Advertisement

ಮದುವೆ ಸೀಸನ್‌ನಲ್ಲೇ ಕೋವಿಡ್‌ ತಂದ ಸಂಕಷ್ಟ

11:23 AM Jul 09, 2020 | mahesh |

ರಮಲ್ಲಾ: ಕೋವಿಡ್‌ನಿಂದಾಗಿ ಎಷ್ಟೋ ಮದುವೆಗಳು ನಿಂತು ಹೋಗಿವೆ; ಹಲವಾರು ಮದುವೆಗಳು ಬಂಧುವರ್ಗಗಳ ಆಗಮನವೂ ಇಲ್ಲದೆ ನಡೆದಿದೆ. ಇದು ಭಾರತದ ಪರಿಸ್ಥಿತಿ ಮಾತ್ರವಲ್ಲ ಮಧ್ಯಪ್ರಾಚ್ಯದ ಯುದ್ಧಗ್ರಸ್ಥ ಪ್ಯಾಲೆಸ್ತೀನ್‌-ಇಸ್ರೇಲ್‌ ಮಧ್ಯದ ವೆಸ್ಟ್‌ಬ್ಯಾಂಕ್‌ ಪರಿಸ್ಥಿತಿಯೂ ಆಗಿದೆ. ವೆಸ್ಟ್‌ಬ್ಯಾಂಕ್‌ನಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ 4000ಕ್ಕೆ ಏರಿಕೆಯಾಗಿದ್ದು, ಇದರಿಂದ ಮದುವೆಗಳಿಗೆ ಅಡ್ಡಿಯಾಗಿದೆ. ಅಲ್ಲೀಗ ಮದುವೆಗಳ ಸೀಸನ್‌. ಆದರೆ ಮದುವೆಗಳನ್ನು ಮಾಡಲಾಗದೆ ಜನರು ಚಿಂತೆಯಲ್ಲಿದ್ದಾರೆ. ಈವರೆಗೆ ಒಟ್ಟು 15 ಸಾವುಗಳು ಸಂಭವಿಸಿದ್ದು, ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಆತಂಕ ಹೆಚ್ಚಾಗಿದೆ.

Advertisement

ಪ್ಯಾಲೆಸ್ತೀನಿನ ಪ್ರಧಾನಿ ಮೊಹಮ್ಮದ್‌ ಶಾತೆಯ್ನಾ ಅವರು ಕ್ಯಾಬಿನೆಟ್‌ ಸಭೆಯಲ್ಲಿ ತಿಳಿಸಿದ ಪ್ರಕಾರ, ವೆಸ್ಟ್‌ ಬ್ಯಾಂಕ್‌ನ ಶೇ.82ರಷ್ಟು ಪ್ರಕರಣಗಳಿಗೆ ಕಾರಣ ಮದುವೆಗಳು ಮತ್ತು ಅಂತ್ಯಕ್ರಿಯೆಗಳು. ಇಲ್ಲಿ ಕಳೆದ ಮೂರು ತಿಂಗಳಿಂದ ಲಾಕ್‌ಡೌನ್‌ ಇದ್ದರೂ ಸೋಂಕು ಹರಡುತ್ತಲೇ ಇದೆ. ಆದ್ದರಿಂದ ಶುಕ್ರವಾರದಿಂದ ಇಲ್ಲಿ ಐದು ದಿನಗಳ ಕಠಿನ ಲಾಕ್‌ಡೌನ್‌ಗೆ ಪ್ಯಾಲೆಸ್ತೀನ್‌ ಸರಕಾರ ಮುಂದಾಗಿದೆ. ಪ್ಯಾಲೆಸ್ತೀನ್‌ನಲ್ಲಿ ಹೆಬ್ರಾನ್‌ನಲ್ಲಿ ಅತಿ ಹೆಚ್ಚು ಪ್ರಕರಣಗಳು ಕಂಡುಬಂದಿದ್ದು, ಶೇ.75ರಷ್ಟು ಪ್ರಕರಣಗಳು ಇದೇ ನಗರದಲ್ಲಿ ಕಂಡು ಬಂದಿವೆ. ಪ್ಯಾಲೆಸ್ತೀನಿನಲ್ಲಿ ಮದುವೆಗಳು ಎಂದರೆ ಸಾಮಾನ್ಯವಾಗಿ ಬೇಸಗೆಯಲ್ಲಿ ನಡೆಯುತ್ತವೆ. ಸಮುದಾಯದ ದೊಡ್ಡ ಕಾರ್ಯಕ್ರಮ ಇದಾಗಿದ್ದು, ನೂರಾರು ಮಂದಿ ಭಾಗಿಯಾಗುತ್ತಾರೆ. ಭೂರಿ ಭೋಜನ, ನೃತ್ಯ, ತಡರಾತ್ರಿಯವರೆಗೆ ಸಂಗೀತ ಇತ್ಯಾದಿಗಳು ಈ ಮದುವೆಗಳಲ್ಲಿ ಸಾಮಾನ್ಯ. ಮದುವೆಗಳು ಸಾಂಪ್ರದಾಯಿಕ ಕಾರ್ಯಕ್ರಮಗಳಾಗಿದ್ದರೂ, ಈ ಮೊದಲಿನಂತೆ ಬಂಧುವರ್ಗದ ಎಲ್ಲರನ್ನೂ ಸೇರಿಸಿ ಸಂಭ್ರಮ ಪಡುವುದು ಸಾಧ್ಯವಿಲ್ಲವಾಗಿದೆ. 23 ಲಕ್ಷ ಮಂದಿಗೆ ಇಲ್ಲಿ ಕೇವಲ 30 ವೆಂಟಿಲೇಟರ್‌ಗಳು ಲಭ್ಯವಿವೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಎಂದು ಇಲ್ಲಿನ ವ್ಯಕ್ತಿಯೊಬ್ಬರು ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next