ. ಒಂದಿಷ್ಟು ಮಾನವೀಯತೆ ತೋರಿ. ಇನ್ನು ಮುಂದೆ ಸಾರ್ವಜನಿಕರಿಂದ ದೂರು ಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ಅವರು ಎಚ್ಚರಿಸಿದರು. ಎಸಿ ರಘುನಂದನ್ ಮೂರ್ತಿ ಮಾತ ನಾಡಿ, ಮನೆ ನಂಬರ್ ಕಡ್ಡಾಯ ಅಲ್ಲ ಎಂದು ಈ ಹಿಂದೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಅದನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಗ್ರಾಮ ಮಟ್ಟದಲ್ಲಿ ಗ್ರಾ.ಪಂ. ಅಧಿಕಾರಿಗಳು, ನಗರ ವ್ಯಾಪ್ತಿಯಲ್ಲಿ ನಗರಸಭೆಯಿಂದ ದೃಢೀಕರಣ ಪತ್ರ ನೀಡಬೇಕು ಎಂದರು.
Related Articles
Advertisement
ಸ್ಥಳದ ಕೊರತೆ?ಗ್ರಾ.ಪಂ. ವ್ಯಾಪ್ತಿಯಲ್ಲಿ ಘನತ್ಯಾಜ್ಯ ಘಟಕ, ಶ್ಮಶಾನ, ಮನೆ ನಿವೇಶನಕ್ಕೆ ಕಾದಿರಿಸಿದ ಸ್ಥಳದ ಬಗ್ಗೆ ಮಾಹಿತಿ ನೀಡುವಂತೆ ಶಾಸಕಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಗ್ರಾ. ಪಂ. ಅಧಿಕಾರಿಗಳಿಗೆ ಸೂಚಿಸಿದರು. ಆದರೆ, ಬಹುತೇಕ ಗ್ರಾ.ಪಂ.ಗಳಲ್ಲಿ ಸ್ಥಳದ ಕೊರತೆ, ಗಡಿ ಗುರುತು ಮಾಡದಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಸಮರ್ಪಕ ಮಾಹಿತಿ ಇಲ್ಲದೆ ಸಭೆಯಲ್ಲಿ ಉತ್ತರಿಸುವುದು ಬೇಡ ಎಂದು ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಸೂಚಿಸಿದರಲ್ಲದೇ, ಕಾದಿರಿಸಿದ ಸ್ಥಳದ ಬಗ್ಗೆ ಸಮರ್ಪಕ ಮಾಹಿತಿ ನೀಡಬೇಕು ಎಂದರು. ಒಂದೇ ಕಡೇ..
ಆರ್ಯಾಪು ಗ್ರಾ.ಪಂ. ವ್ಯಾಪ್ತಿಯಲ್ಲಿ ಜಾಗ ಮೀಸಲಿಟ್ಟಿರುವ ಮಾಹಿತಿ ನೀಡುವಂತೆ ಸೂಚನೆ ನೀಡಿದ ಸಂದರ್ಭ ಉತ್ತರಿಸಿದ ಗ್ರಾ.ಪಂ. ಅಧಿಕಾರಿ, ಕಿನ್ನಿ ಮಜಲು ಬಳಿ ಶ್ಮಶಾನ, ಮನೆ ನಿವೇಶನ, ಘನತ್ಯಾಜ್ಯ ಘಟಕಕ್ಕೆ ಮೂರೂವರೆ ಎಕ್ರೆ ಸ್ಥಳ ಕಾದಿರಿಸಲಾಗಿದೆ ಎಂದರು. ಒಂದೇ ಕಡೆ ಮನೆ, ಶ್ಮಶಾನ, ಘನತ್ಯಾಜ್ಯ ಘಟಕ ನಿರ್ಮಿ ಸುವುದು ಹೇಗೆ ಎಂದು ಶಾಸಕಿ ಮರು ಪ್ರಶ್ನಿಸಿದರು. ಈಸ್ಥಳವನ್ನು ಮನೆ ನಿವೇಶನಕ್ಕೆ ಮೀಸಲಿಡಿ, ಉಳಿದವುಗಳಿಗೆ ಪ್ರತ್ಯೇಕ ಜಾಗ ಕಾದಿರಿಸಿ ಎಂದು ಅವರು ಸೂಚಿಸಿದರು.