Advertisement

ಪಠ್ಯದಿಂದ ತೆಗೆದಾಕ್ಷಣ ಟಿಪ್ಪು ಇತಿಹಾಸ ಬದಲಾಗದು: ಯು.ಟಿ. ಖಾದರ್‌

11:57 PM Oct 30, 2019 | mahesh |

ಮಂಗಳೂರು: ನೆರೆಯಿಂದ ತತ್ತರಿಸಿದವರಿಗೆ ಸೂಕ್ತ ಪರಿಹಾರ ನೀಡಲು ಸಾಧ್ಯವಾಗದ ಬಿಜೆಪಿ ಸರಕಾರವು ವೈಫ‌ಲ್ಯ ಮರೆಮಾಚಲು ಪಠ್ಯ ಪುಸ್ತಕದಿಂದ ಟಿಪ್ಪು ಪಾಠ ಹಿಂದೆಗೆತದ ವಿಚಾರವನ್ನು ಮುನ್ನೆಲೆಗೆ ತಂದಿದೆ. ಪಠ್ಯ ದಿಂದ ತೆಗೆದಾಕ್ಷಣ ಟಿಪ್ಪು ಸುಲ್ತಾನನ ಇತಿಹಾಸ ಬದಲಾಗದು ಎಂದು ಶಾಸಕ ಯು.ಟಿ. ಖಾದರ್‌ ತಿಳಿಸಿದ್ದಾರೆ.

Advertisement

ಮಂಗಳೂರಿನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿ, ಟಿಪ್ಪು ಇತಿಹಾಸ ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ, ದೇಶ ಮತ್ತು ಜಗತ್ತಿನ ಹಲವೆಡೆ ಇದೆ. ಕರ್ನಾಟಕದ ಪಠ್ಯದಿಂದ ತೆಗೆದರೆ ಟಿಪ್ಪುವಿನ ಆಡಳಿತವನ್ನು ಅರಿತುಕೊಳ್ಳು ವುದರಿಂದ ಇಲ್ಲಿನ ಮಕ್ಕಳು ವಂಚಿತರಾಗಬಹುದು; ಆತನ ಆಡಳಿತ ಮತ್ತು ಹೋರಾಟವನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಬಿಜೆಪಿಯಿಂದ ನೇಮಿಸಲ್ಪಟ್ಟ ರಾಷ್ಟ್ರಪತಿಗಳೇ ಟಿಪ್ಪುವಿನ ಗುಣಗಾನ ಮಾಡಿದ್ದಾರೆ. ನಿತ್ಯ ಸಂಜೆ ಕೊಲ್ಲೂರು ದೇವಸ್ಥಾನದಲ್ಲಿ ಟಿಪ್ಪು ಸಲಾಂ ಎಂಬ ಪೂಜೆ ಇದೆ. ಶೃಂಗೇರಿ ಮಠಕ್ಕೆ ಟಿಪ್ಪು ಕೊಟ್ಟ ಕೊಡುಗೆ ಶಾಶ್ವತವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next