Advertisement

ಹಳ್ಳಿಗಳಲ್ಲಿದೆ ಹೃದಯ ಶ್ರೀಮಂತಿಕೆ

04:17 PM Oct 08, 2018 | Team Udayavani |

ಬಳ್ಳಾರಿ: ಗ್ರಾಮೀಣ ಪ್ರದೇಶಗಳಲ್ಲಿ ಹೃದಯ ಶ್ರೀಮಂತಿಕೆ ಇರುತ್ತದೆ ಎಂದು ನಗರದ ಕೌಲ್‌ಬಜಾರ್‌ ಠಾಣೆ ಪಿಎಸ್‌ಐ ವಸಂತಕುಮಾರ್‌ ಹೇಳಿದರು.

Advertisement

ತಾಲೂಕಿನ ಸಿರಿವಾರ ಗ್ರಾಮದ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಶಿವಕುಮಾರ ಸ್ವಾಮಿ ಯುವಕ ಸಂಘ, ಬಸವೇಶ್ವರ ಯುವಕ ಸಂಘ, ಗುರು ಪುಟ್ಟರಾಜ ಯುವಕ ಸಂಘದ ಸಹಯೋಗದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ಸಾಧಕರಿಗೆ ಮತ್ತು ಸಮಾಜ ಸೇವಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಾನು ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಹಿಂದೆ ಎರಡು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿರುವೆ. ಅಂದಾಜು 48 ಗ್ರಾಮಗಳು ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಬರುತ್ತವೆ. ಈ ಉಭಯ ಗ್ರಾಮಗಳ ಜನರು ಪೊಲೀಸ್‌ ಠಾಣೆಗೆ ಬಂದರೆ, ತಮ್ಮ ಕಾರ್ಯದ ನಿಮಿತ್ತ ಯಾವತ್ತೂ ಒತ್ತಡ ಹೇರುವ ಮನೋಭಾವ ಹೊಂದಿರಲಿಲ್ಲ. ಅಂತಹ ಸೌಮ್ಯ ಸ್ವಭಾದ ಜನರು ಇಲ್ಲಿ ನೆಲೆಸಿದ್ದಾರೆ ಎಂದರು.

ಯುವಜನರು ಭಾನುವಾರ ಬಂತೆಂದರೆ ಮದ್ಯದ ಅಮಲಿನಲ್ಲಿ ತೇಲಾಡುವ ದೃಶ್ಯಗಳನ್ನು ನಾವು ನೋಡಿದ್ದೇವೆ. ಆದರೆ, ಈ ಗ್ರಾಮಗಳ ಯುವಕರು ಅತ್ಯುತ್ತಮ ಸೇವಕರಾಗಿ ಸಾಧಕರನ್ನು ಸನ್ಮಾನಿಸುವ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ ಎಂದರು. 

ಬಹುತೇಕ ಗ್ರಾಮಗಳಲ್ಲಿ ಹೃದಯ ವೈಶಾಲತೆ ಇರುತ್ತದೆ. ಇಲ್ಲಿಯ ಪ್ರೀತಿ, ಅಕ್ಕರೆಯ ಮಾತುಗಳು ಎಂತಹ ಶ್ರೀಮಂತಿಕೆಯನ್ನೂ ಮಂತ್ರ ಮುಗ್ಧವನ್ನಾಗಿಸುತ್ತದೆ. ಅಂತಹ ವಾತಾವರಣ ಈ ಗ್ರಾಮಗಳಲ್ಲಿ ನೆಲೆಸಿದೆ ಎಂದರು.

Advertisement

ಶ್ರೀಲಂಕಾ ದೇಶದಲ್ಲಿ ನಡೆದ ಅಂಗವಿಕಲರ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಅತ್ಯುತ್ತಮ ಸಾಧನೆಗೈದ ಗ್ರಾಮದ ಅಂಗವಿಕಲ ಮಡಿವಾಳರ ತಿಪ್ಪೇಸ್ವಾಮಿ ಅವರಿಗೆ 5,000 ನಗದು ನೀಡಿ
ಸನ್ಮಾನಿಸಲಾಯಿತು.

ಸಮಾಜ ಸೇವಕರಾದ ಪ್ರೊ| ಕೋಟೆ ನಾಗನಗೌಡ, ಎಸ್‌ಡಿಎಂ ಶಿವಕುಮಾರ ಸ್ವಾಮಿ, ನಾಟಕಕಾರ ಜಿ.ಎನ್‌. ಅರಳಿ, ಹಾಸ್ಯ ಕಲಾವಿದ, ಶಿಕ್ಷಕ ಎ. ಯರಿಸ್ವಾಮಿ, ಎಚ್‌. ಎಂ. ದಯಾನಂದ ಸ್ವಾಮಿ, ಬಸವೇಶ್ವರ ದೇಗುಲ ಜೀರ್ಣೋದ್ಧಾರಕರಾದ ಅಂಗಡಿ ನೀಲಮ್ಮ, ಭಜನಾ ಮತ್ತು ಬಯಲಾಟ ಕಲಾವಿದ ಕೋಟೆ ಪಂಪನಗೌಡ, ಸಿದ್ದಬಸಪ್ಪ
ಜಗಣ್ಣನವರ್‌, ಎ.ಕೆ. ಮರೆಪ್ಪ, ಪಲ್ಲೇದ ಸಹನಾ, ಶೀಧರಗಡ್ಡೆ ಸಿದ್ದಬಸಪ್ಪ, ಕಪ್ಪಗಲ್ಲು ಚಂದ್ರಶೇಖರ ಆಚಾರಿ, ನರೇಶ ಸೋನಿ ಇತರರನ್ನು ಸನ್ಮಾನಿಸಲಾಯಿತು.

ಗ್ರಾಮದ ಚನ್ನಮಲ್ಲಯ್ಯ ತಾತ, ಪಂಪಯ್ಯ ತಾತ, ಬಿಜೆಪಿ ರೈತಮೋರ್ಚಾ ತಾಲೂಕು ಘಟಕದ ಅಧ್ಯಕ್ಷ ಮೂಲಿಮನೆ
ಶಿವರುದ್ರಪ್ಪ, ಮುಖಂಡರಾದ ಮೆಹತಾಬ್‌, ಬಸವರಾಜ, ಡಿ.ಷಣ್ಮುಖಪ್ಪ, ಕೋಟೆ ಬದ್ರಿನಾಥ, ಕೆ. ಮಲ್ಲನಗೌಡ, ಬಳ್ಳಾರಿ
ಗ್ರಾಮೀಣ ಠಾಣೆ ಎಎಸ್‌ಐ ಮಾರೆಣ್ಣ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next