Advertisement
ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಮಳೆ ಹಾಗೂ ಮಲಪ್ರಭಾ ನದಿಯ ಪ್ರವಾಹದ ನೀರು ಹೆಚ್ಚಳವಾಗಿರುವುದರಿಂದ ಜನರು ಕಂಗಾಲಾಗಿದ್ದಾರೆ.
ಚಿತ್ತರಗಿ ಮಠ ಜಲಾವೃತ: ಇತಿಹಾಸ ಪ್ರಸಿದ್ಧ ಸುಕ್ಷೇತ್ರ ವಿಜಯ ಮಹಾಂತೇಶ್ವರ ಸಂಸ್ಥಾನಮಠ (ಮೂಲಮಠ) ವಿರುವ ಚಿತ್ತರಗಿ ಗ್ರಾಮದಲ್ಲಿ ಮತ್ತೊಮ್ಮೆ ಮಲಪ್ರಭಾ ನದಿಯ ಭೋರ್ಗರೆತ ಪ್ರವಾಹ ಬಂದ ಹಿನ್ನೆಲೆಯಲ್ಲಿ ವಿಜಯ ಮಹಾಂತೇಶ್ವರ ಮೂಲಮಠ ಜಲಾವೃತಗೊಂಡಿದೆ. ವಿಜಯಮಹಾಂತೇಶ ಶ್ರೀಗಳು ಮೂಲತಃ ಚಿತ್ತರಗಿಯವರಾಗಿದ್ದು ಇಳಕಲ್ ಮಠದ ಸ್ಥಾಪಕರೆಂದು ಪ್ರತೀತಿ ಇದೆ, ಚಿತ್ತರಗಿ ವಿಜಯ ಮಹಾಂತೇಶ ಮಠವು ನಾಡಿನ ಪ್ರತಿಷ್ಟಿತ ಮಠಗಳಲ್ಲಿ ಒಂದು, ನಾಡಿನುದ್ದಕ್ಕೂ 63 ಶಾಖಾಮಠಗಳನ್ನು ಹೊಂದಿದೆ ಮತ್ತು ನಾಡಿನುದ್ದಕ್ಕೂ ಅಪಾರ ಭಕ್ತ ಸಮೂಹ ಹೊಂದಿದೆ.
Related Articles
Advertisement