Advertisement

ತೇಲ್ಕೂರ ಅವಳಿ ಜಿಲ್ಲೆಯ ಭರವಸೆ ಬೆಳಕು

02:38 PM Aug 20, 2022 | Team Udayavani |

ಸೇಡಂ: ಸಂಪೂರ್ಣ ಮುಚ್ಚಿದ್ದ ಹಾಗೂ ಯಾವುದಕ್ಕೂ ಉಪಯೋಗಿಲ್ಲ ಎಂದು ಭಾವಿಸಿದ್ದ ಡಿಸಿಸಿ ಬ್ಯಾಂಕ್‌ಗೆ ಜೀವನೀಡಿ ಕಲಬುರಗಿ-ಯಾದಗಿರಿ ಅವಳಿ ಜಿಲ್ಲೆಗಳ ಪಾಲಿಗೆ ಭರವಸೆಯ ಬೆಳಕಾಗಿದ್ದಾರೆ ಎಂದು ಸಂಸದ ಡಾ|ಉಮೇಶ ಜಾಧವ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಪಟ್ಟಣದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿಗೆ ಸೇರ್ಪಡೆ ಆಗುತ್ತಿರುವವರಿಗೆ ಪಕ್ಷದ ಶಾಲು ಹೊದಿಸುವ ಮೂಲಕ ನೂರಾರು ಜನರನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು.

ಮೋದಿ ನೇತೃತ್ವದಲ್ಲಿ ದೇಶ ಸದೃಢವಾಗುತ್ತಿದೆ. ದೇಶಕ್ಕೆ ಶ್ರೇಷ್ಠ ಪ್ರಧಾನಿ ಸಿಕ್ಕಿದ್ದಾರೆ. ಅದೇ ರೀತಿ ಶಾಸಕ ರಾಜಕುಮಾರ ಪಾಟೀಲ ಹಿಡಿದ ಕಾರ್ಯ ಪೂರ್ಣವಾಗುವವರೆಗೂ ಬಿಡುವವರಲ್ಲ. ಕ್ಷೇತ್ರಕ್ಕೆ ಹೆಚ್ಚು ಅನುದಾನ ತಂದು ಅನೇಕ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ. ಕಾರ್ಯಕರ್ತರು ಅವರಿಗೆ ಶಕ್ತಿಯಾಗಿ ನಿಲ್ಲಬೇಕು ಎಂದು ಕರೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಯೋಜನೆ, ರಾಜ್ಯ ಸರ್ಕಾರದ ಕೊಡುಗೆಗಳು ಹಾಗೂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರಿಗೆ ಕ್ಷೇತ್ರದ ಬಗ್ಗೆ ಇರುವ ಕಾಳಜಿ ನೋಡಿ ಅನೇಕ ಪಕ್ಷಗಳ ಜನರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಹೇಳಿದರು.

ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಮಾತನಾಡಿ, ಕಾಂಗ್ರೆಸ್‌ ಪಕ್ಷವನ್ನು ದೇಶದಲ್ಲಿ ದೀಪ ಹಚ್ಚಿ ಹುಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಪರ್ವ ಆರಂಭವಾಗಿದೆ. ಕಾರ್ಯಕರ್ತರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ಕೆಲವು ಅನಿವಾರ್ಯ ಕಾರಣಕ್ಕೆ ಕೆಲ ಕೆಲಸಗಳು ಆಗಿರದಿದ್ದರೆ ಚಿಂತಿಸುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ಎಲ್ಲ ರೀತಿಯ ಅಭಿವೃದ್ಧಿ ಕಾರ್ಯಗಳು ಜರುಗಲಿವೆ ಎಂದರು.

Advertisement

ಬಿಜೆಪಿ ತಾಲೂಕಾಧ್ಯಕ್ಷ ಪರ್ವತರೆಡ್ಡಿ ಪಾಟೀಲ, ನಗರಾಧ್ಯಕ್ಷ ಸತೀಶ ಪಾಟೀಲ ತರನಳ್ಳಿ, ಪ್ರಮುಖರಾದ ಧರ್ಮಣ್ಣ ಇಟಗಾ, ಶಿವುಕುಮಾರ ಪಾಟೀಲ (ಜಿಕೆ) ತೇಲ್ಕೂರ, ಕಲ್ಯಾಣಪ್ಪ ಪಾಟೀಲ, ನಾಗಪ್ಪ ಕೊಳ್ಳಿ, ಮುಕುಂದ ದೇಶಪಾಂಡೆ, ರಾಮುನಾಯಕ್‌ ರಾಠೊಡ, ಓಂಪ್ರಕಾಶ ಪಾಟೀಲ, ವಿಜಯಕುಮಾರ ಆಡಕಿ, ವೆಂಕಟಯ್ಯ ಮುಸ್ತಾಜರ, ವಿಜಯಕುಮಾರ ಶರ್ಮಾ, ಆನಂದ ಚಂದಾಪೂರ, ರಾಜು ಕಟ್ಟಿ, ಮಲ್ಲಿಕಾರ್ಜುನ ದಳಪತಿ, ರುದ್ರಮುನಿ ರಾಮತೀರ್ಥಕರ್‌, ಶಿವಲಿಂಗಪ್ಪ ಶಟ್ಟಿ, ಸಿದ್ಧಲಿಂಗ ಗೌತಮ್‌ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next