ಚನ್ನಮ್ಮನ ಕಿತ್ತೂರು: ಕಿತ್ತೂರು ಚನ್ನಮ್ಮಾಜಿಯ ವಿಜಯೋತ್ಸವ ನಿಮಿತ್ತ ಕಿತ್ತೂರು ಪಟ್ಟಣದಲ್ಲಿ ಹಮ್ಮಿಕೊಳ್ಳಲುವ ಕಿತ್ತೂರು ಉತ್ಸವ ಅ. 23, 24 ಹಾಗೂ 25ರಂದು ಅದ್ಧೂರಿಯಾಗಿ ನಡೆಯಲಿದೆ.
23ರಂದು ಬೆಳಗ್ಗೆ 10ಗಂಟೆಗೆ ಕಿತ್ತೂರಲ್ಲಿನ ರಾಷ್ಟ್ರೀಯ ಹೆದ್ದಾರಿ ಪಕ್ಕದ ಚನ್ನಮ್ಮಾ ವರ್ತುಳದಲ್ಲಿ ವಿಜಯ ಜ್ಯೋತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಬರಮಾಡಿಕೊಳ್ಳಲಿದ್ದಾರೆ. ನಂತರ ಕಿತ್ತೂರು ಸಂಸ್ಥಾನದ ಧ್ವಜಾರೋಹಣ ನೆರೆವೇರಿಸುವರು. 10:30ಕ್ಕೆ ಜಾನಪದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಅಂಗವಿಕಲರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವೆ ಶಶಿಕಲಾ ಜೊಲ್ಲೆ ಜಾನಪದ ಕಲಾವಾಹಿಣಿ ಉದ್ಘಾಟಿಸವರು.11ಗಂಟೆಗೆ ಕೋಟೆ ಆವರಣದಲ್ಲಿನ ವಸ್ತು ಪ್ರದರ್ಶನವನ್ನು ರೈಲ್ವೆ ಸಚಿವ ಸುರೇಶ ಅಂಗಡಿ ಉದ್ಘಾಟಿಸುವರು. ಸಂಜೆ 7ಗಂಟೆಗೆ ಕಿತ್ತೂರು ಕೋಟೆ ಆವರಣದಲ್ಲಿನ ಉತ್ಸವ ಉದ್ಘಾಟನಾ ಸಮಾರಂಭವು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜರುಗಲಿದ್ದು, ಉದ್ಘಾಟಕರಾಗಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಆಗಮಿಸಲಿದ್ದಾರೆ.
ಶಾಸಕ ಮಹಾಂತೇಶ ದೊಡಗೌಡರ ಅಧ್ಯಕ್ಷತೆಯಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ, ರೈಲ್ವೆ ಸಚಿವರಾದ ಸುರೇಶ ಅಂಗಡಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ, ರಾಜ್ಯ ಪ್ರವಾಸೋದ್ಯಮ ಸಚಿವ ಸಿ ಟಿ ರವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಅಂಗವಿಕಲ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವೆ ಶಶಿಕಲಾ ಜೊಲ್ಲೆ, ರಾಜ್ಯ ವಿಧಾನ ಪರಿಷತ್ ಸದಸ್ಯ ಹಾಗೂ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಜಿಪಂ ಅಧ್ಯಕ್ಷೆ ಆಶಾ ಐಹೊಳೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ, ಸಂಸದ ಅನಂತಕುಮಾರ ಹೆಗಡೆ, ರಾಜ್ಯ ವಿಧಾನ ಸಭಾ ಸದಸ್ಯ ಪ್ರಭಾಕರ ಕೋರೆ ಹಾಗೂ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಭಾಗವಹಿಸಲಿದ್ದಾರೆ. 23ರಂದು ಮಧ್ಯಾಹ್ನ 3:30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 24ರಂದು ಕೋಟೆ ಆವರಣದಲ್ಲಿನ ವೇದಿಕೆಯಲ್ಲಿ ಬೆಳಗ್ಗೆ 11ಗಂಟೆಗೆ ರೈತರ ತವಕ ತಲ್ಲಣಗಳು ಹಾಗೂ ನರೆ ಹಾವಳಿ ಕುರಿತು ರಾಜ್ಯ ಮಟ್ಟದ ಕೃಷಿ ವಿಚಾರ ಸಂಕಿರಣ ಜರುಗಲಿದೆ.
ಧಾರವಾಡದ ಪತ್ರಾಗಾರ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುಳಾ ಎಲಿಗಾರ ಅವರು ಉದ್ಘಾಟನೆಗೊಳಿಸುವರು. ಡಾ. ಎನ್.ಸಿ ಸೀತಾರಾಮ್ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ, ಜಿಲ್ಲಾ ಕೃಷಿ ಸಮಾಜದ ಅಧ್ಯಕ್ಷ ಎಸ್.ಎಫ್. ದೊಡಗೌಡರ, ತಾಲೂಕು ಕೃಷಿ ಸಮಾಜ ಅಧ್ಯಕ್ಷ ಗುರು ಮೆಟಗುಡ್ಡ ಇತರರು ಆಗಮಿಸಲಿದ್ದಾರೆ. ಅದೇ ದಿನ 11ಗಂಟೆಗೆ ಕ್ರೀಡಾ ಕಾರ್ಯಕ್ರಮಗಳು ಕಲ್ಮಠ ಕಾಲೇಜು ಮೈದಾನದಲ್ಲಿ ಜರಗಲಿವೆ. ಮಧ್ಯಾಹ್ನ 3:30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. 25ರಂದು ಬೆಳಗ್ಗೆ 11ಗಂಟೆಗೆ ಕೋಟೆ ಆವರಣದ ವೇದಿಕೆಯಲ್ಲಿ ರಾಜ್ಯ ಮಟ್ಟದ ಕವಿಗೋಷ್ಠಿ ಜರುಗುವುದು. ಮಧ್ಯಾಹ್ನ 3 ಗಂಟೆಗೆ ಕಿತ್ತೂರಿನ
ಕೆ.ಇ.ಬಿ ಹತ್ತಿರ ಮಿನಿ ವಿಧಾನಸೌದ ಕಟ್ಟಡದ ಪಕ್ಕದಲ್ಲಿ ಪುರುಷ ಹಾಗೂ ಮಹಿಳಾ ಕುಸ್ತಿಗಳನ್ನು ಶಾಸಕ ಮಹಾಂತೇಶ ದೊಡಗೌಡರ ಉದ್ಘಾಟಿಸುವರು. ನಂತರ 3:30ಕ್ಕೆ ಕೋಟೆ ಆವರಣದ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಳ್ಳುವವು. ರಾತ್ರಿ ಗಂಟೆಗೆ ಸಮಾರೋಪ ಸಮಾರಂಭ ಜರುಗುವುದು.