Advertisement
ರಾಜ್ಯದ 31 ಕೋವಿಡ್ 19 ಚಿಕಿತ್ಸಾ ಆಸ್ಪತ್ರೆಗಳ ಪೈಕಿ ಪ್ರತಿ ಜಿಲ್ಲೆಯಲ್ಲಿಯ ಒಂದು ಜಿಲ್ಲಾಸ್ಪತ್ರೆ ಅಥವಾ ವೈದ್ಯಕೀಯ ಕಾಲೇಜು ಇದೆ. ಬೆಂಗಳೂರು ಹಾಗೂ ಉಡುಪಿಯಲ್ಲಿ ಕೆಲವು ಖಾಸಗಿ ಆಸ್ಪತ್ರೆಗಳನ್ನು ಕೋವಿಡ್ 19 ಚಿಕಿತ್ಸಾ ಆಸ್ಪತ್ರೆಗಳಾಗಿ ಮೀಸಡಲಾಗಿದೆ. ಈ ಎಲ್ಲ 31 ಆಸ್ಪತ್ರೆಗಳಲ್ಲಿ ಕೋವಿಡ್ 19 ಚಿಕಿತ್ಸೆಗೆ ಬೇಕಾದ ಸಿಬಂದಿ, ಉಪಕರಣ, ಅಗತ್ಯ ಪರಿಕರಗಳನ್ನು ಸಿದ್ಧಪಡಿಸಿದೆ. ಇದಲ್ಲದೇ ಬೆಂಗಳೂರಿನಲ್ಲಿ ಕೋವಿಡ್ 19 ಚಿಕಿತ್ಸೆಗೆ ಮೀಸಲಿಟ್ಟ ಎರಡು ಆಸ್ಪತ್ರೆ ಹೊರತುಪಡಿಸಿ ಇತರ 16 ಸರಕಾರಿ ಆಸ್ಪತ್ರೆಗಳು ಹಾಗೂ 28 ಖಾಸಗಿ ಆಸ್ಪತ್ರೆಗಳನ್ನು ಕೋವಿಡ್ 19 ಚಿಕಿತ್ಸೆಗೆ ಗುರುತಿಸಲಾಗಿದೆ. ಅಗತ್ಯ ಬಿದ್ದರೆ ಮುಂದಿನ ದಿನಗಳಲ್ಲಿ ಈ ಆಸ್ಪತ್ರೆಗಳನ್ನೂ ಕೋವಿಡ್ 19 ಚಿಕಿತ್ಸೆಗೆ ಮೀಲಿಡಲಿದೆ.
ಈ ಹಿಂದೆಯೇ ಕೋವಿಡ್ 19 ಸೋಂಕು ಹೆಚ್ಚಳ ಅಂದಾಜಿಸಿದ್ದ ಆರೋಗ್ಯ ಇಲಾಖೆ ಜನಸಾಮಾನ್ಯರಿಗೆ ತುರ್ತು ಅಗತ್ಯವಿದ್ದರೆ ಮಾತ್ರ ಆಸ್ಪತ್ರೆಗೆ ಬರಬೇಕು. ಸಾಮಾನ್ಯ ಚಿಕಿತ್ಸೆ, ಆರೋಗ್ಯ ಪರೀಕ್ಷೆಗಳಿಗೆ ಸ್ಥಳೀಯ ಕ್ಲಿನಿಕ್ ತೆರಳಿ ಅಥವಾ ಲಾಕ್‌ಡೌನ್ ಬಳಿಕ ಬನ್ನಿ ಎಂದು ಮನವಿ ಮಾಡಿತ್ತು. ಸದ್ಯ ರಾಜ್ಯ ತಾ| ಆಸ್ಪತ್ರೆಗಳು, ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆಯೂ ಕಡಿಮೆ ಇದ್ದು, ಅವುಗಳನ್ನು ಅಗತ್ಯ ಬಿದ್ದರೆ ಕೋವಿಡ್ 19 ಚಿಕಿತ್ಸಾ ಕೆಂದ್ರಗಳಾಗಿ ರೂಪುಗೊಳಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಸ್ಪತ್ರೆಗಳಿಗೆ ಸಿಬಂದಿ ನೇಮಕ
ರಾಜ್ಯದ ಕೆಲವು ಜಿಲ್ಲಾಸ್ಪತ್ರೆಗಳಲ್ಲಿ ಸಿಬಂದಿ ಕೊರತೆ ಇದ್ದರೆ ಪ್ರತಿ ಆಸ್ಪತ್ರೆಗೂ ಅಗತ್ಯ ಪ್ರಮಾಣದಷ್ಟು ವೈದ್ಯಕೀಯ ಸಹಾಯಕ ಸಿಬಂದಿ ಯನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವಂತೆ ಸರಕಾರ ಸೂಚನೆ ನೀಡಿದೆ. ಇಷ್ಟು ಮಾತ್ರ ವಲ್ಲದೇ ಸ್ವಯಂಪ್ರೇರಿತರಾಗಿ ಖಾಸಗಿ ವೈದ್ಯರನ್ನು ಸೇವೆಗೆ ನೋಂದಾಯಿಸಿಕೊಳ್ಳಲಾಗುತ್ತಿದೆ.
