Advertisement
ಬುಡಕಟ್ಟು ಜಿಲ್ಲೆಯಲ್ಲಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ 89,151 ಮಕ್ಕಳಿದ್ದು, 2020-21ರಲ್ಲಿ 6,718 ಮಕ್ಕಳು ಸಾವನ್ನಪ್ಪಿರುವುದನ್ನು ಲೆಕ್ಕಪರಿ ಶೋಧನೆಯಿಂದ ಪತ್ತೆ ಹಚ್ಚಲಾಗಿದೆ. ಅದೇ ಅವಧಿ ಯಲ್ಲಿ 1,715 ಶಿಶುಗಳು ಸಾವನ್ನಪ್ಪಿವೆ.
Related Articles
Advertisement
ಸಭೆಯಲ್ಲಿ ಯಾವುದೇ ದೃಢ ನಿರ್ಧಾರ ಇಲ್ಲ ಮಕ್ಕಳ ಮರಣ, ಅಪೌಷ್ಟಿಕತೆ, ಜನಿಸುವಾಗ ಕಡಿಮೆ ತೂಕ ಬಗ್ಗೆ ಸಭೆಯಲ್ಲಿ ಮಹತ್ವದ ಚರ್ಚೆಯಾಗಬೇಕಿತ್ತು. ಸಮಸ್ಯೆಗಳು ಮತ್ತು ಕನಿಷ್ಠ ಒಂದು ವಾರದ ಮೊದಲು ಇಲಾಖೆಯು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆಯುವ ನಿರೀಕ್ಷೆಯಿದ್ದರೂ ಕೊನೆಯ ಕ್ಷಣದಲ್ಲಿ ಸಮಸ್ಯೆಗಳ ವಿವರಗಳ ಬಗ್ಗೆ ಮಾತ್ರ ತಿಳಿಸಲಾಯಿತು ಎಂದು ಅಭಯ್ ಹೇಳಿದ್ದಾರೆ. ಟಾಟಾ ಸಮಾಜದ ವರದಿಯನ್ನು ಕೊನೆಯ ಗಳಿಗೆಯಲ್ಲಿ ನೀಡಲಾಯಿತು. ಅಲ್ಲದೆ 16 ಬುಡಕಟ್ಟು ಜಿಲ್ಲೆಗಳಲ್ಲಿ ಅಪೌಷ್ಟಿಕತೆ ಮತ್ತು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯನ್ನು ನಿಖರವಾಗಿ ನೀಡಲಾಗಿಲ್ಲ. ಕಳೆದ ಒಂದು ವರ್ಷದಿಂದ ಅಂಗನವಾಡಿಗಳನ್ನು ಮುಚ್ಚಿರುವಾಗ ಮಳೆಗಾಲದಲ್ಲಿ 6 ವರ್ಷಗಳೊಳಗಿನ ವಯಸ್ಸಿನ ಮಕ್ಕಳ ಆರೋಗ್ಯ ಸಮಸ್ಯೆಗಳನ್ನು ಹೇಗೆ ಎದುರಿಸುವುದು, ಮಳೆಯಿಂದಾಗಿ ಗಡಿcರೋಲಿಯ ಅನೇಕ ಹಳ್ಳಿಗಳು ಸಂಪರ್ಕ ಕಳೆದುಕೊಂಡಿರುವ ಬಗ್ಗೆ ಯಾವುದೇ ಚರ್ಚೆ ಇಲ್ಲ, ಅದರ ಬಗ್ಗೆ ಏನು ಮಾಡಬೇಕೆಂಬ ಕಾರ್ಯತಂತ್ರ ಕೈಗೊಂಡಿಲ್ಲ ಎಂದು ಅವರು ಹೇಳಿದ್ದಾರೆ
ಬುಡಕಟ್ಟು ಮಕ್ಕಳಿಗೆ ಹಾಲಿನ ಪುಡಿ ತಾಲೂಕು ಮಟ್ಟವನ್ನು ತಲುಪುತ್ತದೆ. ಆದರೆ ಅದನ್ನು ಪಡೆಯುವಲ್ಲಿ ಹಲವು ಸಮಸ್ಯೆಗಳಿವೆ. ಇದಕ್ಕಾಗಿ ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿಯನ್ನು ನೇಮಿಸಲು ನಿರ್ಧರಿಸಲಾಗಿದ್ದರೂ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಾಮಾಜಿಕ ಸಂಸ್ಥೆಗಳ ಸಮನ್ವಯ ಸಮಿತಿಯನ್ನು ರಚಿಸಿದರೆ ಕೆಲವು ಸಮಸ್ಯೆಗಳನ್ನು ಬಗೆಹರಿಸಬಹುದು ಎಂದು ಅಭಯ್ ಹೇಳಿದ್ದಾರೆ.
