Advertisement
ಕರುಳಿನಲ್ಲಿ ಹುಣ್ಣು ಆಗಿದ್ದರೆ ಆಯುರ್ವೇದ ಸೂಚಿಸುವ ಸಿದ್ಧ ಔಷಧಿ ಎಂದರೆ ಬೆಳ್ಳುಳ್ಳಿಯ ಕೆಲವು ಎಸಳುಗಳನ್ನು ಹಸಿಯಾಗಿ ತಿನ್ನುವುದು. ವರ್ಷಾಂತರಗಳಿಂದ ಬೆಳ್ಳುಳ್ಳಿ ನಮ್ಮ ಅಡುಗೆಗಳಲ್ಲಿ ಪ್ರಮುಖ ಸಾಂಬಾರ ಪದಾರ್ಥವಾಗಿ ಉಪಯೋಗಿಸಲ್ಪಡುತ್ತಿದೆ. ಅಜ್ಜಿ ತಲೆ ಮೇಲೆ ಗುದ್ದಿದರೆ ನೂರು ಮೊಮ್ಮಕ್ಕಳು ಎಂಬ ಒಗ್ಗಟ್ಟಿಗೆ ಉತ್ತರ ನೀಡುವ ಈ ಪುಟ್ಟ ಬಿಳಿಯ ಎಸಳಿನಲ್ಲಿ ಆರೋಗ್ಯಕರ ಅಂಶಗಳ ಭಂಡಾರವೇ ಇದೆ.
ನಮ್ಮ ಆಹಾರದ ಮೂಲಕ ಧಾಳಿಯಿಡುವ ವೈರಸ್ಸುಗಳು, ಬೂಸು, ಯೀಸ್ಟ್ ಮತ್ತು ಕ್ರಿಮಿಗಳ ಮೂಲಕ ಪ್ರಾರಂಭವಾಗುವ ಸೋಂಕು ಆಗದಿರುವಂತೆ ನೋಡಿಕೊಳ್ಳುತ್ತದೆ. ಚರ್ಮದ ಸೋಂಕಿನಿಂದ ರಕ್ಷಿಸುತ್ತದೆ
ಬೆಳ್ಳುಳ್ಳಿಯ ಜೀವಿರೋಧಿ ಗುಣಗಳ ಕಾರಣ ಚರ್ಮವನ್ನು ಬಾಧಿಸುವ ಹಲವು ಬ್ಯಾಕ್ಟೀರಿಯಾಗಳಿಂದ ರಕ್ಷಣೆ ನೀಡುತ್ತದೆ.
Related Articles
Advertisement
ರಕ್ತ ಶೀಘ್ರ ಹೆಪ್ಪುಗಟ್ಟದಂತೆ ರಕ್ಷಿಸುತ್ತದೆವಾಸ್ತವವಾಗಿ ಯಾವುದೇ ಗಾಯವಾದರೂ ರಕ್ತ ಹೆಪ್ಪುಗಟ್ಟಬೇಕು, ಆಗಲೇ ಸ್ರಾವ ನಿಲ್ಲುವುದು. ಇದು ದೇಹದ ಹೊರಭಾಗದ ಗಾಯಗಳಿಗೆ ಅನ್ವಯಿಸುತ್ತದೆ. ಒಂದು ವೇಳೆ ಯಾವುದೋ ಕಾರಣದಿಂದ ದೇಹದೊಳಗಣ ಭಾಗಗಳಲ್ಲಿ ಗಾಯವಾದರೆ, ಆಗ ರಕ್ತ ಕೂಡಲೇ ಹೆಪ್ಪುಗಟ್ಟಿಬಿಟ್ಟರೆ, ಒಳಗಿನ ರಕ್ತವಷ್ಟೂ ಹೆಪ್ಪುಗೊಳ್ಳುತ್ತಾ ಹೋಗಿ ಹೃದಯಾಘಾತಕ್ಕೆ ಕಾರಣವಾಗಬಲ್ಲದು. ಇನ್ನೊಂದೆಡೆ ರಕ್ತ ಹೆಪ್ಪುಗಟ್ಟಲು ದೀರ್ಘ ಸಮಯ ತೆಗೆದುಕೊಂಡರೆ ಶಸ್ತ್ರಚಿಕಿತ್ಸೆಯ ಬಳಿಕ ಗಾಯಗಳು ಮಾಗಲು ತುಂಬಾ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು. ಆದುದರಿಂದ ನಮ್ಮ ದೇಹಕ್ಕೆ ಅತ್ಯಂತ ಶೀಘ್ರವೂ ಅಲ್ಲದ, ಅತ್ಯಂತ ನಿಧಾನವೂ ಅಲ್ಲದ ಹೆಪ್ಪುಗಟ್ಟುವ ಸಮಯದ ಅಗತ್ಯವಿದೆ. ಬೆಳ್ಳುಳ್ಳಿ ಈ ಸಮಯವನ್ನು ಪಾಲಿಸಲು ದೇಹಕ್ಕೆ ನೆರವಾಗುತ್ತದೆ. ಪ್ರತಿದಿನ ಖಾಲಿಹೊಟ್ಟೆಯಲ್ಲಿ ಒಂದೇ ಒಂದು ಎಸಳು ಹಸಿ ಬೆಳ್ಳುಳ್ಳಿಯನ್ನು ಜಜ್ಜಿ ಸೇವಿಸುವುದು ಉತ್ತಮ. ನಿಮ್ಮ ಹೃದಯವನ್ನು ರಕ್ಷಿಸುತ್ತದೆ
