Advertisement

ಮೂರ್ತಿ ಅಮಾನತು ವಿವರ ಕೋರಿದ ಹೈಕೋರ್ಟ್‌

11:14 PM Aug 19, 2019 | Team Udayavani |

ಬೆಂಗಳೂರು: ವಿಧಾನಸಭೆ ಕಾರ್ಯದರ್ಶಿ ಹುದ್ದೆಯಿಂದ ಎಸ್‌. ಮೂರ್ತಿ ಅವರನ್ನು ಅಮಾನತುಗೊಳಿಸಲು ತೀರ್ಮಾನ ಕೈಗೊಂಡ ವಿಶೇಷ ಮಂಡಳಿಯ ಎಲ್ಲ ವಿವರಗಳನ್ನು ನೀಡುವಂತೆ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಸೋಮವಾರ ನಿರ್ದೇಶಿಸಿದೆ. ಅಮಾನತು ಆದೇಶ ಸಂಬಂಧ ಎಸ್‌. ಮೂರ್ತಿ ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ನಡೆಸಿದ ಮುಖ್ಯ ನ್ಯಾ. ಅಭಯ್‌ ಎಸ್‌ .ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿದೆ.

Advertisement

ವಿಚಾರಣೆ ವೇಳೆ ಅರ್ಜಿದಾರ ಪರ ಹಿರಿಯ ವಕೀಲ, ಅರ್ಜಿದಾರರನ್ನು ಅಮಾನತು ಮಾಡುವ ಅಧಿಕಾರ ವಿಧಾನಸಭೆ ಕಾರ್ಯದರ್ಶಿಗಿಲ್ಲ. ಹೀಗಾಗಿ ಅಮಾನತು ಕಾನೂನು ಬಾಹಿರ ಕ್ರಮವಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಇದಕ್ಕೆ ಆಕ್ಷೇಪಿಸಿದ ಸರ್ಕಾರದ ಪರ ವಕೀಲರು, ಅವ್ಯವಹಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಅಮಾನತು ಹೊರಡಿಸುವ ಮುನ್ನ ವಿಧಾನಸಭೆ ವಿಶೇಷ ಮಂಡಳಿ ಸಭೆ ನಡೆಸಿ ತೀರ್ಮಾನ ಕೈಗೊಂಡಿದೆ ಎಂದು ಪ್ರತಿಪಾದಿಸಿದರು.

ವಾದ -ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರ ಅಮಾನತು ಕುರಿತ ವಿಶೇಷ ಮಂಡಳಿ ಸಭೆ ನಡೆಸಿದ ದಿನಾಂಕ, ಕೈಗೊಂಡ ನಿರ್ಣಯ ಸಹಿತ ಎಲ್ಲ ವಿವರಗಳನ್ನು ಸಲ್ಲಿಸಿ ಎಂದು ನಿದೇ ರ್ಶಿಸಿ ಸೆ.4ಕ್ಕೆ ವಿಚಾರಣೆ ಮುಂದೂಡಿದೆ. 2016 ಹಾಗೂ 2017ನೇ ಸಾಲಿನಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಅಧಿವೇಶನಕ್ಕೆ ಸಂಬಂಧಿಸಿದಂತೆ ಕೈಗೊಳ್ಳಲಾದ ಕಾಮಗಾರಿ ಹಾಗೂ ಇತರೆ ಖರ್ಚು ವೆಚ್ಚಗಳಲ್ಲಿ ಅವ್ಯವಹಾರ ನಡೆಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿ ಸಿದಂತೆ ವಿಧಾನಸಭೆ ಕಾರ್ಯದರ್ಶಿಯಾಗಿದ್ದ ಎಸ್‌. ಮೂರ್ತಿ ಅವರನ್ನು 2018ರ ಡಿಸೆಂಬರ್‌ 27ರಂದು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next