Advertisement

ಅಯೋಧ್ಯೆ ಹೊರವಲಯಕ್ಕೆ ಅಖಾಡವೇ ವಾರಸುದಾರ?

12:18 AM Sep 05, 2019 | Sriram |

ಹೊಸದಿಲ್ಲಿ: ವಿವಾದಿತ ರಾಮ ಜನ್ಮಭೂಮಿಯ ಹೊರ ವಲಯಕ್ಕೆ ನಿರ್ಮೋಹಿ ಅಖಾಡ ಮಾಲೀಕತ್ವ ಹೊಂದಿದೆ ಎಂಬುದನ್ನು ಒಪ್ಪಿಕೊಳ್ಳುತ್ತೀರೋ ಎಂಬುದಾಗಿ ಮುಸ್ಲಿಂ ದಾವೆದಾರರನ್ನು ಸುಪ್ರೀಂಕೋರ್ಟ್‌ ಬುಧವಾರ ಪ್ರಶ್ನೆ ಮಾಡಿದೆ.

Advertisement

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಸಾಂವಿಧಾನಿಕ ಪೀಠದ ಮುಂದೆ 19ನೇ ದಿನ ವಾದ ಮಂಡನೆ ನಡೆಯಿತು.ನಿರ್ಮೋಹಿ ಅಖಾಡವು ರಾಮ್‌ ಲಲ್ಲಾ ಭಕ್ತರು ಎಂಬುದನ್ನು ಮುಸ್ಲಿಂ ಪಕ್ಷಗಳು ಒಪ್ಪುತ್ತಿವೆ.

ಆದರೆ ಆ ಭೂಮಿಗೆ ಅಖಾಡ ಮಾಲೀಕತ್ವ ಹೊಂದಿದೆ ಎಂಬುದನ್ನು ಒಪ್ಪಿಕೊಳ್ಳಲಾಗದು ಎಂದು ಮುಸ್ಲಿಂ ದಾವೆದಾರರ ಪರ ವಕೀಲ ರಾಜೀವ್‌ ಧವನ್‌ ಹೇಳಿದ್ದಾರೆ. ಇದೇ ವೇಳೆ ಈ ಭಾಗದ ಆಡಳಿತಾತ್ಮಕ ಹಕ್ಕನ್ನೂ ನಮಗೆ ಕೊಡಬೇಕು ಎಂದು ಅಖಾಡಾ ವಾದಿಸಿದೆ. ನಾವು ಕೇವಲ ಭಕ್ತರಾಗಿದ್ದು, ಇದರಲ್ಲಿ ನಮಗೆ ಆಡಳಿತಾತ್ಮಕ ಹಕ್ಕಿಲ್ಲ. ರಾಮ ಚಬುತರ ಮತ್ತು ಸೀತಾ ರಸೋಯಿ ಇಲ್ಲಿ ಇದ್ದು, ಈ ಭಾಗವು ಮಸೀದಿಯಾಗಿರಲು ಸಾಧ್ಯವೇ ಇಲ್ಲ ಎಂದು ಅಖಾಡ ವಾದಿಸಿದೆ. ಕೋರ್ಟ್‌ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ದೂರುದಾರರ ಮೇಲೆ ದಾಳಿ ವಿಚಾರಣೆ: ಇತ್ತೀಚೆಗೆ ಅಯೋಧ್ಯೆಯಲ್ಲಿ ಮೂಲ ದಾವೆದಾರರಲ್ಲಿ ಒಬ್ಬರಾಗಿರುವ ಇಕ್ಬಾಲ್‌ ಅನ್ಸಾರಿ ಪುತ್ರ ಮೊಹಮದ್‌ ಹಶೀಮ್‌ ಮೇಲೆ ಹಲ್ಲೆ ನಡೆಸಿದ ಪ್ರಕರಣವನ್ನು ಪರಿಗಣಿಸುವುದಾಗಿ ಸುಪ್ರೀಂಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next