Advertisement
ಕಾಪುವಿನ ಮೂರು ಮಾರಿಗುಡಿಗಳಲ್ಲಿ ಏಕಕಾಲಕ್ಕೆ ಜರಗಿದ ಸುಗ್ಗಿ ಮಾರಿಪೂಜೆಯಲ್ಲಿ ಎರಡೂವರೆ ಲಕ್ಷಕ್ಕೂ ಅಧಿಕ ಸಂಖ್ಯೆಯ ಭಕ್ತರು ಭಾಗವಹಿಸಿ ಮಾರಿಯಮ್ಮ ದೇವಿಯ ದರ್ಶನ ಪಡೆದರು. ಮತ್ತು ವಿವಿಧ ಹರಕೆ, ಸೇವೆಗಳನ್ನು ಸಮರ್ಪಿಸಿದರು.
ಗದ್ದಿಗೆಯೇ ಪ್ರಧಾನವಾಗಿರುವ ಕಾಪುವಿನ ಮಾರಿಗುಡಿಗಳಲ್ಲಿ ಸುಗ್ಗಿ ಮಾರಿಪೂಜೆಯ ಸಂದರ್ಭ 50,000ಕ್ಕೂ ಹೆಚ್ಚು ಗದ್ದಿಗೆ ಪೂಜೆ ಸೇವೆ, 20,000ಕ್ಕೂ ಹೆಚ್ಚು ಕುಂಕುಮಾರ್ಚನೆ ಮತ್ತು 20,000ಕ್ಕೂ ಹೆಚ್ಚು ಹೂವಿನ ಪೂಜೆ ಸೇವೆಯನ್ನು ಸಮರ್ಪಿಸಿದರು. ಎರಡೂವರೆ ಲಕ್ಷ ಕೋಳಿ, 700 ಕುರಿ-ಆಡು ಮಾರಾಟ
ಸುಗ್ಗಿ ಮಾರಿಪೂಜೆಯ ಪ್ರಯುಕ್ತ ಕುರಿ, ಆಡು ಮತ್ತು ಕೋಳಿಗಳನ್ನು ಮಾರಾಟ ಮಾಡಲು ಮತ್ತು ರಕ್ತಾಹಾರ ನೀಡಲು ಪ್ರತ್ಯೇಕ ಸ್ಥಳವನ್ನು ನಿಗದಿಪಡಿಸಲಾಗಿತ್ತು. ದಾಖಲೆ ಸಂಖ್ಯೆಧಿಯಲ್ಲಿ 700ಕ್ಕೂ ಅಧಿಕ ಕುರಿ-ಆಡುಗಳು ಮತ್ತು ಎರಡೂವರೆ ಲಕ್ಷಕ್ಕೂ ಅಧಿಕ ಕೋಳಿಗಳು ಮಾರಾಟಗೊಂಡಿವೆ ಎಂದು ಮೂಲಗಳು ತಿಳಿಸಿವೆ.
Related Articles
Advertisement
ಬಿಗಿ ಬಂದೋಬಸ್ತ್ಈ ಬಾರಿಯ ಸುಗ್ಗಿ ಮಾರಿಪೂಜೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಸಿಸಿ ಕೆಮರಾ ಸಹಿತವಾಗಿ ಬಿಗು ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಭಕ್ತರು ಆತಂಕರಹಿತರಾಗಿ ದೇವರ ದರ್ಶನ ಮಾಡುವಂತಾಯಿತು. ಗಮನ ಸೆಳೆದ ಸ್ವತ್ಛತಾ ವ್ಯವಸ್ಥೆ
ಕಾಪು ಸುಗ್ಗಿ ಮಾರಿಪೂಜೆಯ ಸಂದರ್ಭದಲ್ಲಿ ಪುರಸಭೆಯ ಮುಖ್ಯಾಧಿಕಾರಿ ರಾಯಪ್ಪ ಅವರ ನೇತೃತ್ವದಲ್ಲಿ ಸ್ವತ್ಛತೆ ಕಾಪಾಡಲು ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದರಲ್ಲಿ ಯಶಸ್ವಿಯೂ ಆಗಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಅಲ್ಲಲ್ಲಿ ಫಲಕಗಳನ್ನು ಅಳವಡಿಸಲಾಗಿದ್ದು, ಜತೆಗೆ 50ಕ್ಕೂ ಅಧಿಕ ಕಸದ ಡ್ರಮ್‌ಗಳನ್ನೂ ಇರಿಸಲಾಗಿತ್ತು. ಪುರಸಭೆಯ ಮುಖ್ಯಾಧಿಕಾರಿ ರಾಯಪ್ಪ ಅವರ ಈ ಕ್ರಮಕ್ಕೆ ಸಾರ್ವಜನಿಕರಿಂದ ಮತ್ತು ವ್ಯಾಪಾರಸ್ಥರಿಂದ ಶ್ಲಾಘನೆ ವ್ಯಕ್ತವಾಗಿದೆ.