ಎಲ್ಲಕ್ಕಿಂತ ಮುಖ್ಯವಾಗಿ ಬುಡಕಟ್ಟು ಇಲಾಖೆ, ಆರೋಗ್ಯ ಇಲಾಖೆ ಮತ್ತು ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ನಡುವಿನ ಸಮನ್ವಯದ ಕೊರತೆಯು ಮಕ್ಕಳ ಆರೋಗ್ಯ ಮತ್ತು ಗರ್ಭಿಣಿಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
ಮನೆಮನೆಗೆ ಹೋಗಿ ಮಕ್ಕಳ ತಪಾಸಣೆ ಸಮಸ್ಯೆ :
ರಾಜ್ಯದ 16 ಬುಡಕಟ್ಟು ಜಿಲ್ಲೆಗಳಲ್ಲಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ 89,151 ಮಕ್ಕಳಿದ್ದು, ಆರೋಗ್ಯ ಇಲಾಖೆಯಿಂದ ಸರಿಯಾಗಿ ಪರೀಕ್ಷೆಗೆ ಒಳಗಾಗುತ್ತಿಲ್ಲ ಎಂದು ಸಮಗ್ರ ಮಕ್ಕಳ ಅಭಿವೃದ್ಧಿ ಆಯುಕ್ತರು ಪತ್ರ ಬರೆದಿದ್ದಾರೆ. ಜುಲೈಯಿಂದ ಸೆಪ್ಟಂಬರ್‌ವರೆಗೆ ಈ ಮಕ್ಕಳ ಆಹಾರಕ್ಕಾಗಿ 14.44 ಕೋಟಿ ರೂ.ಗಳಷ್ಟು ವೆಚ್ಚ ಆಗಲಿದ್ದು, ಸಮಗ್ರ ಮಕ್ಕಳ ಅಭಿವೃದ್ಧಿ ಇಲಾಖೆ ಇತ್ತೀಚೆಗೆ ಇದಕ್ಕೆ ಅನುಮತಿ ಕೋರಿದೆ. ಕೊರೊನಾದಿಂದ ಹೆಚ್ಚಿನ ಕಡೆಗಳಲ್ಲಿ ಹೆತ್ತವರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಸಿದ್ಧರಿಲ್ಲ. ಆದರೆ ಅಂಗನವಾಡಿ ಕಾರ್ಯಕರ್ತೆಯರು ದಿನಕ್ಕೆ ಎರಡು ಗಂಟೆಯಾದರೂ ಅಂಗನವಾಡಿಗಳ ಬಾಗಿಲು ತೆರೆಯಬೇಕೆಂಬುದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಭಾಗ ಹೇಳಿದೆ. ಮಳೆಗಾಲ ಮತ್ತು ಕೊರೊನಾ ಅವಧಿಯಲ್ಲಿ ಮನೆಮನೆಗೆ ಹೋಗಿ ಕೋವಿಡ್ ತಪಾಸಣೆ ನಡೆಸುವುದು ಈ ಕಾರ್ಯಕರ್ತೆಯರಿಗೆ ದೊಡ್ಡ ಸಮಸ್ಯೆಯಾಗಿದೆ ಎಂದು ರಾಜ್ಯ ಅಂಗನವಾಡಿ ಕಾರ್ಮಿಕರ ಸಮಿತಿ ಅಧ್ಯಕ್ಷ ಎಂ. ಎ. ಪಾಟೀಲ್ ಹೇಳಿದ್ದಾರೆ.