Advertisement

ಎರಡೂ ವಾರ್ಡ್‌ಗಳಲ್ಲಿ ಮೈತ್ರಿಗೆ ಬಂಡಾಯದ ಬಿಸಿ

12:58 AM May 26, 2019 | Team Udayavani |

ಬೆಂಗಳೂರು: ಪಕ್ಷದ ಮುಖಂಡರ ಒಳಜಗಳದಿಂದಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಭಾರೀ ಹಿನ್ನಡೆ ಅನುಭವಿಸಿದ ಬೆನ್ನಲ್ಲೇ ಇದೀಗ ಪಾಲಿಕೆ ವ್ಯಾಪ್ತಿಯ ಎರಡು ವಾರ್ಡ್‌ಗಳ ಉಪಚುನಾವಣೆಯಲ್ಲೂ ಮೈತ್ರಿ ಪಕ್ಷಗಳಿಗೆ ಬಂಡಾಯದ ಬಿಸಿ ಎದುರಾಗಿದೆ.

Advertisement

ಕಾವೇರಿಪುರ ಹಾಗೂ ಸಗಾಯಪುರ ವಾರ್ಡ್‌ಗಳಲ್ಲಿ ಬಂಡಾಯ ಎದುರಾಗಿರುವುದು ಕಾಂಗ್ರೆಸ್‌-ಜೆಡಿಎಸ್‌ ನಾಯಕರಿಗೆ ತಲೆನೋವಾಗಿ ಪರಿಗಣಮಿಸಿದೆ. ಮೈತ್ರಿ ಧರ್ಮದಂತೆ ತಲಾ ಒಂದು ವಾರ್ಡ್‌ ಅನ್ನು ಎರಡೂ ಪಕ್ಷಗಳು ಹಂಚಿಕೊಂಡಿವೆ. ಆದರೆ, ಎರಡೂ ವಾರ್ಡ್‌ಗಳಲ್ಲಿ ಜೆಡಿಎಸ್‌ ಸದಸ್ಯರೇ ಮೈತ್ರಿಗೆ ತಲೆನೋವಾಗಿ ಪರಿಗಣಿಸಿದ್ದಾರೆ.

ಸಗಾಯಪುರ ವಾರ್ಡ್‌ನಲ್ಲಿ ಕಾಂಗ್ರೆಸ್‌ನಿಂದ ಪಳಿನಿಯಮ್ಮಾಳ್‌ ಸ್ಪರ್ಧಿಸಿದ್ದು, ಬಿಜೆಪಿಯಿಂದ ಜೇಯೇರೀಮ್‌ ಕಣದಲ್ಲಿದ್ದಾರೆ. ಆದರೆ, ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋತಿದ್ದ ಮಾರಿಮುತ್ತು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದು ಕಾಂಗ್ರೆಸ್‌ಗೆ ಮುಳುವಾಗುವ ಸಾಧ್ಯತೆಯಿದೆ.

ಇನ್ನು ಕಾವೇರಿಪುರ ವಾರ್ಡ್‌ನಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಸುಶೀಲಾ ಅವರು ಸ್ಪರ್ಧಿಸಿದ್ದಾರೆ. ಆದರೆ, ಹಿಂದೆ ಪಾಲಿಕೆ ಸದಸ್ಯೆಯಾಗಿದ್ದ ರಮೀಳಾ ಉಮಾಶಂಕರ್‌ ಅವರ ಕುಟುಂಬದವರಿಗೆ ಟಿಕೆಟ್‌ ನೀಡಿದ ಹಿನ್ನೆಲೆಯಲ್ಲಿ ರಮೀಳಾ ಅವರ ಪತಿ ಉಮಾಶಂಕರ್‌ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಈ ಅಸಮಾಧಾನ, ಮುನಿಸಿನ ಲಾಭ ಪಡೆಯಲು ಬಿಜೆಪಿ ಕಾರ್ಯತಂತ್ರ ಹೆಣೆದಿದೆ.

ನಿಷೇಧಾಜ್ಞೆ ಜಾರಿ: ಬಿಬಿಎಂಪಿ ವ್ಯಾಪ್ತಿಯ ಎರಡು ವಾರ್ಡ್‌ಗಳಿಗೆ ಮೇ 29ರಂದು ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮೇ 28ರ ಬೆಳಗ್ಗೆ 7 ಗಂಟೆಯಿಂದ ಮೇ 29ರ ಮಧ್ಯರಾತ್ರಿ 12ರವರೆಗೆ ಎರಡೂ ವಾರ್ಡ್‌ಗಳಲ್ಲಿ ರಾಜ್ಯ ಚುನಾವಣಾ ಆಯೋಗ ನಿಷೇಧಾಜ್ಞೆ ಜಾರಿಗೊಳಿಸಿದೆ.

Advertisement

ನಿಷೇಧಾಜ್ಞೆ ಜಾರಿಯಲ್ಲಿರುವ ಸಂದರ್ಭದಲ್ಲಿ ಯಾವುದೇ ವ್ಯಕ್ತಿಯಾಗಲಿ ಶಸ್ತ್ರಾಸ್ತ್ರಗಳನ್ನು ಹಿಡಿದು ಓಡಾಡುವಂತಿಲ್ಲ. ಸ್ಫೋಟಕ ಸಿಡಿಸುವುದಾಗಲಿ, ಕಲ್ಲುಗಳನ್ನು ಎಸೆಯುವುದು ಹಾಗೂ ಮೆರವಣಿಗೆ ನಡೆಸುವುದುನ್ನು ನಿಷೇಧಿಸಿದ್ದು, ನಿಯಮ ಉಲ್ಲಂ ಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಕಾವೇರಿಪುರ ವಾರ್ಡ್‌ಗೆ ಒಳಪಡುವ ಪಶ್ಚಿಮ ವಿಭಾಗದ ಕಮಾಕ್ಷಿಪಾಳ್ಯ ಮತ್ತು ವಿಜಯನಗರ ಹಾಗೂ ಸಗಾಯಪುರ ವಾರ್ಡ್‌ಗೆ ಒಳಪಡುವ ಪೂರ್ವ ವಿಭಾಗದ ಕೆ.ಜಿ.ಹಳ್ಳಿ ಮತ್ತು ಪುಲಿಕೇಶಿನಗರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಶಾಂತಿಯುತವಾಗಿ ಚುನಾವಣಾ ಪ್ರಕ್ರಿಯೆ ನಡೆಸುವ ಉದ್ದೇಶದಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಪೊಲೀಸ್‌ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮದ್ಯ ಮಾರಾಟ ನಿಷೇಧ: ಎರಡೂ ವಾರ್ಡ್‌ಗಳಲ್ಲಿರುವ ಬಾರ್‌, ವೈನ್‌ಶಾಪ್‌, ಪಬ್‌ಗಳ ಹಾಗೂ ಮದ್ಯ ಮಾರಾಟ ಮಳಿಗೆಗಳಿಗೆ ಮೇ 28ರ ಬೆಳಗ್ಗೆ 7ರಿಂದ ಮೇ 29ರ ಮಧ್ಯರಾತ್ರಿಯವರೆಗೆ ಅಂಗಡಿಗಳನ್ನು ಮುಚ್ಚುವಂತೆ ಪೊಲೀಸ್‌ ಆಯುಕ್ತರು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next