ಬಸ್ರೂರು: ಹಟ್ಟಿಕುದ್ರು ಜನರ ಸುಮಾರು ಎಪ್ಪತ್ತಕ್ಕೂ ಹೆಚ್ಚು ವರ್ಷಗಳ ಬೇಡಿಕೆಯಾದ ಸೇತುವೆ ಕಾಮಗಾರಿಗೆ ಚಾಲನೆ ದೊರೆತು ಒಂದು ವರ್ಷ ಕಳೆ ದಿದೆ. ವಾರಾಹಿ ನೀರಾವರಿ ನಿಗಮದಿಂದ ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪ್‌ಚಂದ್ರ ಶೆಟ್ಟಿ ಅವರ ಶಿಫಾರಸಿನ ಮೇರೆಗೆ 14.59 ಕೋ. ರೂ.ಯ ಈ ಕಾಮಗಾರಿಗೆ ಅನು ದಾನ ಮಂಜೂರಾಗಿತ್ತು.
ಭರದ ಕಾಮಗಾರಿ
320 ಮೀ. ಉದ್ದದ ಈ ಸೇತುವೆಯ ಇಪ್ಪತ್ತು ಪಿಲ್ಲರ್‌ಗಳ ಕಾಮಗಾರಿ ಈಗ ಮುಗಿದಿದೆ. ಸೇತುವೆಯ ಎರಡೂ ತುದಿಗಳಲ್ಲಿ ಅಪಾರ್ಟ್‌ಮೆಂಟ್‌ಗಳ ಕಾಮಗಾರಿಆಗಬೇಕಿದೆ. ಸೇತುವೆಯ ಮೇಲ್ಭಾಗದ ಏಳು ಸ್ಲ್ಯಾಬ್ ಗಳಲ್ಲಿ ಇನ್ನೂ ಎರಡು ಸ್ಲ್ಯಾಬ್ ಗಳಷ್ಟೇ ಆಗಬೇಕಿದೆ.
ಸೇತುವೆ ನಿರ್ಮಾಣ ಕಾಮಗಾರಿ ಆರಂಭಕ್ಕೂ ಮೊದಲು ಹಟ್ಟಿಕುದ್ರು ಜನರು ದೋಣಿಯ ಮೂಲಕ ಬಸ್ರೂರಿನ ಮಂಡಿಕೇರಿಗೆ ಆಗಮಿಸುತ್ತಿದ್ದರು. ಆದರೆ ಈಗ ಜನ ದೋಣಿಯಲ್ಲಿ ಪಯಣಿಸಬೇಕಿಲ್ಲ. ಸೇತುವೆಯ ಮೇಲ್ಭಾಗದ ಕಾಮಗಾರಿ ಈಗ ನಡೆಯುತ್ತಿರುವುದ ರಿಂದ ಸೇತುವೆಯ ಕೆಳಗಡೆ ಬದಿಯಲ್ಲಿ ಹಾಕ ಲಾದ ಮಣ್ಣಿನ ಮೇಲೆ ಜನ ನಡೆದು ಹೋಗುತ್ತಿದ್ದಾರೆ. ಸೈಕಲ್ ಮತ್ತಿತರ ದ್ವಿಚಕ್ರ ವಾಹನಗಳಿದ್ದಲ್ಲಿ ಬಸ್ರೂರು ಕಡೆಗೆ ಸಾಗಿ ವಾಹನವನ್ನು ಸೇತುವೆಯ ಮೇಲ್ಭಾಗಕ್ಕೆ ತಂದು ಪಯಣಿಸಬೇಕಾಗಿದೆ.
ಇದನ್ನೂ ಓದಿ:ಕೆರೆಯಲ್ಲಿ ಮುಳುಗಿ ಸಹೋದರಿಯರಿಬ್ಬರ ಸಾವು; ಅಕ್ಕನ ರಕ್ಷಣೆ
ಶೀಘ್ರ ಕಾಮಗಾರಿ ಪೂರ್ಣ
ಸೇತುವೆಯ ಎರಡೂ ತುದಿಗಳಲ್ಲಿ 2 ಅಪಾರ್ಟ್‌ಮೆಂಟ್‌ಗಳ ಕಾಮಗಾರಿ ನಡೆಯಬೇಕಾಗಿದೆ. ಎರಡು ಸ್ಲ್ಯಾಬ್ ಗಳ ಕಾಮಗಾರಿಯೂ ಇನ್ನಷ್ಟೇ ನಡೆಯಬೇಕಿದೆ. ಒಟ್ಟಿನಲ್ಲಿ ಡಿಸೆಂಬರ್-ಜನವರಿ ಅಂತ್ಯದಲ್ಲಿ ಸೇತುವೆ ಕಾಮಗಾರಿ ಮುಗಿಯುವ ಸಾಧ್ಯತೆ ಇದೆ.