Advertisement

ಮೈಕೆಲ್‌ಗೆ ಆರೋಗ್ಯ ಸಮಸ್ಯೆ

06:00 AM Dec 08, 2018 | Team Udayavani |

ನವದೆಹಲಿ: ಅಗಸ್ಟಾ ವೆಸ್ಟ್‌ಲ್ಯಾಂಡ್‌ ಕಾಪ್ಟರ್‌ ಹಗರಣದಲ್ಲಿನ ದಲ್ಲಾಳಿ ಕ್ರಿಶ್ಚಿಯನ್‌ ಮೈಕೆಲ್‌ ಅಧಿಕ ರಕ್ತದೊತ್ತಡವೇ ಈಗ ಸಿಬಿಐಗೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಆತನ ವಿಚಾರಣೆ ನಡೆಸುವಾಗ ರಕ್ತದೊತ್ತಡ ಹಾಗೂ ಆರೋಗ್ಯ ತಪಾಸಣೆಯನ್ನು ಎಚ್ಚರಿಕೆಯಿಂದ ನಡೆಸಲಾಗುತ್ತಿದೆ. ವಿಚಾರಣೆ ನಡೆಸುವ ಅವಧಿಯಲ್ಲಿ ಮೈಕೆಲ್‌ ಆರೋಗ್ಯವನ್ನೂ ಕಾಪಾಡುವುದು ಸಿಬಿಐಗೆ ಮಹತ್ವದ ಕೆಲಸವಾಗಿದೆ. ರಕ್ತದೊತ್ತಡವನ್ನು ಹೊರತುಪಡಿಸಿ ಮೈಕೆಲ್‌ಗೆ ಇತರ ಯಾವುದೇ ಗಂಭೀರ ಅನಾರೋಗ್ಯವಿಲ್ಲ. ಮೂಲಗಳ ಪ್ರಕಾರ ಇನ್ನಷ್ಟು ದಿನ ಸಿಬಿಐ ಕಸ್ಟಡಿಗೆ ನೀಡುವಂತೆ ಕೋರ್ಟ್‌ನಲ್ಲಿ ಮನವಿ ಸಲ್ಲಿಸುವ ಸಾಧ್ಯತೆಯಿದೆ. ಸದ್ಯ ಡಿ.10 ರವರೆಗೆ ಸಿಬಿಐ ಕಸ್ಟಡಿಗೆ ಈತನನ್ನು ವಹಿಸಲಾಗಿದೆ. ಡಿ.4 ರಂದು ಈತನನ್ನು ಯುಎಇಯಿಂದ ಭಾರತಕ್ಕೆ ಹಸ್ತಾಂತರ ಮಾಡಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next