Advertisement

ಗೃಹ ರಕ್ಷಕದಳ ಸೇವೆ ಶ್ಲಾಘನೀಯ

07:29 AM Jan 30, 2019 | Team Udayavani |

ಮಂಡ್ಯ: ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು, ನಾಗರೀಕರ ರಕ್ಷಣೆ ಮಾಡುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ಜೊತೆ ಕೈಜೋಡಿಸಿ ಕೆಲಸ ಮಾಡುತ್ತಿರುವ ಗೃಹರಕ್ಷಕ ದಳದ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಪ್ರಶಂಸಿಸಿದರು.

Advertisement

ನಗರದ ಪೊಲೀಸ್‌ ಪೆರೇಡ್‌ ಮೈದಾನದಲ್ಲಿ ಮಂಗಳವಾರ ನಡೆದ ಗೃಹರಕ್ಷಕ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಗೃಹ ರಕ್ಷಕ ದಳಕ್ಕೆ ಪೊಲೀಸ್‌ ಇಲಾಖೆಯಂತೆ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲದಿದ್ದರೂ ವಿಶೇಷ ರೀತಿಯಲ್ಲಿ ರಕ್ಷಣಾ ಕೆಲಸ ಮಾಡುತ್ತಾ ನಾಗರಿಕರ ಸೇವೆಯಲ್ಲಿ ತೊಡಗಿದೆ. ಸಿಬ್ಬಂದಿಗೆ ಸೌಲಭ್ಯ ಕಲ್ಪಿಸಲು ಸರ್ಕಾರ ಬದ್ಧ ಎಂದು ಭರವಸೆ ನೀಡಿದರು.

ವಿಧಾನ ಪರಿಷತ್‌ ಸದಸ್ಯ ಶ್ರೀಕಂಠೇಗೌಡ ಮಾತನಾಡಿ, ರಾಷ್ಟ್ರ ರಕ್ಷಣೆಯಲ್ಲಿ ಗೃಹರಕ್ಷಕ ದಳದ ಪಾತ್ರ ಮುಖ್ಯ. ಅಪರಾಧಗಳ ನಿಯಂತ್ರಿಸಲು ಹಾಗೂ ಸಮರ್ಪಕವಾಗಿ ನಿಭಾಯಿಸುವಲ್ಲಿ ಪೊಲೀಸ್‌ ಇಲಾಖೆ ಹಾಗೂ ಗೃಹರಕ್ಷಕ ದಳಕ್ಕೆ ಹೆಚ್ಚಿನ ಜವಾಬ್ದಾರಿಯಿದೆ. ಜಿಲ್ಲೆಗೆ ಗೌರವ ತಂದುಕೊಡುವ ದಿಸೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕೆಂದು ಹೇಳಿದರು.

ಇದೇ ವೇಳೆ ನಿವೃತ್ತ ಗೃಹ ರಕ್ಷಕ ದಳದ ಅಧಿಕಾರಿಗಳು, ಗೃಹರಕ್ಷರನ್ನು ಸಚಿವ ಪುಟ್ಟರಾಜು ಸನ್ಮಾನಿಸಿದರು. ಶಾಸಕ ಶ್ರೀನಿವಾಸ್‌, ಎಸ್ಪಿ ಶಿವಪ್ರಕಾಶ್‌, ಎಎಸ್ಪಿ ಬಲರಾಮೇಗೌಡ, ಜಿಪಂ ಸಿಇಒ ಯಾಲಕ್ಕಿಗೌಡ, ಗೃಹರಕ್ಷಕ ದಳದ ಕಮಾಂಡೆಂಟ್ ಮಹೇಶ, ಡೆಪ್ಯೂಟಿ ಕಮಾಂಡೆಂಟ್ ಸುರೇಶ್‌, ಸಹಾಯಕ ಬೋಧಕ ವಿಶ್ವನಾಥ, ಪ್ರೊ. ಜಯಪ್ರಕಾಶಗೌಡ, ಡಾ. ಮುದ್ದೇಗೌಡ, ಪ್ರೊ.ಶಿವಣ್ಣ, ಶಿವಲಿಂಗಯ್ಯ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next