Advertisement
ಹೌದು ದೇಶಾದ್ಯಂತ ಬಿಸಿಲಿನ ಝಳವು ದಿನ ಕಳೆದಂತೆ ದಾಖಲೆ ಬರೆಯತೊಡಗಿದ್ದು, ವಿಪರೀತ ಸೆಕೆಯಿಂದ ಜನ ಬಳಲಿ ಬೆಂಡಾಗುತ್ತಿದ್ದಾರೆ. ಮನುಷ್ಯರೇನು, ಬೃಹತ್ ಬಂಡೆಕಲ್ಲುಗಳಿಗೂ “ಬಿಸಿ” ತಟ್ಟಿದೆ. ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆ ಯ ಗೋನೆಗಂಡ್ಲಾ ಗ್ರಾಮದಲ್ಲಿ ಮನೆಗಳ ನಡುವೆ ಬೃಹತ್ತಾಗಿ ಬೆಳೆದು ನಿಂತಿದ್ದ ಬಂಡೆಕಲ್ಲೊಂದು ಬಿಸಿಲು ತಾಳಲಾರದೇ ಬಿರುಕು ಬಿಟ್ಟಿದೆ!
Related Articles
Advertisement
217 ಬೇಸಗೆ ವಿಶೇಷ ರೈಲುಬೇಸಗೆ ಋತುವಿನಲ್ಲಿ ಹೆಚ್ಚುವರಿ ದಟ್ಟಣೆಯನ್ನು ಕಡಿಮೆ ಮಾಡುವ ಮತ್ತು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿ ನಲ್ಲಿ ರೈಲ್ವೇ ಸಚಿವಾಲಯವು, 217 ವಿಶೇ ಷ ರೈಲುಗಳ ಸಂಚಾರ ಆರಂಭಿಸುತ್ತಿರುವು ದಾಗಿ ಘೋಷಿಸಿದೆ. ಪಟ್ನಾ, ಮುಂಬಯಿ, ಬೆಂಗ ಳೂರು, ಚೆನ್ನೈಯಂಥ ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರಯಾಣ ಬೆಳೆಸುವವರಿಗೆ ಇದರಿಂದ ಅನುಕೂಲವಾಗಲಿದೆ. ಭಾರತೀಯ ಹವಾಮಾನ ಇಲಾಖೆಯು ಬುಧವಾರ ತೆಲಂಗಾಣದ ಬಹುತೇಕ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಈ ವಾರ ಇಲ್ಲಿ ಗರಿಷ್ಠ ತಾಪಮಾನ 45 ಡಿ.ಸೆ.ಗೆ ತಲುಪುವ ಅಪಾಯವಿದೆ ಎಂದು ಇಲಾಖೆ ಎಚ್ಚರಿಸಿದೆ. ಹೈದರಾಬಾದ್‌ಗೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಬುಧವಾರ ಅದಿಲಾಬಾದ್‌ನಲ್ಲಿ 42.2 ಡಿ.ಸೆ. ತಾಪಮಾನ ದಾಖಲಾಗಿದೆ. ದಿಲ್ಲಿಯಲ್ಲೂ ಗರಿಷ್ಠ ತಾಪಮಾನ 40 ಡಿ.ಸೆ. ಆಗಿದ್ದು, ಮಹಾರಾಷ್ಟ್ರದ ಚಂದ್ರಾಪುರದಲ್ಲೂ
40ಡಿ.ಸೆ. ಆಗಿದೆ. ವಿದರ್ಭದಲ್ಲಿ 41.8 ಡಿ.ಸೆ.ಗೆ ತಲುಪಿದೆ. ಒಡಿಶಾದಲ್ಲಿ ಶಾಲೆಗಳಿಗೆ ರಜೆ
ಒಡಿಶಾದಲ್ಲಿ ಬಿಸಿ ಗಾಳಿಯ ತೀವ್ರತೆ ಹೆಚ್ಚಿದ್ದು, ಈ ಹಿನ್ನೆಲೆಯಲ್ಲಿ ಸಿಎಂ ನವೀನ್ ಪಟ್ನಾಯಕ್ ನೇತೃತ್ವದ ಸರಕಾರವು ರಾಜ್ಯಾದ್ಯಂತ ಎಲ್ಲ ಶಾಲೆಗಳು ಹಾಗೂ ಅಂಗನವಾಡಿಗಳಿಗೆ ರಜೆ ಘೋಷಿಸಿದ್ದಾರೆ. ಎ.12ರಿಂದ 16ರವರೆಗೆ 10ನೇ ತರಗತಿಯವರೆಗಿನ ಎಲ್ಲ ಸರಕಾರಿ ಮತ್ತು ಖಾಸಗಿ ಶಾಲೆಯ ಮಕ್ಕಳು ಶಾಲೆಗಳಿಗೆ ಬರದಂತೆ ಸೂಚಿಸಲಾಗಿದೆ. ಜತೆಗೆ, ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಕ್ರಮ ಕೈಗೊಳ್ಳು ವಂತೆಯೂ ಅಧಿಕಾರಿಗಳಿಗೆ ಸಿಎಂ ನಿರ್ದೇಶಿಸಿದ್ದಾರೆ. ಒಂದು ಲಕ್ಷ ಎಕ್ರೆ ಮಹಾ ಬೆಳೆಹಾನಿ
ಬಿಸಿಲಿನ ನಡುವೆಯೇ ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ಒಂದು ಲಕ್ಷ ಎಕರೆ ಬೆಳೆಹಾನಿಯಾಗಿದೆ ಎಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಅಜಿತ್ ಪವಾರ್ ಹೇಳಿದ್ದಾರೆ. ಬೆಳೆ ಹಾನಿಯಾದ ರೈತರಿಗೆ ರಾಜ್ಯ ಸರಕಾರ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿರುವ ಅವರು, ಈರುಳ್ಳಿ, ಪಪ್ಪಾಯ, ದ್ರಾಕ್ಷಿ ಸಹಿತ ವಿವಿಧ ಬೆಳೆಗಳು ನಾಶವಾಗಿದೆ ಎಂದು ಮಾಹಿತಿ ನೀಡಿದ್ದಾರೆ.