ಹೃದಯದಿಂದ ರಕ್ತ ಪೂರೈಕೆಯಾಗಲು ಹೃದಯ ರಕ್ತನಾಳಗಳ ಮೂಲಕ ಒಂದು ಒತ್ತಡದಲ್ಲಿ ರಕ್ತವನ್ನು ನೂಕುತ್ತದೆ. ಈ ನೂಕುವಿಕೆ ನರಗಳ ಒಳಭಾಗದಲ್ಲಿ ಸ್ವಲ್ಪ ಒತ್ತಡವನ್ನು ನೀಡುತ್ತದೆ. ಈ ಒತ್ತಡದ ಕಾರಣ ನರಗಳು ಪ್ರತಿ ಬಡಿತದಲ್ಲಿಯೂ ಹಿಗ್ಗುತ್ತದೆ. (ಈ ಹಿಗ್ಗುವಿಕೆಯನ್ನೇ ನಾಡಿ ಎನ್ನುತ್ತೇವೆ. ಇದು ಸ್ಪಷ್ಟವಾಗಿ ಅನುಭವಕ್ಕೆ ಬರುವಲ್ಲಿ ವೈದ್ಯರು ಹಿಡಿದು ಹೃದಯದ ಬಡಿತವನ್ನು ಪರೀಕ್ಷಿಸುತ್ತಾರೆ). ವಯಸ್ಸಿನೊಂದಿಗೇ ನಮ್ಮ ನರಗಳು ಈ ಸೆಳೆತವನ್ನು ಕಳೆದುಕೊಳ್ಳುತ್ತಾ ಬರುತ್ತವೆ. ಹೆಚ್ಚು ಬಾಧಿತ ನರಗಳು ಒಳಗಿನಿಂದ ಮುಚ್ಚಿಕೊಂಡು ಹಲವು ತೊಂದರೆಗಳಿಗೆ ಆಹ್ವಾನ ನೀಡುತ್ತದೆ. ಉಲ್ಬಣಗೊಂಡ ಸ್ಥಿತಿ ಹೃದಯಾಘಾತಕ್ಕೂ ಕಾರಣವಾಗಬಲ್ಲುದು. ಬೆಳ್ಳುಳ್ಳಿ ಈ ಸ್ಥಿತಿಯಿಂದ ನಮ್ಮನ್ನು ರಕ್ಷಿಸುತ್ತದೆ. ಜೊತೆಗೇ ನರಗಳ ಒಳಗೆ ರಕ್ತ ಹೆಪ್ಪುಗಟ್ಟದಂತೆಯೂ ರಕ್ಷಣೆ ನೀಡುತ್ತದೆ. ಹಲ್ಲುನೋವಿನಿಂದ ಮುಕ್ತಿ ನೀಡುತ್ತದೆ
ಒಸಡುಗಳ ಸಂದುಗಳಲ್ಲಿ ಉಳಿದಿದ್ದ ಆಹಾರ ಕೊಳೆತು ಬ್ಯಾಕ್ಟೀರಿಯಾಗಳು ಒಸಡಿನ ಮೇಲೆ ಧಾಳಿ ಮಾಡಿದಾಗ ಹಲ್ಲುನೋವು ಉಂಟಾಗುತ್ತದೆ. ಬೆಳ್ಳುಳ್ಳಿಯ ಜೀವಿರೋಧಿ ಗುಣದ ಕಾರಣ ಈ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಉಪಯೋಗಿಸುವ ವಿಧಾನ ಬೆಳ್ಳುಳ್ಳಿಯ ಕೆಲವು ಎಸಳುಗಳನ್ನು ನಯವಾಗಿ ಅರೆದು ಹಲ್ಲುಜ್ಜುವ ಪೇಸ್ಟ್ ನಂತೆ ನೇರವಾಗಿ ಬ್ರಶ್ ಮೇಲೆ ಹಚ್ಚಿ ಹಲ್ಲುಜ್ಜಿರಿ. ಒಂದು ವೇಳೆ ಒಸಡುಗಳು ಹೆಚ್ಚು ಬಾಧಿತವಾಗಿದ್ದರೆ ಸ್ವಲ್ಪ ಹೆಚ್ಚಿನ ಉರಿ ತರಿಸಬಹುದು. ಈ ಉರಿ ತಾತ್ಕಾಲಿಕವಾಗಿದ್ದು ಸ್ವಲ್ಪ ಸಮಯದ ಬಳಿಕ ಕಡಿಮೆಯಾಗುತ್ತದೆ. ಆದರೆ ಹಲ್ಲುನೋವಿನಿಂದ ಶೀಘ್ರವೇ ಉಪಶಮನ ನೀಡುತ್ತದೆ. – ಮಹೇಶ್ ಹೆಬ್ರಿ