Related Articles
ರೋಗಿಗಳ ಸ್ಥಳಾಂತರ
ರಾಜ್ಯದ ಬಹುತೇಕ ಜಿಲ್ಲಾ ಆಸ್ಪತ್ರೆಗಳಲ್ಲಿ ಒಳರೋಗಿಗಳಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಇತರ ರೋಗಿಗಳನ್ನು ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ’ ಯೋಜನೆಯಡಿ ನೋಂದಣಿಯಾಗಿರುವ ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಸೂಚನೆ ನೀಡಿತ್ತು. ಅಲ್ಲದೇ ರೋಗಿಗಳು ಎಬಿ-ಎಆರ್‌ಕೆ ಅಡಿ ನೊಂದಾ ಯಿತ ಖಾಸಗಿ ಆಸ್ಪತ್ರೆಗಳು ಹಾಗೂ ಪರ್ಯಾಯವಾಗಿ ಆಯ್ಕೆ ಮಾಡಿ ರುವ ಖಾಸಗಿ ಆಸ್ಪತ್ರೆಗಳಲ್ಲಿ ರೆಫರಲ್ ವ್ಯವಸ್ಥೆ ಇಲ್ಲದೆ ನೇರವಾಗಿ ಹೋಗಿ ಚಿಕಿತ್ಸೆ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ತುರ್ತು ಪರಿಸ್ಥಿತಿ ಕಳೆಯುವವರೆಗೆ ಹಾಗೂ ಮುಂದಿನ ಆದೇಶದವರೆಗೆ ಇವನ್ನು ವಿಶೇಷ ಪ್ರಕರಣಗಳಾಗಿ ಪರಿಗಣಿಸಿ ಎಬಿ-ಎಆರ್‌ಕೆ ಅಡಿ ಹಣ ಬಿಡುಗಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
Advertisement
-ಕೋವಿಡ್ 19 ಸೋಂಕು ಜಾಗೃತಿಗೆ ಹಾಗೂ ಪರಿಣಾಮಕಾರಿ ಸಂವಹನಕ್ಕೆ ಸಹಕಾರಿಯಾ ಗಲು “ಆರೋಗ್ಯ ಸೇತು’ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ. ಸಾರ್ವ ಜನಿಕರು ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪ್ ಸ್ಟೋರ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳ ಬಹುದು.– ಬೆಂಗಳೂರಿನಲ್ಲಿ ಮತ್ತೆ ಮೂರು ಖಾಸಗಿ ಪ್ರಯೋಗಾಲಯಗಳಿಗೆ ಕೋವಿಡ್ 19 ಸೋಂಕು ಪರೀಕ್ಷೆಗೆ ಅನುಮತಿ ನೀಡಲಾಗಿದೆ. ಈ ಮೂಲಕ 5 ಖಾಸಗಿ ಪ್ರಯೋಗಾಲಯ, 10 ಸರಕಾರಿ ಪ್ರಯೋಗಾಲಯ ಕಾರ್ಯ ನಿರ್ವಹಿಸುತ್ತಿವೆ. ಹೊಸದಾಗಿ ಅನುಮತಿ ಪಡೆದ ಲ್ಯಾಬ್‌ಗಳು ಬನ್ನೇರುಘಟ್ಟ ರಸ್ತೆಯ ಅಪೋಲೊ ಆಸ್ಪತ್ರೆ, ವರ್ತೂರಿನ ಸರಕಾರಿ ಆಸ್ಪತ್ರೆ, ವೈಟ್‌ಫೀಲ್ಡ್‌ನ ವೈದೇಹಿ ವೈದ್ಯಕೀಯ ಕಾಲೇಜಿನ ಪ್ರಯೋಗಾಲಯಗಳು. ಸಾವಿರಕ್ಕೂ ಹೆಚ್ಚು ವೆಂಟಿಲೇಟರ್ ಸಹಿತ ಚಿಕಿತ್ಸೆಗೆ ಅಗತ್ಯ ವೈದ್ಯಕೀಯ ಉಪಕರಣಗಳ ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ 31 ಆಸ್ಪತ್ರೆಗಳನ್ನು ಕೋವಿಡ್ 19 ಚಿಕಿತ್ಸೆಗೆ ಮೀಸಲಿಡಲಾಗಿದೆ. ಮುಂದೆ ಅಗತ್ಯವಿದ್ದರೆ ಖಾಸಗಿ ಆಸ್ಪತ್ರೆ ಹಾಗೂ ಇತರ ಸರಕಾರಿ ಆಸ್ಪತ್ರೆಗಳನ್ನು ಕೋವಿಡ್ 19 ಸೋಂಕು ಚಿಕಿತ್ಸೆಗೆ ಮೀಸಲಿಡಲಾಗುವುದು.
– ಡಾ| ಓಂಪ್ರಕಾಶ್ ಪಾಟೀಲ್
ನಿರ್ದೇಶಕರು, ಆರೋಗ್ಯ ಇಲಾಖೆ